ತಮ್ಮ ಓಟ್ ಯಾರಿಗೆ ಎಂದು ಸ್ಪಷ್ಟವಾಗಿ ಮಾತಾಡಿದ್ದಾರೆ ಕ್ಯೂಟ್ ಕ್ಯೂಟ್ ಮುಸ್ಲಿಂ ಹುಡ್ಗೀರು !
ಕರ್ನಾಟಕದ ಉಡುಪಿಯಿಂದ ಆರಂಭವಾದ ಹಿಜಾಬ್ ವಿವಾದ ನಂತರದ ದಿನಗಳಲ್ಲಿ ಇಡೀ ರಾಜ್ಯವನ್ನು, ದೇಶವನ್ನು ವ್ಯಾಪಿಸಿ ಕೊನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಹಿಜಾಬ್ ಬೇಕು, ಹಿಜಾಬ್ ಬೇಡ ಎನ್ನುವ ಹಲವು ವಾದ ವಿವಾದಗಳು ನಡೆದವು. ಯಾರೂ ಸೋಲಲು ರೆಡಿ ಇಲ್ಲದ ಕಾರಣ ಕೋರ್ಟಿನ ಮೆಟ್ಟಲು ಹತ್ತಿತ್ತು ಈ ಪ್ರಕರಣ.
ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಕೂಡ ಹಕ್ಕಾಗಲಿದೆ ಎಂದು ಜಸ್ಟೀಸ್ (Justice Hemant Gupta) ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವದತ್ ಕಾಮತ್, ನಾನು ಕ್ಲೀಷೆ ವಾದಕ್ಕೆ ಬಂದಿಲ್ಲ. ತರಗತಿಗಳಲ್ಲಿ ಯಾರೂ ವಿವಸ್ತ್ರಗೊಳ್ಳುವುದಿಲ್ಲ ಎಂದಿದ್ದರು. ಹಾಗಾದರೆ ಹಿಜಾಬ್ ಧರಿಸಲು ನಿರ್ಬಂಧ ಹೇರಿಲ್ಲ ಕೇವಲ ತರಗತಿಗಳಲ್ಲಿ (Class) ಮಾತ್ರ ನಿಷೇಧಿಸಲಾಗಿದೆ ಎಂದು ಜಸ್ಟೀಸ್ ಹೇಳಿದ್ದರು.
ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ಪ್ರಕರಣ ಮಾ.15ರಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಸರ್ಕಾರದ ಸಮವಸ್ತ್ರ ನೀತಿಯನ್ನು ಎತ್ತಿಹಿಡಿದಿತ್ತು. ಹಿಜಾಬ್ ಧರಿಸುವುದು ಇಸ್ಲಾಮಿನ ಅವಿಭಾಜ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಹೈಕೋರ್ಟ್ ತನ್ನ ತೀರ್ಪನ್ನು ನೀಡಿತ್ತು. ಇದನ್ನು ಮತ್ತೆ ಪ್ರಶ್ನಿಸಿ ಉಡುಪಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ಸೇರಿ ಒಟ್ಟು 24 ಮಂದಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳನ್ನು ನ್ಯಾ. ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತ್ತು.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಆಚರಣೆಯಲ್ಲಿ ಅಗತ್ಯವಾಗಿದೆ ಎಂದು ಮೇಲ್ಮನವಿಯಲ್ಲಿ ಹೇಳಲಾಗಿತ್ತು. ಹಿಜಾಬ್ ವಿವಾದದ ಕುರಿತ ವಾದ ಪ್ರತಿವಾದಗಳನ್ನು ಆಲಿಸಿ ವಿಚಾರಣೆ ಮುಗಿಸಿದ್ದ ಸುಪ್ರೀಂ ಕೋರ್ಟ್ ಕಳೆದ ವರುಷ ಅಕ್ಟೋಬರ್ ತಿಂಗಳಲ್ಲಿ ತೀರ್ಪು ಪ್ರಕಟಿಸಿತ್ತು. ಆಗ ಇಬ್ಬರು ನ್ಯಾಯಮೂರ್ತಿಗಳಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ (Hemant Gupta) ಮತ್ತು ಸುಧಾಂಶು ಧುಲಿಯಾ (Sudhanshu Dhulia) ಅವರು ವಿಭಿನ್ನ ತೀರ್ಪು ನೀಡಿದ್ದರು. ಹಾಗಾಗಿ ಯಾವುದೇ ತಾರ್ಕಿಕ ಅಂತ್ಯ ಕಾಣಲು ವಿಫಲವಾಗಿತ್ತು ಕೋರ್ಟು. ಆಗ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಮೇಲ್ಮನವಿಗಳಿಗೆ ಅನುಮತಿ ಕೂಡಾ ನೀಡಿದ್ದರು.
ಈಗ ಈ ಹಿಜಾಬ್ ವಿವಾದ ಮುಂಬರುವ ಎಲಕ್ಷನ್ ಸಬ್ಜೆಕ್ಟ್ ಆಗಿ ಬದಲಾಗಿದೆ. ಬಿಜೆಪಿ ಪರಿವಾರ ‘ ಬೇಕು ‘ ಎನ್ನುವ ಕಡೆಗಿದ್ದರೆ, ಕಾಂಗ್ರೆಸ್ ಪರಿವಾರ ‘ ಬೇಡ ‘ ಎನ್ನುತ್ತಿದೆ. ಇದು ಚುನಾವಣೆಯ ದೃಷ್ಟಿಯಲ್ಲಿ ಯಾವ ರೀತಿ ಪರಿಣಾಮ ಬೀರಬಹುದು ಎಂಬಾ ಸಬ್ಜೆಕ್ಟ್ ಇಟ್ಟುಕೊಂಡು ಏಷ್ಯನೆಟ್ ಸುವರ್ಣ ಸುದ್ದಿ ವಾಹಿನಿ ಇದೀಗ ಫಸ್ಟ್ ಟೈಮ್ ವೋಟರ್ಸ್ ಎಂಬ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನಡೆಸಿದ್ದು ನಿಮ್ಮ ಒಲವು ಯಾವ ಪಕ್ಷದ ಮೇಲೆ ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಮುಸ್ಲಿಂ ಯವತಿಯರು ಮನಬಿಚ್ಚಿ ಮಾತಾಡಿದ್ದಾರೆ. ಕೆಲವರು ತಮ್ಮ ಒಲವು ಯಾವ ಪಕ್ಷದ ಕಡೆ ಅಂತ ಸೂಕ್ಷ್ಮವಾಗಿ, ಮತ್ತೆ ಕೆಲವರು ತಮ್ಮ ಒಲವು ‘ ಇವರಿಗೇ ‘ ಅಂತ ಸ್ಪಷ್ಟವಾಗಿ ಅರ್ಥ ಆಗುವ ಥರ ಹೇಳಿದ್ದಾರೆ. ಈ ಕ್ಯೂಟ್ ಮುಖದ ಮುಸ್ಲಿಂ ಹುಡ್ಗೀರ ಮಾತು ಕತೆ ವಿಚಾರ ಏನಂದ್ರು ಅಂತ ನೋಡಲು, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.