ಸರಕಾರಿ ನೌಕರರು ಯೂಟ್ಯೂಬ್ ಚಾನೆಲ್ ಆರಂಭಿಸುವಂತಿಲ್ಲ – ಸರಕಾರ ಆದೇಶ
YouTube Channel: ಇತ್ತೀಚೆಗಷ್ಟೆ ಕೇರಳದ ವೈದ್ಯರೊಬ್ಬರು ಯೂಟ್ಯೂಬ್ (YouTube Channel ) ಚಾನೆಲ್ ಮೂಲಕ ತಪ್ಪು ಮಾಹಿತಿ ನೀಡಿದ ವಿಚಾರ ವೈರಲ್ ಆಗಿ ಎಲ್ಲೆಡೆ ಸಂಚಲನ ಮೂಡಿಸಿದ್ದು ಮಾತ್ರವಲ್ಲದೆ ಈ ರೀತಿ ಸುಳ್ಳು ಸುದ್ದಿ ಬಿತ್ತರಿಸದಂತೆ ಎಚ್ಚರಿಕೆ ನೀಡಿದೆ.
ತಿರುವನಂತಪುರಂ(ಕೇರಳ) (Kerala): ಸರ್ಕಾರಿ ನೌಕರರು(Government Workers) ವೈಯಕ್ತಿಕ ಯೂಟ್ಯೂಬ್ ಚಾನಲ್ (Personal YouTube Channel) ಆರಂಭಿಸುವಂತಿಲ್ಲ ಎಂದು ಕೇರಳ ಸರ್ಕಾರ ಆದೇಶ ನೀಡಿದೆ. ಈಗಾಗಲೇ, ಕೇಂದ್ರವು ತಪ್ಪು ಸುದ್ದಿ ಹರಡುವ ಸಾಮಾಜಿಕ ಮಾಧ್ಯಮಗಳಿಗೆ ಬ್ರೇಕ್ (Break) ನೀಡುವ ನಿಟ್ಟಿನಲ್ಲಿ ಒಟ್ಟು 110 ಯೂಟ್ಯೂಬ್ ಚಾನಲ್‌ಗಳ ಮೇಲೆ ನಿಷೇಧ ಹೇರಿದೆ. ಕಳೆದ ತಿಂಗಳು ಇದರಲ್ಲಿ ಆರು ಚಾನಲ್‌ಗಳನ್ನು ನಕಲಿ ಸುದ್ದಿಯ ಜೊತೆಗೆ ತಪ್ಪು ಮಾಹಿತಿ ಪ್ರಸಾರ ಮಾಡಿದ ಕಾರಣಕ್ಕಾಗಿ ನಿಷೇಧಿಸಲಾಗಿದೆ. ಇದರ ಜೊತೆಗೆ 45 ವಿಡಿಯೋಗಳು, ನಾಲ್ಕು ಫೇಸ್‌ಬುಕ್ ಖಾತೆಗಳು(Facebook Accounts) ಮೂರು ಇನ್‌ಸ್ಟಾಗ್ರಾಮ್ ಖಾತೆಗಳು(Instagram Accounts) ಐದು ಟ್ವಿಟರ್( Twitter handles) ಹ್ಯಾಂಡಲ್‌ಗಳು ಮತ್ತು ಆರು ವೆಬ್‌ಸೈಟ್‌ಗಳನ್ನು (Websites) ಕೂಡ ನಿಷೇಧಿಸಲಾಗಿದೆ.
ಅಗ್ನಿಶಾಮಕ ರಕ್ಷಣಾ ಸೇವೆ ಸಾಮಾಜಿಕ ಮಾಧ್ಯಮದಲ್ಲಿ ಕಲಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪೋಸ್ಟ್ ಮಾಡಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಗ್ನಿಶಾಮಕ ರಕ್ಷಣಾ ಸೇವೆಗೆ ಅನುಮತಿ ನಿರಾಕರಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನಲ್‌ಗಳನ್ನು ಆದಾಯದ ಮೂಲವಾಗಿ ಹೆಚ್ಚಿನವರು ಬಳಕೆ ಮಾಡುತ್ತಿದ್ದಾರೆ. ಒಂದು ವರ್ಷದ 12 ತಿಂಗಳುಗಳ ಮೂಲಕ ಕನಿಷ್ಠ 1,000 ಜನರು ವ್ಯಕ್ತಿಯೊಬ್ಬನ ಯೂಟ್ಯೂಬ್ ಚಾನಲ್‌ಗೆ ಚಂದಾದಾರರಾಗಿದ್ದಲ್ಲಿ ಅದನ್ನು 4,000 ಗಂಟೆಗಳ ಕಾಲ ವೀಕ್ಷಿಸಿದರೆ, ಚಾನಲ್ ಅನ್ನು ನಡೆಸುವ ವ್ಯಕ್ತಿ ಹೆಚ್ಚು ಆದಾಯ ಗಳಿಸಬಹುದು.ಹೀಗಾಗಿ,ಸೇವಾ ನಿಯಮ ಉಲ್ಲಂಘನೆಯ ಆಧಾರದಲ್ಲಿ ಕೇರಳ ಸರ್ಕಾರ ಈ ಆದೇಶ ಜಾರಿಗೊಳಿಸಿದೆ ಎನ್ನಲಾಗಿದೆ.
ಕೇರಳ ಸರ್ಕಾರದ ಅನುಸಾರ, ಈ ರೀತಿ, ಸರಕಾರಿ ನೌಕರರು ಯೂಟ್ಯೂಬ್ನಿಂದ ಹಣ ಗಳಿಸುವುದು ಸರ್ಕಾರಿ ನೌಕರರ ಸೇವಾ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿದ್ದು, ಹೀಗಾಗಿ ಉದ್ಯೋಗಿಗಳಿಗೆ ವೈಯಕ್ತಿಕ ಯೂಟ್ಯೂಬ್ ಚಾನಲ್ ಪ್ರಾರಂಭಿಸಲು ಆಸ್ಪದ ನೀಡಲಾಗುವುದಿಲ್ಲ ಎಂದು ಕೇರಳ ಸರ್ಕಾರ(Kerala Government )ಸ್ಪಷ್ಟಪಡಿಸಿದೆ. ಸರಕಾರಿ ನೌಕರರು ಯೂಟ್ಯೂಬ್ ಚಾನಲ್‌ಗಳಿಂದ ಹೆಚ್ಚುವರಿ ಆದಾಯ ಗಳಿಸುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ನಿಯಮ ಜಾರಿ ಮಾಡಿದ್ದು, ಫೆಬ್ರವರಿ 3 ರಂದು ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಅನುಸಾರ, ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸುವುದು ಕೇರಳ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು, 1960 ರ ಉಲ್ಲಂಘನೆ ಎಂದು ಪರಿಗಣಿಸಿ ಯೂಟ್ಯೂಬ್ ಚಾನಲ್‌ಗಳನ್ನು(YouTube Channel) ಪ್ರಾರಂಭಿಸಲು ಪ್ರಸ್ತುತ ನಿಯಮಗಳಡಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.