Future Career: ಈ ಕೆಲಸಗಳ ಬೇಡಿಕೆ ಯಾವತ್ತೂ ಕಡಿಮೆಯಾಗುವುದಿಲ್ಲ, ಹಾಗಾಗಿ ಈ ಉದ್ಯೋಗ ಯಾವತ್ತಿಗೂ ಬೆಸ್ಟ್‌!

Future Career: ಇಂದಿನ ಕಾಲದಲ್ಲಿ ಉದ್ಯೋಗ (Job) ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉದ್ಯೋಗದ ( Future Career) ವಿಷಯದಲ್ಲಿ ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು ಇವುಗಳ ಕುರಿತಂತೆ ಮಾಹಿತಿ ಎಷ್ಟೋ ಮಂದಿಗೆ ತಿಳಿದಿಲ್ಲ.

ವ್ಯಾಸಂಗ ಮುಗಿಯುತ್ತಿದ್ದಂತೆ ತಮ್ಮ ವಿದ್ಯಾರ್ಹತೆ(education) ಹಾಗೂ ತಮಗೆ ಆಸಕ್ತಿ(interest) ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಸಹಜ. ಅದೇ ಕಾಮರ್ಸ್ ನವರು ಅಕೌಂಟ್ಸ್, ಬ್ಯಾಂಕ್ ಹುದ್ದೆಗಳ ಕಡೆ ಗಮನ ಹರಿಸಿದರೆ, ಇಂಜಿನಿಯರಿಂಗ್ ಮಾಡಿದವರು ತಮ್ಮದೇ ಫೀಲ್ಡ್ ನ ಕೆಲ್ಸ ( Career)  ನೆಚ್ಚಿಕೊಳ್ಳೋದು ಸಹಜ. ಅದೇ ರೀತಿ, ಮಾರುಕಟ್ಟೆಯಲ್ಲಿ ಕೆಲ ಉದ್ಯೋಗಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಅನ್ನೋ ವಿಚಾರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಹಾಗಿದ್ರೆ, ಯಾವುದೆಲ್ಲ ಉದ್ಯೋಗಗಳಿಗೆ ಬೇಡಿಕೆ ಇದೆ. ಅದಕ್ಕೆ ಬೇಕಾದ ವಿದ್ಯಾರ್ಹತೆ  ಹಾಗೂ ದೊರೆಯುವ ವೇತನದ ಬಗ್ಗೆ ಮಾಹಿತಿ ತಿಳಿದುಕೊಂಡರೆ ಒಳ್ಳೆಯದು. ಅಷ್ಟೇ ಅಲ್ಲದೆ, ನೀವು ನಿರುದ್ಯೋಗಿಗಳಾಗಿದ್ದು, ಉದ್ಯೋಗವನ್ನು ಅರಸುತ್ತಾ ಯಾವುದೆಲ್ಲ ಉದ್ಯೋಗ ಅವಕಾಶಗಳಿವೆ (employment opportunities)ಎಂಬ ಗೊಂದಲಗಳಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಬಹುದು.

ತಂತ್ರಜ್ಞಾನ ವಲಯ(technology field)

