Kantara : ‘ಕಾಂತಾರ’ ದೈವದ ದೃಶ್ಯ ಬಳಸಿ, ಚುನಾವಣಾ ಪ್ರಚಾರಕ್ಕಿಳಿದ ‘ಪ್ರಜಾಕೀಯ’! ವೈರಲ್ ಆದ ವಿಡಿಯೋ ನೋಡಿ ಏನಂದ್ರು ಗೊತ್ತಾ ಜನರು?

Kantara: ರಿಷಬ್ ಶೆಟ್ಟಿ( Rishab shetty) ನಿರ್ದೇಶನದ ಕಾಂತಾರ ಸಿನಿಮಾ ರಿಲೀಸ್ ಆದ ಬಳಿಕ ತುಳುನಾಡಿನ(Tulunadu) ದೈವರಾದನೆ ಎಲ್ಲರಿಗೂ ಪರಿಚಿತವಾಗಿದೆ. ಇದನ್ನು ಅನುಕರಣೆ ಮಾಡುವುದು, ಅನುಸರಿಸುವುದು, ದೈವದಂತೆ ಕಿರುಚುವುದು, ಎಲ್ಲೆಂದರಲ್ಲಿ ದೈವದ ವೇಷ ತೊಟ್ಟು ನರ್ತಿಸುವುದು ಮಾಡುತ್ತಾ ಅದಕ್ಕೆ ಅಪಮಾನವನ್ನು ಉಂಟು ಮಾಡುತ್ತಿದ್ದಾರೆ. ತುಳುನಾಡಿನ ಅನೇಕರು, ದೈವ ಪಾತ್ರಿಗಳು ಇದನ್ನು ವಿರೋಧಿಸಿ ಹೀಗೆಲ್ಲಾ ಮಾಡಬೇಡಿ, ಇದು ನಮ್ಮ ಸಂಸ್ಕೃತಿಯ ಆಚರಣೆ. ಇದನ್ನು ಯಾವುದೇ ರೀತಿಯ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದೆಲ್ಲ ಮನವಿ ಮಾಡಿದ್ದರು. ಆದರೆ ಇದರ ನಡುವೆಯೂ ಈ ದೈವಾರಾಧನೆಯನ್ನು ರಾಜಕೀಯ ಪ್ರಕ್ಷಗಳು ಚುನಾವಣಾ ಜಾಗೃತಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಚುನಾವಣೆಯ ಕಾವು ರಂಗೇರುತ್ತಿದ್ದಂತೆ ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರವನ್ನು ಕೈಗೊಂಡಿವೆ. ಈ ನಡುವೆ ಉಪೇಂದ್ರಅವರ ಪ್ರಜಾಕೀಯ(Prajakeeya) ಪಕ್ಷ ಕೂಡ ಚುನಾವಣೆಯಲ್ಲಿ ಸೆಣೆಸಲು ಸಜ್ಜಾಗಿದೆ. ಆದರೀಗ ಈ ಪಕ್ಷವು ಸೋಶಿಯಲ್​ ಮೀಡಿಯಾದಲ್ಲಿ ‘ಕಾಂತಾರ'(Kantara Movie) ಸಿನಿಮಾದ ದೃಶ್ಯವನ್ನು ಇಟ್ಟುಕೊಂಡು ಚುನಾವಣೆ ಕುರಿತು ಜಾಗೃತಿ ಮೂಡಿಸುವಂತಹ ಒಂದು ಪ್ರಯತ್ನ ಮಾಡಿದೆ. ಇದರೊಂದಿಗೆ ಪ್ರಜಾಕೀಯದ (Prajakeeya) ಪ್ರಚಾರ ಕೂಡ ಆಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ತುಳುನಾಡಿನ ಜನರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂತಾರ(Kantara) ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ದೈವ ನರ್ತಕನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಆರಂಭದಲ್ಲಿ ಕೋಲ ನಡೆಯುವಾಗ ಪಂಜುರ್ಲಿ ದೈವವು ನುಡಿ ಕೊಡುವಂತಹ ಸಂದರ್ಭದಲ್ಲಿ ಗುತ್ತಿನವರಿಗೆ ಇನ್ನೇನಾದರೂ ಪ್ರಶ್ನೆ ಉಳಿದಿದೆಯಾ ಎಂದು ಕೇಳುತ್ತದೆ. ಆಗ ಸಾಹುಕಾರನ ಮಗ ನಮ್ಮ ಪೂರ್ವಿಕರ ಜಾಗವನ್ನು ನಮಗೆ ಹಿಂದಿರುಗಿಸಿ ಕೊಡಬೇಕೆಂದು ದೈವದ ಬಳಿ ಬೇಡಿಕೆ ಇಡುತ್ತಾನೆ. ಆ ಬೇಡಿಕೆಗೆ ದೈವ ಒಪ್ಪದೇ ಇದ್ದಾಗ ತಾನು ಕೋರ್ಟಿಗೆ ಹೋಗುವುದಾಗಿ ಆತ ತಿಳಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ದೈವವು, ‘ಕೋರ್ಟಿಗೆ ಹೋಗ್ತಿ, ಆದರೆ ನಿನ್ನ ತೀರ್ಮಾನ ಮೆಟ್ಟಿಲ ಮೇಲೆ ನಾನು ಮಾಡ್ತೀನಿ’ ಎಂದು ಹೇಳುತ್ತದೆ. ಇದೇ ದೃಶ್ಯವನ್ನು ಈ ಪ್ರಜಾಕೀಯ ಪಕ್ಷವು ತನಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಚುನಾವಣಾ ಜಾಗೃತಿಗೆ ಹಾಗೂ ಪ್ರಚಾರಕ್ಕೆ ಮುಂದಾಗಿದೆ.

