Maha Shivaratri : ರಸ್ತೆಯಲ್ಲಿ ನಿಂತು ಬಿಯರ್‌ ಬಾಟಲಿಯನ್ನು ಶಿವ ಭಕ್ತರಿಗೆ ನೀಡಿದ ವ್ಯಕ್ತಿ ! ಈತನ ಉದ್ದೇಶವೇನು ಗೊತ್ತಾ ?

Maha Shivaratri :  ಶಿವರಾತ್ರಿ (Maha Shivratri) ದಿನ ಎಲ್ಲಾ ಭಕ್ತರು ಭಕ್ತಿಯಿಂದ ಶಿವನನ್ನು ಸ್ಮರಿಸಿ, ದೇವಾಲಯಗಳಿಗೆ (Temple) ತೆರಳುತ್ತಾರೆ. ಎಷ್ಟೋ ಜನರು ಅಂದು ಜಾಗರಣೆಯೂ ಮಾಡುತ್ತಾರೆ. ಶಿವರಾತ್ರಿ ಹಿನ್ನೆಲೆಯಲ್ಲಿ ಕೆಲವು ಕಡೆ ಶಿಬಿರಗಳನ್ನು ಮಾಡಿ, ಭಕ್ತರಿಗೆ ಹಾಲು, ಪಾನಕ ನೀಡುತ್ತಾರೆ. ಅಷ್ಟೇ ಅಲ್ಲ, ಮಂಗಳೂರಿನಲ್ಲಿ (Mangaluru) ಶಿವರಾತ್ರಿ ಪ್ರಯುಕ್ತ ನಿತ್ಯಾನಂದ ಆಶ್ರಮದ ವತಿಯಿಂದ ವರ್ಷಂಪ್ರತಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಕಂದಕ್ ಪ್ರದೇಶದ ಮುಸ್ಲಿಂ ಜಮಾತಿನ ಸದಸ್ಯರು ಸಿಹಿತಿಂಡಿ ಹಾಗೂ ತಂಪು ಪಾನೀಯವನ್ನು ವಿತರಿಸಿದ್ದರು. ಆದರೆ ಇಲ್ಲೊಬ್ಬ ಯುವಕ ಭಕ್ತರಿಗೆ ಬಿಯರ್ ಬಾಟಲಿ ಹಂಚಿ ಪೊಲೀಸರ ಅತಿಥಿಯಾಗಿದ್ದಾನೆ.

ಯುವಕ ಅಲಿಗಢದ ರಾಮ್‌ಘಾಟ್ ರಸ್ತೆಯಲ್ಲಿ ಬಿಯರ್ ಡಬ್ಬಿ ಇಟ್ಟು ರಸ್ತೆಯಲ್ಲಿ ಬರುವ ಭಕ್ತರಿಗೆ ಒಂದೊಂದು ಬಾಟಲ್ ಬಿಯರ್ ಹಂಚುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಕ್ಷಣವೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಯುವಕನನ್ನು ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಅಬಕಾರಿ ಇಲಾಖೆ ಅಂಗಡಿಯ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಠಾಣೆ ಕ್ವಾರ್ಸಿಯಲ್ಲಿ ಬಿಯರ್ (bear) ಹಂಚಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಳಿಯಿದ್ದ ದ್ವಿಚಕ್ರವಾಹನ ಹಾಗೂ 14 ಬಿಯರ್ ಕ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಒ ಸಿವಿಲ್ ಲೈನ್ ಎಸ್ಪಿ ಸಿಂಗ್ , ಶಿವರಾತ್ರಿಯ (Maha Shivaratri) ಹಿನ್ನಲೆ  ಕನ್ವಾರಿಯಾಗಳು ಗಂಗಾಜಲದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಅವರು ಅಲಿಗಢದ ರಾಮಘಾಟ್ ರಸ್ತೆಯ ಮೂಲಕ ಸಂಚರಿಸುತ್ತಾರೆ. ಹಾಗಾಗಿ ಜನರು ತಮ್ಮ ಬೆಳಗಿನ ಉಪಾಹಾರಕ್ಕಾಗಿ ಶಿಬಿರಗಳನ್ನು ಸ್ಥಾಪಿಸಿದ್ದಾರೆ. ಈ ವೇಳೆ ಯುವಕ ಕನ್ವಾರಿಗಳಿಗೆ ಬಿಯರ್ ಕ್ಯಾನ್ ಹಂಚುತ್ತಿರುವ ದೃಶ್ಯ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಿದ್ದೇವೆ ಎಂದು ಹೇಳಿದರು.

Leave A Reply

Your email address will not be published.