7th Pay Commission : ಕೇಂದ್ರ ನೌಕರರಿಗೆ ಹೋಳಿ ಹಬ್ಬಕ್ಕೆ ಸಿಹಿ ಶುಭ ಸುದ್ದಿ!
7th Pay Commission : ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ. ಸುಮಾರು 62 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 48 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಸುದ್ದಿ ಕೇಂದ್ರ ಸರಕಾರಿ ನೌಕರರಿಗೆ ಖುಷಿ ನೀಡಲಿದೆ ಎಂದೇ ಹೇಳಬಹುದು. ಕೇಂದ್ರ ಸರಕಾರ ಡಿಎ ಹೆಚ್ಚಳದ ಕುರಿತು ಮಾಹಿತಿಯನ್ನು ನೀಡುತ್ತಲೇ ಇದೆ.
7th pay commission updates: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿದೆ.ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು. 7ನೇ ವೇತನ ಆಯೋಗದ ಶಿಫಾರಸು(7th pay commission) ಅನುಸಾರ ಕೇಂದ್ರ ಸರಕಾರಿ ನೌಕರರು ತಮ್ಮ ಮುಂದಿನ ಹೋಳಿ ಹಬ್ಬಕ್ಕೂ ಮೊದಲು ಡಿಎ 42 ಪ್ರತಿಶತಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.
ಮಾರ್ಚ್ ತಿಂಗಳ ವೇತನದಲ್ಲಿ ಡಿಎ ಹೆಚ್ಚಳದ ಹಣದ ಜೊತೆಗೆ ಎರಡು ತಿಂಗಳ ಬಾಕಿ ಸಿಗುವ ನಿರೀಕ್ಷೆಯಿದ್ದು, ಇದರ ಜೊತೆಗೆ ಹೋಳಿ ಹಬ್ಬದ ಬಳಿಕ ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶವನ್ನು ಕೂಡ ಏರಿಸುವ ಸಾಧ್ಯತೆಗಳಿವೆ. ಒಂದು ವೇಳೆ, ಫಿಟ್ ಮೆಂಟ್ ಅಂಶದ ಕುರಿತು ಸರ್ಕಾರ ಕ್ರಮ ಕೈಗೊಂಡರೆ ನೌಕರರ ವೇತನದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಸದ್ಯ, ನೌಕರರ ಮೂಲ ವೇತನ 18 ಸಾವಿರ ರೂ. ಫಿಟ್ಮೆಂಟ್ ಅಂಶ ಬದಲಾವಣೆಯ ಬಳಿಕ 26,000 ರೂ.ಗೆ ಹೆಚ್ಚಳವಾಗಲಿದೆ. ಸದ್ಯ, ಫಿಟ್ಮೆಂಟ್ ಅಂಶದ ಪ್ರಕಾರ 2.57 ಪಟ್ಟು ಮತ್ತು 18000 ರೂ ಮೂಲ ವೇತನ, ಇತರ ಭತ್ಯೆಗಳನ್ನು ಹೊರತುಪಡಿಸಿದರೆ, 18,000 X 2.57 = 46260 ರೂ. ಆದರೆ ಅದನ್ನು 3.68ಕ್ಕೆ ಹೆಚ್ಚಿಸಿದರೆ, ಇತರ ಭತ್ಯೆಗಳನ್ನು ಹೊರತುಪಡಿಸಿ, ನೌಕರರ ವೇತನವು 26000 X 3.68 = 95680 ರೂ. ಆಗಲಿದೆ.
ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಏರಿಸಲಾಗುತ್ತದೆ. 2023ರ ಜನವರಿಯಿಂದ ಕೇಂದ್ರ ನೌಕರರಿಗೆ ಹೆಚ್ಚಿದ ಡಿಎ ಪಾವತಿ ಮಾಡಲಾಗುತ್ತದೆ. ಜನವರಿ ಮತ್ತು ಫೆಬ್ರವರಿಯ ಬಾಕಿ ಹಣ ಪಾವತಿ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಎಐಸಿಪಿಐ ಸೂಚ್ಯಂಕ ಡಿಸೆಂಬರ್ನಲ್ಲಿ 132.3 ಪಾಯಿಂಟ್ಗಳಿಗೆ ಇಳಿಕೆ ಕಂಡಿದ್ದು, ಸರ್ಕಾರದಿಂದ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಏರಿಕೆ ಮಾಡಿದಲ್ಲಿ 18000 ರೂ ಮೂಲ ವೇತನದಲ್ಲಿ 7560 ರೂ ತುಟ್ಟಿಭತ್ಯೆ ದೊರೆಯಲಿದೆ.
ಪ್ರಸ್ತುತ ವಾರ್ಷಿಕ 9 ಸಾವಿರ ರೂ. ಶೇಕಡಾ 38 ರ ಅನುಸಾರ, ಈ ತುಟ್ಟಿಭತ್ಯೆ 6840 ರೂ. ಆಗಲಿದ್ದು, ವಾರ್ಷಿಕವಾಗಿ ಗಮನಿಸಿದರೆ, ಈ ಹೆಚ್ಚಳವು ಸುಮಾರು 9,000 ರೂ. ಆಗಲಿದ್ದು, ಅದೇ ರೀತಿ, 56,900 ರೂ.ಗಳ ಗರಿಷ್ಠ ಮೂಲ ವೇತನದ ಮೇಲೆ ಡಿಎ ಹೆಚ್ಚಳದ ಅಂಕಿ ಅಂಶವನ್ನು ಗಮನಿಸಿದರೆ, ಇದು ತಿಂಗಳಿಗೆ 2276 ರೂ. (ವರ್ಷಕ್ಕೆ ರೂ. 27,312) ಆಗಲಿದೆ. ಸದ್ಯ, ನೌಕರರು ಮಾಸಿಕ 21622 ರೂ.ಗಳ ತುಟ್ಟಿಭತ್ಯೆಯನ್ನು ಪಡೆಯಲಿದ್ದು, ಇದು ಮಾಸಿಕವಾಗಿ 23898 ರೂ.ಗೆ ಏರಿಕೆ ಕಂಡುಬರಲಿದೆ.