Beauty Tips : ಕೇವಲ 10ರೂ. ನಲ್ಲಿ ಹೆಚ್ಚಿಸಿ ನಿಮ್ಮ ಸೌಂದರ್ಯ ! ಇದರಿಂದ ಮುಖಕ್ಕೆ ಸಿಗುತ್ತೆ ಸೂಪರ್ ಗ್ಲೋ , ಯಾವುದು ಈ ವಸ್ತು?
Beauty Tips : ಸುಂದರವಾಗಿ ಕಾಣೋದು ಯಾರಿಗಿಷ್ಟ ಇಲ್ಲ ಹೇಳಿ. ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಬಗ್ಗೆ ಅತೀವ ಕಾಳಜಿ. ನೋಡಲು ಸುಂದರವಾಗಿ ಕಾಣಬೇಕು ಎಂದು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕದಿಂದ ಕೂಡಿರುವ ವಸ್ತುಗಳನ್ನು ಬಳಸುತ್ತಾರೆ. ಇದರ ಬಳಕೆಯಿಂದ ಮುಖಕ್ಕೆ ಹಾನಿ ಉಂಟಾಗುವುದು ಖಂಡಿತ!!. ಹಾಗಾಗಿ ನಾವು ನಿಮಗೊಂದು ಇಲ್ಲಿ ಬ್ಯೂಟಿ ಟಿಪ್ಸ್ ( Beauty Tips) ನೀಡಿದ್ದೇವೆ. ನಿಮ್ಮ ಮುಖ ಗ್ಲೋ ಆಗಬೇಕು ಅಂದ್ರೆ ಅದಕ್ಕೆ ಈ ಒಂದು ವಸ್ತು ಬಳಸಿ. ಇದರಿಂದ ನೀವು ಪಾರ್ಲರ್ ಗೆ ಹೋಗೋ ಅವಶ್ಯಕತೆಯೇ ಇಲ್ಲ. ಯಾಕಂದ್ರೆ ನೀವು ಈ ವಸ್ತು ಬಳಸಿ ಮನೆಯಲ್ಲೇ ಫೇಸ್ ಪ್ಯಾಕ್ (face pack) ಮಾಡಬಹುದು. ಇದರಿಂದ ನಿಮ್ಮ ಮುಖ ಫಳಫಳ ಹೊಳೆಯುತ್ತದೆ. ಯಾವ ವಸ್ತು? ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ.
ಮುಖದ ನೈಸರ್ಗಿಕವಾಗಿ ಕಾಂತಿಗಾಗಿ ಹಾಲಿನ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಬಹುದು. ಹಾಲಿನ ಪುಡಿಯು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಚರ್ಮದ ಬಣ್ಣವನ್ನು ಸುಧಾರಿಸಲು ಸಹಕಾರಿ. ಹಾಗೇ ಮುಖದ ಕೊಳೆಯನ್ನು ಸ್ವಚ್ಛಗೊಳಿಸುವಲ್ಲಿ ಪಾತ್ರವಹಿಸುತ್ತದೆ. ಅಲ್ಲದೆ, ಹಾಲಿನ ಪುಡಿಯಲ್ಲಿ ನೈಸರ್ಗಿಕವಾಗಿ ತ್ವಚೆಯ ಆರೈಕೆ ಮಾಡಲು ಬೇಕಾಗುವಂತಹ ವಿಟಮಿನ್ ಗಳು, ಪೋಷಕಾಂಶಗಳು ಮತ್ತು ಖನಿಜಾಂಶಗಳು ಅಧಿಕವಾಗಿವೆ. ಹಾಗಾಗಿ ಹಾಲಿನ ಪುಡಿಯಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ಮತ್ತಷ್ಟು ಹೆಚ್ಚಾಗುತ್ತದೆ. ಹಾಲಿನ ಪುಡಿಯ ಜೊತೆಗೆ ಇನ್ನೋಂದಿಷ್ಟು ವಸ್ತು ಬೆರೆಸಿ, ಫೇಸ್ ಪ್ಯಾಕ್ ಮಾಡಲಾಗುತ್ತದೆ. ವಿಧಾನ ಇಲ್ಲಿದೆ ನೋಡಿ.
