Airtel : ಏರ್‌ಟೆಲ್ ನೀಡಿದೆ 149 ರೂ. ಹೊಸ ಆಫರ್, 14 OTT ಉಚಿತ !
Airtel Rs.149 Recharge Plan : ಜಿಯೋ (jio )ದೇಶದ ಅತಿದೊಡ್ಡ ಟೆಲಿಕಾಂ (telecom)ಕಂಪೆನಿಯಾಗಿ ಹೊರಹೊಮ್ಮಿದ ನಂತರ ಇತ್ತ ಏರ್‌ಟೆಲ್(Airtel)ಕೂಡ ವಿಭಿನ್ನ ಪ್ರಯೋಜನಗಳ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಇದೀಗ ಬೆಂಗಳೂರು (bengaluru)ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿರುವ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ‘ಏರ್‌ಟೆಲ್’ ಆಗಿದೆ. ಇದರ ಜೊತೆಗೆ ಇದೀಗ ಗ್ರಾಹಕರಿಗೆ ಮತ್ತೊಂದು ವಿಶೇಷ ರೀಚಾರ್ಜ್ (recharge)ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ಟೆಲಿಕಾಂ ಸಂಸ್ಥೆ ಏರ್‌ಟೆಲ್ ಕೇವಲ 149 ರೂ. (Airtel Rs.149 Recharge Plan )ಬೆಲೆಯಲ್ಲಿ 15 ಕ್ಕೂ ಹೆಚ್ಚು OTT ಫ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಒದಗಿಸುವ ವಿಶೇಷ ರೀಚಾರ್ಜ್ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ಈ ಮೊದಲು ಏರ್‌ಟೆಲ್ ರೀಚಾರ್ಜ್ ಯೋಜನೆಗಳಲ್ಲಿ OTT ಫ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಇರಬೇಕೆಂದರೆ ಕನಿಷ್ಟ 399 ರೂ. ರೀಚಾರ್ಜ್ ಯೋಜನೆಗೆ ಚಂದಾದಾರಿಕೆ ಪಡೆಯಬೇಕಿತ್ತು. ಆದರೆ, ಇದೀಗ ಏರ್‌ಟೆಲ್ ಗ್ರಾಹಕರು (customer)ಕೇವಲ 149 ರೂ. ಬೆಲೆಯಲ್ಲಿ 15 ಕ್ಕೂ ಹೆಚ್ಚು OTT ಫ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ಪಡೆಯಲಿದ್ದಾರೆ.
ಏರ್‌ಟೆಲ್ ಪ್ರಕಟಿಸಿರುವ ಈ ಹೊಸ ರೀಚಾರ್ಜ್ ಯೋಜನೆಯು ಹೊಂದಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಏರ್‌ಟೆಲ್ 149 ರೂ. ರೀಚಾರ್ಜ್ ಯೋಜನೆ:
• 149 ರೂ ಬೆಲೆಯ ಹೊಸ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು 30 ದಿನಗಳ ಮಾನ್ಯತೆ ಹೊಂದಿದೆ.
• ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ಒದಗಿಸಲಿದೆ.
• ಈ ಯೋಜನೆಯಲ್ಲಿ ಬಳಕೆದಾರರು Namaflix, HungamaPlay, Docubay, SocialSwag, ShortsTV, Chaupal, SonyLIV, Eros Now, ShemarooME, Hoichoi, Ultra, LionsgatePlay, Epicon, ManoramaMax, Dollywood Play, Divo, Klikk, Kanccha Lannka ಮತ್ತು Raj Digital TV ಫ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ಪಡೆಯಬಹುದಾಗಿದೆ. ಇಷ್ಟೇ ಅಲ್ಲದೇ, ಈ ಯೋಜನೆಗೆ ಚಂದಾದಾರರಾಗುವ ಏರ್‌ಟೆಲ್ ಗ್ರಾಹಕರಿಗೆ 1GB ಡೇಟಾ ದೊರೆಯಲಿದೆ.
ಆದರೆ ಈ ರೀಚಾರ್ಜ್ ಯೋಜನೆಯು ಕೇವಲ ಡೇಟಾ ಆನ್ ಪ್ಯಾಕ್ ಆಗಿದೆ. ಅಂದರೆ, ಬಳಕೆದಾರರು ಸಕ್ರಿಯ ರೀಚಾರ್ಜ್ ಪ್ಯಾಕ್ ಹೊಂದಿದ್ದರೆ ಮಾತ್ರ ಈ ಯೋಜನೆಯೊಂದಿಗೆ ಇದನ್ನು ರೀಚಾರ್ಜ್ ಮಾಡಬಹುದು. ಹಾಗಾಗಿ, ಏರ್‌ಟೆಲ್ ಗ್ರಾಹಕರು ಕೇವಲ OTT ಫ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಪಡೆಯಲು ಮಾತ್ರ ಈ ಯೋಜನೆಯನ್ನು ಆಯ್ದುಕೊಳ್ಳಬಹುದು.
ಇದರೊಂದಿಗೆ ನೀವು ಹೆಚ್ಚುವರಿ ಡೇಟಾ ಹುಡುಕುತ್ತಿದ್ದರೆ, 149 ರೂ. ಪ್ರಿಪೇಯ್ಡ್ ಡೇಟಾ ಆಡ್ ಆನ್ ಪ್ಲಾನ್ ಯೋಜನೆಯಂತೆಯೇ 148 ರೂ. ಯೋಜನೆ ಕೂಡ ಲಭ್ಯವಿದೆ. ಈ ಪ್ರೀಪೇಡ್ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ 15GB ಹೆಚ್ಚುವರಿ ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯು ಸಹ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಆದರೆ, ಮೇಲೆ ತಿಳಿಸಿದ 15 OTT ಫ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರು ಚಾನಲ್ ಅನ್ನು ಮಾತ್ರ ಆಯ್ಕೆ ಮಾಡಬಹುದು. ಅಂದರೆ, ಈ ಯೋಜನೆಯು ಕೇವಲ ಒಂದು OTT ಅಪ್ಲಿಕೇಶನ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ.
ಸದ್ಯ ಗ್ರಾಹಕರು ಯಾವುದೇ ನಿರ್ದಿಷ್ಟ OTT ಚಾನಲ್‌ಗಳನ್ನು ಹುಡುಕುತ್ತಿದ್ದರೆ ಈ ಯೋಜನೆಯು ಒಂದು ಮನರಂಜನಾ ಪ್ರೇರಿತ ರೀಚಾರ್ಜ್ ಯೋಜನೆಯಾಗಿದೆ.