ಅಕ್ರಮ ಸಕ್ರಮ : ಸರಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುವ ರೈತರೇ ನಿಮಗೊಂದು ಮುಖ್ಯವಾದ ಮಾಹಿತಿ!
Akrama Sakrama Matter : ಈಗಾಗಲೇ ಸರ್ಕಾರಿ (government)ಜಮೀನುಗಳಲ್ಲಿ (land )ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡಿರುವ ರೈತರು ಮತ್ತು ಸಣ್ಣ ರೈತರು ಜಮೀನುಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಸಕ್ರಮೀಕರಣಕ್ಕಾಗಿ ಬಹಳಷ್ಟು ಅನಧಿಕೃತ ಸಾಗುವಳಿದಾರರು ತಿಳಿವಳಿಕೆಯ ಕೊರತೆಯಿಂದ ಅರ್ಜಿ ಸಲ್ಲಿಸದೆ ಇರುತ್ತಾರೆ.
ಈ ಮೇಲಿನ ಕುರಿತಾಗಿ ರೈತರ ಹಿತದೃಷ್ಟಿಯಿಂದ ಅಕ್ರಮ ಜಮೀನುಗಳನ್ನು ಸಕ್ರಮ ( Akrama Sakrama Matter ) ಗೊಳಿಸಲು ರೈತರು ಮತ್ತು ಸಣ್ಣ ರೈತರಿಗೆ ಮತ್ತೊಂದು ಅವಕಾಶವನ್ನು ನೀಡಲಾಗಿದೆ.
ಹೌದು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai )ಅವರು ಬಜೆಟ್ ಮಂಡನೆ ವೇಳೆಯಲ್ಲಿ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿ ಸಕ್ರಮಗೊಳಿಸಲು ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸದ್ಯ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸುವಂತೆ ದಿನಾಂಕ: 30.05.2023 ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ವೇಳೆಯಲ್ಲಿ ತಿಳಿಸಿದರು.