Nalin Kumar Kateel : ಕಾಂಗ್ರೆಸ್ ಟೀಕಿಸೋ ಭರದಲ್ಲಿ ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದ ಕಟೀಲ್! ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಎಲ್ಲೆಡೆ ಭಾರೀ ಆಕ್ರೋಶ!
Nalin Kumar Kateel: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Assembly election)ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳು ಅಬ್ಬರದ ಪ್ರಚಾರವನ್ನು ಕೈಗೊಂಡಿವೆ. ಪ್ರಚಾರ ನಡೆಸುವಂತಹ ಸಂದರ್ಭದಲ್ಲಿ ರಾಜಕೀಯ ನಾಯಕರುಗಳು(Political Leaders)ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಅವರು ತಾವು ಏನು ಮಾತನಾಡುತ್ತೇವೆ, ಯಾವ ಪದಗಳನ್ನು ಬಳಸುತ್ತೇವೆ, ಯಾವ ರೀತಿ ಆರೋಪಗಳನ್ನು ಮಾಡುತ್ತೇವೆ ಎಂಬುದನ್ನು ಸ್ವಲ್ಪವೂ ಯೋಚಿಸದೆ, ಲಂಗು ಲಗಾಮಿಲ್ಲದೆ ಮಾತನಾಡುತ್ತಾರೆ.
ಇದೀಗ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಬಿಜೆಪಿಯ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel) ಕಾಂಗ್ರೆಸಿಗರ (Congress) ಕಿವಿ ಮೇಲೆ ಹೂ ಅಭಿಯಾನವನ್ನು ಟೀಕಿಸುವ ಭರದಲ್ಲಿ ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ಈ ವಿಚಾರವೀಗ ರಾಜ್ಯ ರಾಜಕೀಯದಲ್ಲಿ ಭಾರೀ ವಿರೋಧಕ್ಕೆ ಗುರಿಯಾಗಿದೆ.
ಮಡಿಕೇರಿಯ ವಿರಾಜಪೇಟೆಯಲ್ಲಿ ಕೊಡವ ಭಾಷಿಕರ ಸಮ್ಮೇಳನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ (Congress) ಅವಧಿಯಲ್ಲೇ ಅತಿ ಹೆಚ್ಚು ಗಲಭೆಗಳಾಗಿವೆ. ಅವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕಾಂಗ್ರೆಸ್ನವರು ಜನರ ಕಿವಿಗೆ ಹೂವು ಇಟ್ಟೇ ಬದುಕಿದವರು ಎಂದು ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಿಡಿಕಾರಿದರು. ಕಾಂಗ್ರೆಸ್ ಚೆನ್ನಾಗಿ ಆಡಳಿತ ಮಾಡಿದ್ದರೆ ಭಾರತ ಭಿಕ್ಷುಕರ, ಸಾಲಗಾರರ ರಾಷ್ಟ್ರ ಆಗುತ್ತಿರಲಿಲ್ಲ. ಇಡೀ ದೇಶದ ಜನತೆಯ ಕಿವಿಗೆ ಹೂ ಇಟ್ಟು ಬದುಕಿದ ಕಾಂಗ್ರೆಸ್, ಸ್ವಾತಂತ್ರ್ಯ ನಂತರವೂ ಅದನ್ನೇ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದೆ ಭಾರತ ಸಾಲಗಾರರ ಹಾಗೂ ಮೋಸಗಾರರ ರಾಷ್ಟ್ರವಾಗಿತ್ತು. ಈ ಎಲ್ಲಾ ಅಪವಾದಗಳನ್ನು ತೆಗೆದು ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ನಮ್ಮ ಸರ್ಕಾರ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಹೂವಿಡುವ ಕೆಲಸ ಮಾಡ್ತಿದೆ ವಾಗ್ದಾಳಿ ಮಾಡಿದರು. ಇದೀಗ ನಳೀನ್ ಕುಮಾರ್ ಅವರ ಹೇಳಿಕೆಗೆ ರಾಜ್ಯದಂತ ಟೀಕೆಗಳು ವ್ಯಕ್ತವಾಗುತ್ತಿದೆ. ನಳೀನ್ ಅವರು ಕ್ಷಮೆ ಕೇಳಬೇಕೆಂದು ಹೆಚ್ಚಿನವರು ಆಗ್ರಹಿಸಿದ್ದಾರೆ.
ಇನ್ನು ಕಾಂಗ್ರೆಸಿಗರು ಶಾಶ್ವತವಾಗಿ ಹೂ ಇಟ್ಟುಕೊಳ್ಳುವ ಕೆಲಸ ಮಾಡಬೇಕು. ಇಷ್ಟು ದಿನ ಮಂದಿ ತಲೆಯಲ್ಲಿ ಹೂ ಇಟ್ಟಿದ್ದರು. ಸಿದ್ದರಾಮಯ್ಯ ಮಾತು ತಪ್ಪಿದ ಮಗ ಅಂತಲೂ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ, ಮೈಸೂರಿನಲ್ಲಿ ಬಿಜೆಪಿಯೆ ಭರವಸೆ ಎಂಬ ಪೋಸ್ಟರ್ ಮೇಲೆ ಕಾಂಗ್ರೆಸಿಗರು `ಕಿವಿ ಮೇಲೆ ಹೂ’ ಪೋಸ್ಟರ್(Poster) ಅಂಟಿಸಿದ್ದಾರೆ. ಇನ್ನು, ಡಿಕೆಶಿ ಪ್ರತಿಕ್ರಿಯಿಸಿ, ಜನರ ಕಿವಿಗೆ ಹೂ ಇಡ್ತಿದ್ದಾರೆ ಅಂತ ಅಂತ ನಾವು ಪ್ರಶ್ನೆ ಕೇಳಿದ್ರೆ, ಅವರು ಉತ್ತರ ಕೊಟ್ಟಿಲ್ಲ. ಯಡಿಯೂರಪ್ಪ ನನ್ನ ಕಿವಿಯಿಂದ ಹೂ ತೆಗೆದ್ರು ಅಂತ ಡಿಕೆಶಿ ನಕ್ಕಿದ್ದಾರೆ.