ಹೌದು, ಇಲ್ಲಿ ಹಣ, ಸೀರೆ, ಸಾರಾಯಿ ಹಂಚಿ ಮತ ಕೇಳುವುದು ಸರಿಯಲ್ಲ ಎಂಬ ಸಂದೇಶವನ್ನು ದೈವದ ಮೂಲಕ ಹೇಳಿಸಲಾಗಿದೆ. ‘ಸೀರೆ, ಸಾರಾಯಿ, ಹಣವನ್ನು ಈ ಜನರಿಗೆ ಹಂಚುತ್ತೇನೆ. ಅವರ ಮತವನ್ನು ನನಗೆ ಹಾಕಿಸಿಕೊಡಬೇಕು’ ಎಂದು ದೈವದ ಬಳಿ ರಾಜಕೀಯ ನಾಯಕನು ಬೇಡಿಕೆ ಇಡುತ್ತಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ, ‘ಬಹಳ ಒಳ್ಳೆಯ ಪ್ರಾರ್ಥನೆ. ಈ ಊರಿನವರ ಮತವನ್ನು ನಿಮಗೆ ಹಾಕಿಸಿಕೊಡುತ್ತೇನೆ. ಆದರೆ ಇಲ್ಲಿಯವರೆಗೆ ಇವರು ಕಟ್ಟಿದ ತೆರಿಗೆ ಹಣವನ್ನು ಹಿಂದಿರುಗಿಸಿಕೊಡಬಹುದಾ ರಾಜಕೀಯ ನಾಯಕರೇ?’ ಎಂದು ದೈವ ಮರುಪ್ರಶ್ನೆ ಕೇಳುತ್ತದೆ. ದೈವ ಹೇಳಿದ್ದಕ್ಕೆ ಆತ ಒಪ್ಪುವುದಿಲ್ಲ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತೇನೆ ಎಂದು ಅವನು ಹೇಳುತ್ತಾನೆ. ಅದಕ್ಕೆ ಉತ್ತರಿಸುವ ದೈವ, ‘ಸೀರೆ, ಸಾರಾಯಿ ಹಂಚ್ತಿ. ಆದ್ರೆ ಇದರ ತೀರ್ಮಾನವನ್ನು ಮತಗಟ್ಟಲೆಯಲ್ಲಿ ನಾನು ಮಾಡುತ್ತೇನೆ. ಈ ತೆರಿಗೆ ಹಣ ಊರಿನವರದ್ದು. ಅದರ ತೀರ್ಮಾನ ಇವತ್ತಲ್ಲ. ಮುಂದೊಂದು ದಿನ ಪ್ರಜಾಕೀಯ ಬರಬೇಕಾಗುತ್ತದೆ’ ಎಂದು ಹೇಳುವ ರೀತಿಯಲ್ಲಿ ವಿಡಿಯೋ ಎಡಿಟ್​ ಮಾಡಲಾಗಿದೆ.

ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲಾಗುತ್ತಿದ್ದು ಬಗೆ ಬಗೆಯ ಕಮೆಂಟ್ಗಳು ಬರುತ್ತಿದೆ. ಕೆಲವರು ಇದನ್ನು ತುಂಬಾ ಒಳ್ಳೆಯ ಕಾನ್ಸೆಪ್ಟ್ ಎಂದು ಹೊಗಳಿದರೆ ಇನ್ನು ಕೆಲವರು ತುಳುನಾಡಿನ ದೈವಾರಾಧನೆಯನ್ನು ಈ ರೀತಿ ಬಳಸಿಕೊಳ್ಳುವುದು ಉಚಿತವಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅಲ್ಲದೆ ಹಲವರು ಇದರ ಕುರಿತು ಅಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ದೈವರಾದನೆ ಎಂಬುದು ನಮ್ಮ ನಂಬಿಕೆ. ನಮ್ಮ ನಾಡಿನ ಒಂದು ಸಂಸ್ಕೃತಿ ಆಚರಣೆಯಾಗಿದೆ ಇದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಪ್ರಚಾರವನ್ನು ಗಿಟ್ಟಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಇನ್ನು ಕೆಲವರು ಪ್ರಜಾಕೀಯ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

https://www.facebook.com/realhunker1/videos/1564171084103620/

 

Leave A Reply

Your email address will not be published.