Post Office : ಪೋಸ್ಟ್ ಆಫೀಸ್ ಉಳಿತಾಯ ಖಾತೆ ಈ ರೀತಿ ಚೆಕ್ ಮಾಡಿ, ಹಣ ಎಷ್ಟಿದೆ ಎಂದು ತಿಳಿಯಿರಿ!
Post Office Saving Account : ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ(Investment) ಮಾಡಲು ಉಳಿತಾಯ (Savings) ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ.
ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಉಳಿತಾಯ ಮಾಡೋದು ಸಹಜ. ಸರ್ಕಾರಿ (Governament) ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Private Bank) ಖಾತೆಗಳ ಇಲ್ಲವೇ ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಸೌಲಭ್ಯ ಪಡೆಯಬಹುದಾಗಿದೆ. ನೀವೇನಾದರೂ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ತೆರೆಯಲು ಯೋಚಿಸುತ್ತಿದ್ದರೆ, ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಗ್ರಾಹಕರು ಪೋಸ್ಟ್ ಆಫೀಸ್ ಈ ಉಳಿತಾಯ ಖಾತೆಯನ್ನು (Post Office Saving Account) ಆಫ್‌ಲೈನ್(Offline) ಮತ್ತು ಆನ್‌ಲೈನ್‌ನಲ್ಲಿ(Online) ತೆರೆಯಬಹುದಾಗಿದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ (Post Office Saving Account)ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಿದ ಬಳಿಕ ಖಾತೆಯನ್ನು ತೆರೆಯಬಹುದು. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದರಿಂದ ಆಗುವ ಮತ್ತೊಂದು ಪ್ರಯೋಜನವೇನೆಂದರೆ ಈ ಯೋಜನೆಯಲ್ಲಿ ಗಳಿಸಿದ ಬಡ್ಡಿಯು ವಾರ್ಷಿಕ 10,000 ರೂ.ವರೆಗೆ ತೆರಿಗೆ ಮುಕ್ತವಾಗಿರುತ್ತದೆ. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಪ್ರಯೋಜನಗಳನ್ನು ಪಡೆಯಬಹುದು.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ನಿಮ್ಮ ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಂಬಂಧಪಟ್ಟ ಪೋಸ್ಟ್ ಆಫೀಸ್ ಉಳಿತಾಯ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಮೊಬೈಲ್ ನೋಂದಣಿಗಾಗಿ CIF ಸಂಖ್ಯೆ ಮತ್ತು ಜನ್ಮ ದಿನಾಂಕ ಬೇಕಾಗುತ್ತದೆ. ಹೀಗಾಗಿ, ನೀವು ಬ್ಯಾಂಕ್ ಖಾತೆಯನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ 7 ವಿಧದಲ್ಲಿ ಪರಿಶೀಲನೆ ನಡೆಸಬಹುದು. ಹಾಗಾದ್ರೆ, ಆ ವಿಧಗಳು ಯಾವುವು ಎಂಬ ಮಾಹಿತಿ.
SMS ಮೂಲಕ ಸಮತೋಲನವನ್ನು ಪರಿಶೀಲಿಸಿ
ನಿಮ್ಮ ಪೋಸ್ಟ್ ಆಫೀಸ್ ಉಳಿತಾಯ ಇಲ್ಲವೇ ಚಾಲ್ತಿ ಖಾತೆಯ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ರಿಜಿಸ್ಟರ್ ಅನ್ನು ಟೈಪ್ ಮಾಡಿಕೊಂಡು 7738062873 ಗೆ ಕಳುಹಿಸಬೇಕಾಗುತ್ತದೆ. SMS ಸೌಲಭ್ಯದ ಬಳಿಕ ನೀವು ಬ್ಯಾಲೆನ್ಸ್ ಅನ್ನು ಟೈಪ್ ಮಾಡಿಕೊಂಡು 7738062873 ಗೆ ಕಳುಹಿಸುವ ಮೂಲಕ ನಿಮ್ಮ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದು.
