Flipkart : ನಿಮ್ಮ ಹಳೆಯ ಸ್ಮಾರ್ಟ್ಫೋನನ್ನು ಫ್ಲಿಪ್ ಕಾರ್ಟ್ ನಲ್ಲಿ ಈ ಬೆಲೆಗೆ ಮಾರಾಟ ಮಾಡಿ, ಹೇಗೆಂಬ ಸಂಪೂರ್ಣ ವಿವರ ಇಲ್ಲಿದೆ!

Flipkart Sell Back : ಸ್ಮಾರ್ಟ್ ಫೋನ್(smartphone)ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಲೇ ಇದೆ. ಮೊಬೈಲ್​ (mobile )ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ ಸ್ಮಾರ್ಟ್​ಫೊನ್​ಗಳು ಬರುತ್ತಲೇ ಇದೆ. ಹಾಗಿರುವಾಗ ಹಳೆಯ ಸ್ಮಾರ್ಟ್​ಫೋನನ್ನು ಬಳಸಿ ನಿಮಗೆ ಬೋರ್ ಆಗಿದ್ದರೆ ಫ್ಲಿಪ್​ಕಾರ್ಟ್​ ಉತ್ತಮ ಅವಕಾಶ (chance)ಒಂದನ್ನು ನೀಡಿದೆ.

ಹೌದು ಫ್ಲಿಪ್​ಕಾರ್ಟ್​ ಸಂಸ್ಥೆ ಸೆಲ್- ಬ್ಯಾಕ್ ( Flipkart Sell Back) ಎಂಬ ವಿಶೇಷ ಆಯ್ಕೆಯನ್ನು ನೀಡಿದೆ. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಬಹುದು. ಇದರಲ್ಲಿ ಬಹುತೇಕ ಮೊಬೈಲ್​ಗಳು ನಿಮ್ಮ ಬಜೆಟ್ ಬೆಲೆಗೆ ಲಭ್ಯವಿರುವುದರಿಂದ ಅತೀ ಬೇಗನೆ ಸೇಲ್ ಆಗಿ ಬಿಡುತ್ತದೆ. ನಿಮ್ಮ ಹಳೆಯ ಫೋನನ್ನು ಎಷ್ಟು ಬೆಲೆ ಸಿಗುತ್ತೊ ಅಷ್ಟಕ್ಕೆ ಹೊರಗಿನ ರಿಟೈಲ್ ಸ್ಟೋರ್​ಗೆ ಮಾರಾಟ ಮಾಡುವ ಬದಲು ನಿಮ್ಮ ಹಳೆಯ ಮೊಬೈಲ್​ಗೆ (Mobile) ಅರ್ಹವಾದ ಬೆಲೆ ಸಿಗಲು ಸದ್ಯ ನಿಮ್ಮ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart)​ ಮೂಲಕ ಮಾರಾಟ ಮಾಡಬಹುದು. ಇದರಿಂದ ನಿಮಗೆ ಸೇರಬೇಕಾದ ಹಣ ನಿಮ್ಮ ಬ್ಯಾಂಕ್ ಅಕೌಂಟ್​ಗೆ ಸೇರುತ್ತದೆ.

ಮುಖ್ಯವಾಗಿ ಹಳೆಯ ಫೋನ್ ಸೇಲ್ ಮಾಡುವ ಮುನ್ನ ಟ್ವಿಟ್ಟರ್(Twitter), ಫೇಸ್​ಬುಕ್(Facebook), ವಾಟ್ಸ್​ಆ್ಯಪ್(Whatsapp ), ಇನ್​ಸ್ಟಾಗ್ರಾಮ್(Instagram), ಫೋನ್ ಪೇ(phone pay ), ಗೂಗಲ್ ಪೇ (Google pay )ಸೇರಿದಂತೆ ನೀವು ಲಾಗಿನ್ (log in )ಆಗಿರುವ ಆಕೌಂಟ್​ನಿಂದ ಲಾಗ್ ಜೌಟ್(logout)ಮಾಡಿಕೊಳ್ಳಿ. ಅದಲ್ಲದೆ ಮೊಬೈಲ್ ನಲ್ಲಿರುವ ಅಕೌಂಟ್ಸ್(account ), ಫೈಲ್ಸ್(files), ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್​ನಲ್ಲಿ ದೊರೆಯುವ ಒನ್​ಡ್ರೈವ್ ಆ್ಯಪ್ ಬಳಕೆ ಮಾಡಬಹುದು. ಇಲ್ಲವಾದಲ್ಲಿ ನೀವು ಸ್ಮಾರ್ಟ್ ಫೋನ್ ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಸೂಕ್ತ.

