Exam Fee Waiver: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​!

Exam Fee Waiver: ಈ ಮೊದಲು ಸ್ಪರ್ಧಾತ್ಮಕ ಪರೀಕ್ಷೆ(exam )ಬರೆಯುವ ವಿದ್ಯಾರ್ಥಿಗಳು (student )ಪಾವತಿಸಿದ ಶುಲ್ಕದ ಮೇಲೆ ಶೇಕಡಾ 18 ಪ್ರತಿಶತ ಜಿಎಸ್‌ಟಿ (GST)ವಿಧಿಸಲಾಗುತ್ತಿತ್ತು. ಇನ್ನುಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ಅವರು ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ.

ಹೌದು ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ನ 49ನೇ ಸಭೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (NTA) ನಡೆಸುವ ಪರೀಕ್ಷೆಗಳ ಮೇಲೆ ಜಿಎಸ್‌ಟಿ ವಿಧಿಸದಿರಲು (Exam Fee Waiver) ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ಮಂಡಳಿಯು ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು, ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಗಳನ್ನು ನಡೆಸುವ ಲೆವಿ ವ್ಯಾಪ್ತಿಯಿಂದ NTA (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ)ಗೆ ವಿನಾಯಿತಿ ನೀಡಲು ಶಿಫಾರಸು ನೀಡಿದೆ. ಇದರಿಂದ ಪರೀಕ್ಷಾ ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಗೆ ಈ ವಿನಾಯಿತಿಯಿಂದ ಪ್ರಯೋಜನ ಆಗಲಿದೆ.

ಈ ವಿನಾಯಿತಿ ಜೊತೆಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪೆನ್ಸಿಲ್ ಮತ್ತು ಶಾರ್ಪನರ್‌ಗಳ ಮೇಲೆ ವಿಧಿಸಲಾಗಿದ್ದ ಜಿಎಸ್‌ಟಿಯನ್ನೂ ಸಹ ಕಡಿತಗೊಳಿಸಲಾಗಿದೆ. ಸದ್ಯ ತೆರಿಗೆಯನ್ನು ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿದೆ ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ತುಂಬಾ ಸಹಾಯವಾಗಲಿದೆ.

ಸದ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ನ 49ನೇ ಸಭೆಯಲ್ಲಿ ಈ ಮೇಲಿನಂತೆ ಜಿಎಸ್‌ಟಿ ಯನ್ನು ಕಡಿತಗೊಳಿಸಲಾಗಿದೆ.

Leave A Reply

Your email address will not be published.