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಈಗ ಬೆರಳ ತುದಿಯಲ್ಲಿಯೇ ಆನ್ಲೈನ್ ಪೇಮೆಂಟ್ ಹಣ ಪಾವತಿ, ಹಿಂಪಡೆಯುವ ಹೆಚ್ಚಿನ ಎಲ್ಲ ಸೌಲಭ್ಯಗಳು ಲಭ್ಯವಾಗುತ್ತಿವೆ. ಹೀಗಿರುವಾಗ ನಮ್ಮೆಲ್ಲ ಕೆಲಸ ಕಾರ್ಯಗಳಿಗೆ ತಂತ್ರಜ್ಞಾನ ಮೊಬೈಲ್, ಸಿಸ್ಟಮ್  ಇನ್ನಿತರ ಉಪಕರಣ ಅವಶ್ಯಕವಾಗಿದೆ. ಇದರಿಂದ  ಮಾಹಿತಿ ತಂತ್ರಜ್ಞಾನದಲ್ಲಿ ವಿಭಿನ್ನ ಆವಿಷ್ಕಾರ ಅನ್ವೇಷಣೆ ನಡೆಯುತ್ತಿರುವ ಹಿನ್ನೆಲೆ  ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಅಷ್ಟೇ ಅಲ್ಲದೆ, ಮುಂದಿನ ದಶಕದಲ್ಲಿಯು ಕೂಡ ನಿರೀಕ್ಷಿತ ಉದ್ಯೋಗ ಬೆಳವಣಿಗೆಯ ದೃಷ್ಟಿಯನ್ನು ಗಮನದಲ್ಲಿದಿರಿಸಿಕೊಂಡು ನೋಡಿದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಕಂಡು ಮೊದಲ ಸ್ಥಾನವನ್ನು ಕಾಯ್ದುಕೊಳ್ಳೋದು ನಿಶ್ಚಿತ ಎಂಬುದು ಬಲ್ಲವರ ಎಣಿಕೆಯಾಗಿದೆ. ಇದರಲ್ಲಿಯೂ ಹೆಚ್ಚಿನ ಬೇಡಿಕೆಯಿರುವ ವೃತ್ತಿ ಕೌಶಲ್ಯ ಯಾವುದು ಎಂದು ನೀವು ಪ್ರಶ್ನಿಸಿದರೆ, ಸಿಸ್ಟಮ್ಸ್ ಎಂಜಿನಿಯರ್‌ (System engineer) ಎನ್ನಬಹುದು. ಹಾಗಿದ್ರೆ, ಸಿಸ್ಟಮ್ಸ್ ಎಂಜಿನಿಯರ್ ಆಗಲು ಬೇಕಾದ ಅರ್ಹತೆ ಏನಪ್ಪಾ?  ನೀವು  ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕಾಗುತ್ತದೆ. ಸಿಸ್ಟಮ್ಸ್ ಇಂಜಿನಿಯರ್‌ ಗಳಿಗೆ ಸರಾಸರಿ ವೇತನವು $87,100 ಆಗಿದ್ದು  ಮುಂದಿನ 10 ವರ್ಷಗಳಲ್ಲಿ ವೃತ್ತಿ ಕ್ಷೇತ್ರವು 45% ರಷ್ಟು ಬೆಳವಣಿಗೆ ಆಗುವ ಸಾಧ್ಯತೆ ದಟ್ಟವಾಗಿದೆ.

ಶಿಕ್ಷಣ ಕ್ಷೇತ್ರ(education field)

ಇಂದಿನ ಕಾಲದಲ್ಲಿ ಶಿಕ್ಷಣ ಅತ್ಯವಶ್ಯಕವಾಗಿದೆ. ಯಾವುದೇ ನೌಕರಿ ಪಡೆಯಬೇಕಾದರು ಕೂಡ ವಿದ್ಯಾರ್ಹತೆ ಪೂರ್ಣಗೊಳಿಸಬೇಕಾಗುತ್ತದೆ. ಅದರಲ್ಲಿಯೂ ನಮ್ಮ ಆಸಕ್ತಿಗೆ ಅನುಸಾರ ವಿದ್ಯಾರ್ಹತೆ ಪೂರ್ಣಗೊಳಿಸಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಅದರಲ್ಲಿಯೂ ಮಕ್ಕಳಲ್ಲಿ ಅಕ್ಷರ ಜ್ಞಾನ ತುಂಬಿ ಸನ್ಮಾರ್ಗದಲ್ಲಿ ನಡೆಯಲು ಬೆನ್ನೆಲುಬಾಗಿ ಶಿಕ್ಷಕ(teachers) ಇರಲೇಬೇಕು. ಮಕ್ಕಳ ಭವಿಷ್ಯ(future) ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ.