ನಿಂಬೆ ಮತ್ತು ಹಾಲಿನ ಪುಡಿ ಫೇಸ್ ಪ್ಯಾಕ್ (Facepack) : ಒಂದು ಸಣ್ಣ ಪಾತ್ರೆ ತೆಗೆದುಕೊಳ್ಳಿ, ಅದಕ್ಕೆ ಎರಡು ಚಮಚ ಹಾಲಿನ ಪುಡಿ ಮತ್ತು ಎರಡು ಚಮಚ ನಿಂಬೆರಸ ಹಾಕಿರಿ. ನಂತರ ಈ ಮಿಶ್ರಣಕ್ಕೆ ಎರಡು ಚಮಚ ಮೊಸರು ಸೇರಿಸಿ, ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ, ಆಗ ಈ ಮಿಶ್ರಣ ಪೇಸ್ಟ್ ರೀತಿಯಾಗಿರುತ್ತದೆ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿರಿ. 10 ರಿಂದ 15 ನಿಮಿಷಗಳ ಬಳಿಕ ಮುಖವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ನಂತರ ನೋಡಿ ನಿಮ್ಮ ತ್ವಚೆ ಗ್ಲೋ ಆಗುತ್ತದೆ.
ಜೇನುತುಪ್ಪ ಮತ್ತು ಹಾಲಿನ ಪುಡಿ ಫೇಸ್ ಪ್ಯಾಕ್ : ಒಂದು ಬೌಲ್ ತೆಗೆದುಕೊಳ್ಳಿ, ಅದಕ್ಕೆ ಎರಡು ಚಮಚ ಹಾಲಿನ ಪುಡಿ, ಎರಡು ಚಮಚ ಜೇನುತುಪ್ಪ ಮತ್ತು ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿರಿ. ಫೇಸ್ ಪ್ಯಾಕ್ ಒಣಗಿದ ನಂತರ ಮುಖವನ್ನು ತೊಳೆಯಿರಿ.
ಓಟ್ ಮೀಲ್ ಮತ್ತು ಹಾಲಿನ ಪುಡಿ ಫೇಸ್ ಪ್ಯಾಕ್ : ಒಂದು ಬೌಲ್‌ಗೆ ಎರಡು ಚಮಚ ಹಾಲಿನ ಪುಡಿ, ಒಂದು ಚಮಚ ಓಟ್ ಮೀಲ್ ಮತ್ತು ಎರಡು ಚಮಚ ಕಿತ್ತಳೆ ರಸವನ್ನು ಹಾಕಿರಿ. ನಂತರ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ಈ ಮಿಶ್ರಣ ಪೇಸ್ಟ್ ರೀತಿ ಬದಲಾದ ಮೇಲೆ ಇದನ್ನು ನಿಮ್ಮ ಮುಖಕ್ಕೆ ಹಚ್ಚಿರಿ. ಈ ಪೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ನೈಸರ್ಗಿಕ ಹೊಳಪನ್ನು ಪಡೆಯಬಹುದು. ಅಲ್ಲದೆ, ಇದರಿಂದ ತ್ವಚೆಯ ಕೊಳೆಯೂ ಹೋಗುತ್ತದೆ.
ಕಡಲೆಹಿಟ್ಟು ಮತ್ತು ಹಾಲಿನ ಪುಡಿ ಫೇಸ್ ಪ್ಯಾಕ್ : ಒಂದು ಸಣ್ಣ ಪಾತ್ರೆಗೆ, ಒಂದು ಚಮಚ ಕಡಲೆ ಹಿಟ್ಟು ಹಾಕಿರಿ, ಇದಕ್ಕೆ 2 ಚಮಚ ಹಾಲಿನ ಪುಡಿಯನ್ನು ಸೇರಿಸಿ, ನಂತರ ಸ್ವಲ್ಪ ನೀರನ್ನು ಹಾಕಿರಿ. ಚೆನ್ನಾಗಿ ಮಿಶ್ರಣ ಮಾಡಿ, ಬಳಿಕ ಸ್ವಲಪ ಪ್ರಮಾಣದ ಹನಿ ನಿಂಬೆ ರಸವನ್ನು ಸೇರಿಸಿ, ಇಷ್ಟಾದ ಬಳಿಕ ಈ ಮಿಶ್ರಣದ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿರಿ. 10 ರಿಂದ 15 ನಿಮಿಷಗಳ ನಂತರ ನೀರಿನಿಂದ ಮುಖ ತೊಳೆಯಿರಿ. ಮನೆಯಲ್ಲೇ ಮಾಡಿದ, ನೈಸರ್ಗಿಕ ಫೇಸ್ ಪ್ಯಾಕ್ ನಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಮತ್ತು ಚರ್ಮಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.