ಇ-ಪಾಸ್‌ಬುಕ್ ಸೌಲಭ್ಯ
ಇಂದಿನ ಯುಗದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯಾಗಿ ಬೆರಳ ತುದಿಯಲ್ಲಿಯೇ ಮೊಬೈಲ್ ಮೂಲಕ ಕ್ಷಣ ಮಾತ್ರದಲ್ಲಿ ಬ್ಯಾಂಕ್ ಹಣ ಪಾವತಿ, ಬ್ಯಾಲೆನ್ಸ್ ಚೆಕ್ ಮಾಡುವ ಹೀಗೆ ಅನೇಕ ಸೌಕರ್ಯಗಳು ಲಭ್ಯವಾಗಿದೆ. ಇದಕ್ಕಾಗಿ, ಪೋಸ್ಟ್ ಆಫೀಸ್ ಖಾತೆಯನ್ನು ತೆರೆದು ಬ್ಯಾಲೆನ್ಸ್ , ಸ್ಟೇಟ್‌ಮೆಂಟ್‌ಗಳ ಅಡಿಯಲ್ಲಿ ಸ್ಟೇಟ್‌ಮೆಂಟ್‌ಗಳ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಗೋ ಬಟನ್ ಒತ್ತಬೇಕು. ಹೀಗೆ ನೀವು ನಿಮ್ಮ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು.ಸರ್ಕಾರ ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಿಗಾಗಿ ಇ-ಪಾಸ್‌ಬುಕ್ ಸೌಲಭ್ಯವನ್ನು 2022ರಲ್ಲಿ ಆರಂಭಿಸಿದೆ. ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಈಗಿಲ್ಲ. ಎಲ್ಲಿಂದಲಾದರೂ ತಮ್ಮ ಖಾತೆಯ ವಿವರಗಳನ್ನು ಪಡೆದುಕೊಳ್ಳಬಹುದು.
ಪೋಸ್ಟ್ ಆಫೀಸ್ QR ಕೋಡ್
ಪೋಸ್ಟ್ ಆಫೀಸ್ QR ಕೋಡ್‌ನಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿಕೊಂಡು ಮೊಬೈಲ್ ಸಂಖ್ಯೆಗೆ OTP ನೀಡಬೇಕಾಗಿದ್ದು, ನಂತರ ಅದನ್ನು ಪರಿಶೀಲಿಸಬೇಕು. ಬಳಿಕ OVD ದೃಢೀಕರಣವನ್ನು ಭರ್ತಿ ಮಾಡಿಕೊಂಡು ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ಖಾತೆಯ ಬ್ಯಾಲೆನ್ಸ್ ಅನ್ನು ನೋಡಬಹುದು.
ಮಿಸ್ಡ್ ಕಾಲ್ ಸೇವೆ
ಕೇವಲ ಮಿಸ್ಡ್ ಕಾಲ್ ಕೊಟ್ಟು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡ್ಬೋದು!! ಈ ಬ್ಯಾಂಕಿಂಗ್ ಸೇವೆ ಪಡೆಯಲು ನೀವು ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಫೋನ್‌ನಿಂದ 8424054994 ಅನ್ನು ಡಯಲ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ ಬಳಿಕ, ಮಿನಿ ಸ್ಟೇಟ್‌ಮೆಂಟ್ ಮತ್ತು ಬ್ಯಾಲೆನ್ಸ್ ವಿಚಾರಣೆ ಮಾಡಲು ಈ ನಂಬರ್ ಗೆ 8424054994 ಗೆ ಮಿಸ್ಡ್ ಕಾಲ್ ನೀಡಬಹುದಾಗಿದೆ.
ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ
ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗಿದ್ದು, ಇದಕ್ಕಾಗಿ ನೀವು ವೆಬ್‌ಸೈಟ್‌ನಲ್ಲಿ ಖಾತೆಯನ್ನು ತೆರೆಯಬೇಕು. ಆಗ ನಿಮಗೆ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಲಭ್ಯವಾಗುತ್ತದೆ. DOP ಇ-ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿಕೊಂಡ ಬಳಿಕ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕು. ಈ ಪ್ರಕ್ರಿಯೆಯ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ನಿಮಗೆ OTP ದೊರೆಯುತ್ತದೆ. ಈಗ ಖಾತೆ ಆಯ್ಕೆಯನ್ನು ಆರಿಸಿಕೊಂಡು ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಚೆಕ್ ಮಾಡಬಹುದು.
IPPB ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಪರಿಶೀಲಿಸಿ
IPPB ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ ಬಳಿಕ ಖಾತೆ ಸಂಖ್ಯೆ, ಗ್ರಾಹಕ ID ಸಂಖ್ಯೆ ನಮೂದಿಸಬೇಕಾಗುತ್ತದೆ. ನೋಂದಾಯಿತ ಮೊಬೈಲ್ ಫೋನ್‌ನಲ್ಲಿ OTP ಯನ್ನು ಪಡೆದುಕೊಂಡು OTP ಯನ್ನು ಪರಿಶೀಲಿಸಿದ ನಂತರ ನೋಂದಣಿ ಪ್ರಕ್ರಿಯೆ ಪೂರ್ಣ ಗೊಳ್ಳುತ್ತದೆ. ಆ ಬಳಿಕ ಅಪ್ಲಿಕೇಶನ್‌ಗೆ ಲಾ…