ಕಾಲೇಜುಗಳು(colleges) ಮತ್ತು ವಿಶ್ವವಿದ್ಯಾಲಯಗಳಲ್ಲಿ(University) ದಾಖಲಾತಿ ಏರಿಕೆ ಕಂಡಂತೆ ಪ್ರಾಧ್ಯಾಪಕರ ಅವಶ್ಯಕತೆ ಕೂಡ ತಲೆದೋರುತ್ತದೆ. ಕಾಲೇಜು ಪ್ರಾಧ್ಯಾಪಕರ(college lectures) ಸರಾಸರಿ ವೇತನವು $70,400  ಆಗಿದ್ದು, 10-ವರ್ಷಗಳ ನಂತರ ಬೆಳವಣಿಗೆಯ ದರವು 23% ರಷ್ಟು ಆಗಬಹುದು ಎಂಬುದು ಬಲ್ಲವರ ಅಭಿಪ್ರಾಯವಾಗಿದೆ.

ಅರಿವಳಿಕೆ ತಜ್ಞ: (Anesthetist)

ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೂ ಕೂಡ ಮೊದಲು ನಾವು ಭೇಟಿಯಾಗೋದು ವೈದ್ಯರನ್ನು(doctors) ಎಂದರೆ ತಪ್ಪಾಗದು. ಆರೋಗ್ಯ ಸಮಸ್ಯೆ ಎದುರಾದಾಗ ಪರಿಹಾರ ನೀಡುವ ವೈದ್ಯರಲ್ಲಿ ಕೂಡ ಹೆಚ್ಚಿನ ಬೇಡಿಕೆ ಯಾರಿಗೆ? ಎಂಬ ಪ್ರಶ್ನೆ ನಿಮಗೆ ಕಾಡಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಪ್ರಮಾಣೀಕೃತ ನರ್ಸ್ ಅರಿವಳಿಕೆ ತಜ್ಞರು (CRNA)ಸಾಮಾನ್ಯ ವೈದ್ಯರಿಗಿಂತ ಹೆಚ್ಚು ಸಂಪಾದನೆ ಮಾಡುವುದಷ್ಟೇ ಅಲ್ಲದೇ ಇವರಿಗೆ ಹೆಚ್ಚಿನ ಬೇಡಿಕೆ ಕೂಡ ಇದೆ. ಹಾಗಿದ್ರೆ ಇದಕ್ಕೆ ಏನು ವಿದ್ಯಾರ್ಹತೆ ಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.ಅರಿವಳಿಕೆ ತಜ್ಞರಾಗಲು CRNAಯು ನೋಂದಾಯಿತ ನರ್ಸ್ ಆಗಿರಬೇಕಾಗಿದ್ದು, ಕನಿಷ್ಠ ಒಂದು ವರ್ಷದ ಪೂರ್ಣ ಸಮಯದ ಶುಶ್ರೂಷಾ ಕಾರ್ಯಾನುಭವ ಇರಬೇಕಾಗುತ್ತದೆ. ಹೆಚ್ಚಿನ CRNA ಗಳು ಅರಿವಳಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಇದಲ್ಲದೇ, ರಾಷ್ಟ್ರೀಯ ಪ್ರಮಾಣೀಕರಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. CNN ಮನಿ ಪ್ರಕಾರ, CRNAಯ ಸರಾಸರಿ ಮೂಲ ವೇತನವು $189,000 ಆಗಿದ್ದು,  ಇದೆ ರೀತಿ,  ಪ್ರಾಥಮಿಕ ಆರೈಕೆ ವೈದ್ಯರ  $173,000ಸರಾಸರಿ ವೇತನವಾಗಿರಲಿದೆ.