ಸದ್ಯ ಫ್ಲಿಪ್​ಕಾರ್ಟ್​ ಮೂಲಕ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್​​ಫೋನ್​ ಸೇಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ:

• ಫ್ಲಿಪ್​ಕಾರ್ಟ್​ ಆ್ಯಪ್ ತೆರೆಯಿರಿ ಮತ್ತು ಕೆಳ ಭಾಗದಲ್ಲಿರವ ಕ್ಯಾಟಗರಿ ಸೆಕ್ಷನ್​ನಲ್ಲಿ ಸೆಲ್​ ಬ್ಯಾಕ್ ಸೆಲೆಕ್ಟ್ ಮಾಡಿ.
• ಈ ಮೇಲಿನ ಆಯ್ಕೆ ಸಿಗಲಿಲ್ಲ ಎಂದಾದರೆ ಸರ್ಚ್​ ಬಾರ್​ನಲ್ಲಿ ಸೆಲ್​ ಬ್ಯಾಕ್ ಸರ್ಚ್​ ಮಾಡಿ ಓಪನ್ ಮಾಡಿರಿ.
• ಇಲ್ಲಿ ಕ್ಯೂಆರ್ ಕೋಡ್ ಆಯ್ಕೆ ಕೂಡ ಇದ್ದು ಸ್ಕ್ಯಾನ್ ಮಾಡುವ ಮೂಲಕ ಮುಂದುವರೆಯಬಹುದು.
• ಈಗ ನೀವು ನಿಮ್ಮ ಮೊಬೈಲ್ ಫೋನ್‌ನ ಬ್ರ್ಯಾಂಡ್, ಮಾಡೆಲ್ ಮತ್ತು IMEI ಸಂಖ್ಯೆಯಂತಹ ಮಾಹಿತಿ ನೀಡಬೇಕು.
• ನಂತರ ನಿಮ್ಮ ನೆಟ್‌ವರ್ಕ್ ಪಾಲುದಾರರಿಂದ ಫೋನ್‌ಗೆ ಎಷ್ಟು ಬೆಲೆ ಎಂಬ ಮಾಹಿತಿ ಕಾಣಿಸುತ್ತದೆ.
• ಅಲ್ಲಿ ನೀಡಿರುವ ಬೆಲೆ ನಿಮಗೆ ಒಪ್ಪಿಗೆ ಇದ್ದಲ್ಲಿ 1 ರೂ. ಪಾವತಿಸಿ. ಬಳಿಕ ಮನೆ ಬಾಗಿಲಿಗೆ ಬಂದು ಪಿಕ್ ಅಪ್ ಮಾಡುತ್ತಾರೆ.
• ಈ ಆರ್ಡರ್ ಖಚಿತವಾಯಿತು ಎಂದಾದರೆ 48 ಗಂಟೆಗಳ ಒಳಗೆ ಮೊಬೈಲ್ ಪಡೆದುಕೊಳ್ಳಲು ನಿಮ್ಮ ಮನೆಗೆ ಬರುತ್ತಾರೆ.
• ನಿಮ್ಮ ಮೊಬೈಲ್ ಕಂಪನಿಯವರು ಮನೆಗೆ ಬಂದು ಮೊಬೈಲ್ ಪರಿಶೀಲಿಸಿ ಅಂತಿಮ ಬೆಲೆಯನ್ನು ಹೇಳುತ್ತಾರೆ. ಈ ಬೆಲೆ ನಿಮಗೆ ಇಷ್ಟವಾದರೆ ಮುಂದುವರೆಸಬಹುದು.
• ನೀವು ಮುಂದುವರೆಸಿದರೆ 24 ಗಂಟೆಗಳ ಒಳಗೆ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತದೆ.
• ಆರ್ಡರ್ ರದ್ದುಗೊಳಿಸಿದರೆ 1 ರೂ. ಅನ್ನು ನಿಮಗೆ ಪುನಃ ನೀಡಲಾಗುತ್ತದೆ.

ಈ ರೀತಿಯಾಗಿ ಫ್ಲಿಪ್​ಕಾರ್ಟ್​ ಸಂಸ್ಥೆ ಸೆಲ್- ಬ್ಯಾಕ್ ಮೂಲಕ
ನಿಮ್ಮ ಹಳೆಯ ಸ್ಮಾರ್ಟ್​ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಿ, ಉತ್ತಮ ಬೆಲೆ ಪಡೆದು ನಂತರ ನಿಮಗಿಷ್ಟ ಆಗಿರುವ ಸ್ಮಾರ್ಟ್ ಫೋನ್ ನ್ನು ಕೊಂಡುಕೊಳ್ಳಬಹುದಾಗಿದೆ.

Leave A Reply

Your email address will not be published.