RBI-Lockers Rule: ಲಾಕರ್​ನಲ್ಲಿ ದುಡ್ಡಿಟ್ಟಿದ್ರೆ ಈ ರೂಲ್ಸ್ ಬಗ್ಗೆ ತಿಳಿದುಕೊಳ್ಳಿ ! ಆರ್​​ಬಿಐ ಹೊಸ ನಿಯಮ

RBI Locker Rule: ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ. ಇಂದು ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಆರ್ ಬಿಐ ಹೊಸ ಲಾಕರ್ ನಿಯಮ(RBI-Locker Rule) ಜಾರಿಗೆ ತಂದಿದ್ದು, ಒಂದು ವೇಳೆ, ನೀವು ಲಾಕರ್ ನಲ್ಲಿ ದುಡ್ಡು ಇಟ್ಟಿದಲ್ಲಿ ಈ ಮಾಹಿತಿ ಅರಿತಿರುವುದು ಒಳ್ಳೆಯದು.

 

ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಉಳಿತಾಯ ಮಾಡೋದು ಸಹಜ. ಬ್ಯಾಂಕ್(Bank), ಪೋಸ್ಟ್ ಆಫೀಸ್,(Post Office) ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಜೊತೆಗೆ ನಮ್ಮ ಬೆಲೆಬಾಳುವ ವಸ್ತುಗಳನ್ನು, ಆಭರಣಗಳನ್ನು ಲಾಕರ್ (locker) ಮೂಲಕ ಸುಭದ್ರವಾಗಿ ಇಡಬಹುದು. ಹೀಗಾಗಿ ಹೆಚ್ಚಿನವರು ಆಸ್ತಿ ದಾಖಲೆಗಳ ಜೊತೆಗೆ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇಡಲು ಹೆಚ್ಚಿನವರು ಬ್ಯಾಂಕ್ ಲಾಕರ್ ಬಳಕೆ ಮಾಡುತ್ತಾರೆ. ಆರ್ ಬಿಐ ಹೊಸ ನಿಯಮಗಳ ಅನುಸಾರ ಎಲ್ಲಾ ಲಾಕರ್ ಬಳಕೆದಾರರು ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

 

ಒಂದು ವೇಳೆ ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ಹಣ ಕಳ್ಳತನ ಇಲ್ಲವೇ ಬೆಂಕಿಯಿಂದ ಸರಕುಗಳು ಹಾನಿಯಾಗಿ ಬಿಟ್ಟರೆ ಗ್ರಾಹಕರಿಗೆ ನಷ್ಟವಾಗೋದು ಗ್ಯಾರಂಟಿ. ಹೀಗಾಗಿ, RBI ಲಾಕರ್ ಸುರಕ್ಷತೆಗೆ ಸಂಬಂಧಿಸಿದ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಈ ವರ್ಷ ಜನವರಿ 1 ರಿಂದ ನಿಯಮಾವಳಿಗಳು ಜಾರಿಗೆ ಬಂದಿದ್ದು, ಇದರ ಅನುಸಾರ, ಬ್ಯಾಂಕ್ ಆಡಳಿತವು ಲಾಕರ್‌ ನಲ್ಲಿರುವ ಗ್ರಾಹಕರ ವಸ್ತುಗಳಿಗೆ ನೇರ ಹೊಣೆಗಾರರಾಗುತ್ತಾರೆ. ಆದರೆ, ಲಾಕರ್‌ಗಳಲ್ಲಿ ನಗದು ಇಡದಂತೆ ಆರ್‌ಬಿಐ ಗ್ರಾಹಕರಿಗೆ ಸೂಚನೆ ನೀಡಿದೆ. ಆರ್ಬಿಐ ಲಾಕರ್ ನಿಯಮವಾಳಿಗಳ( RBI-Locker Rule)ಅನುಸಾರ, ಎಲ್ಲಾ ಲಾಕರ್ ಬಳಕೆದಾರರು ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿದ್ದು, ಈ ಮಟ್ಟಿಗೆ 200 ರೂ.ಗಳ ಸ್ಟಾಂಪ್ ದಾಖಲೆಗಳನ್ನು ನೋಟರೈಸ್ ಮಾಡಿ ಬ್ಯಾಂಕಿನಲ್ಲಿ ಸಲ್ಲಿಸಬೇಕಾಗುತ್ತದೆ.

 

ಈ ದೆಸೆಯಲ್ಲಿ ಜನವರಿಯಲ್ಲಿಯೇ ಗಡುವಿನ ಅವಧಿ ಮುಗಿದಿದ್ದು, ಕೆಲವು ಬ್ಯಾಂಕ್‌ಗಳು ಗುತ್ತಿಗೆದಾರರಲ್ಲದವರ ಲಾಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಕಿ, ಕಳ್ಳತನ(Theft) ಅಥವಾ ಇನ್ನಿತರ ಕಾರಣಗಳಿಂದ ಮಾಲೀಕರ ನಿರ್ಲಕ್ಷ್ಯ ಧೋರಣೆ ಯಿಂದ ಲಾಕರ್‌ನಲ್ಲಿ ಭದ್ರವಾಗಿ ಇರಿಸಿದ ವಸ್ತುಗಳನ್ನು ಹಾನಿಯಾದರೆ, ಮಾಲೀಕರು ಗ್ರಾಹಕರು ಪಾವತಿಸಿದ ಬಾಡಿಗೆಯ 100 ಪಟ್ಟು ಪರಿಹಾರವನ್ನು ಪಾವತಿ ಮಾಡಬೇಕಾಗುತ್ತದೆ. ಸದ್ಯ, ಗ್ರಾಹಕರು ಸಲ್ಲಿಸಿದ ದೂರಿನ ಅನುಸಾರ, ಆರ್‌ಬಿಐ ಡಿಸೆಂಬರ್ 31ರ ವರೆಗೆ ಗಡುವನ್ನು ವಿಸ್ತರಣೆ ಮಾಡಿದ್ದು, ಬ್ಯಾಂಕ್ ಗಳು ವಶಪಡಿಸಿಕೊಂಡಿರುವ ಗ್ರಾಹಕರ ಲಾಕರ್‌ಗಳನ್ನು ಮರು ಬಳಕೆ ಮಾಡಲು ಅವಕಾಶ ಕಲ್ಪಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

Leave A Reply

Your email address will not be published.