ದಂತ ನೈರ್ಮಲ್ಯ ತಜ್ಞ (DENTAL HYGIENIST)

ಹಲ್ಲಿನ ಹುಳುಕು, ಇಲ್ಲವೇ ಹಲ್ಲಿಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆ ಎದುರಾದಾಗ ದಂತ ವೈದ್ಯರನ್ನು (dental clinic) ಸಂಪರ್ಕಿಸಬೇಕಾಗುತ್ತದೆ. ದೇಹದ ಆರೋಗ್ಯ ಕಾಪಾಡುವಂತೆ ಹಲ್ಲಿನ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಹೀಗಾಗಿ, ದಂತ ನೈರ್ಮಲ್ಯ ತಜ್ಞರಿಗೆ ಈಗಲೂ  ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಕೂಡ ಈ ಬೇಡಿಕೆ ಹೀಗೆ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಮುಂದಿನ 10 ವರ್ಷ ಕಳೆದರೂ ಸಹ ಈ ವೃತ್ತಿಯ ಬೇಡಿಕೆ ಕಡಿಮೆಯಾಗುವುದಿಲ್ಲ ಎಂಬುದು ಬಲ್ಲವರ ಎಣಿಕೆಯಾಗಿದೆ.

ಹಣಕಾಸು ಸೇವೆಗಳು: (Financial services)

ನಮ್ಮ ಪ್ರತಿ ಅವಶ್ಯಕತೆಗೆ ಮೂಲ ಹಣ (money)ಅಥವಾ ಆದಾಯ (income) ವಾಗಿದ್ದು, ಎಲ್ಲ ಕ್ಷೇತ್ರದಲ್ಲಿ ಬೇಡಿಕೆ ಇರುವಂತೆ ಸಹಜವಾಗಿ ಹಣಕಾಸು ಸೇವೆಗಳಲ್ಲಿ ಕೂಡ ಬೇಡಿಕೆ ಹೆಚ್ಚಿದೆ. ಯಾವುದೇ ಕಂಪೆನಿಯಾಗಲಿ ಇಲ್ಲವೇ ಹೋಟೆಲ್ ಹೀಗೆ ಇನ್ನಿತರ ಉದ್ಯಮದಲ್ಲಿ ಉಳಿತಾಯ, ಖರ್ಚು, ಟಾಕ್ಸ್ (tax) ವಹಿವಾಟಿನ ಆಗು ಹೋಗುಗಳ ಬಗ್ಗೆ ಗಮನ ಹರಿಸಲು ಅಕೌಂಟೆಂಟ್ಸ್ ಗಳ ಅವಶ್ಯಕತೆ ಹೆಚ್ಚಿವೆ.

ಹಣಕಾಸು ಸೇವೆಗಳ ಉದ್ಯಮದಲ್ಲಿ ನೀವು  ಹೆಚ್ಚಿನ ಲಾಭದಾಯಕ ವೃತ್ತಿಯನ್ನು ಆರಂಭಿಸಬಹುದು. ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ (certified public accountants) (CPAs) ಸರಾಸರಿ $74,200 ಪಡೆಯುತ್ತಾರೆ.

ಮುಂದಿನ 10-ವರ್ಷಗಳಲ್ಲಿ ಈ ಉದ್ಯೋಗ ಬೆಳವಣಿಗೆಯು 18% ಹೆಚ್ಚಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಹೆಚ್ಚಿನ ಕಂಪನಿಗಳು ಪಿಂಚಣಿ ಯೋಜನೆಗಳಿಂದ ದೂರ ಇರುವ ಹಿನ್ನೆಲೆ, ಉದ್ಯೋಗಿಗಳಿಗೆ ನಿವೃತ್ತಿ ಯೋಜನೆಗೆ ನೆರವು ಬೇಕಾಗಿದ್ದು ಹೀಗಾಗಿ ಮುಂದಿನ ದಶಕದಲ್ಲಿ ಹಣಕಾಸು ಸಲಹೆಗಾರರ ಉದ್ಯೋಗ ಬೆಳವಣಿಗೆ 41% ಆಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಆಸಕ್ತರು ಮೇಲೆ ತಿಳಿಸಿದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೆ ಹೆಚ್ಚಿನ ಬೇಡಿಕೆ ಹಾಗೂ ಆದಾಯ ಪಡೆಯಬಹುದು.

Leave A Reply

Your email address will not be published.