KPSC : ಕೆಪಿಎಸ್‌ಸಿ ಇಂದ ವಿವಿಧ ಹೆಚ್ಚುವರಿ ಆಯ್ಕೆಪಟ್ಟಿ!

Share the Article

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ವಿವಿಧ ಇಲಾಖೆಗಳ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ವಿವಿಧ ಇಲಾಖೆಯ ಎಂಡಿಆರ್‌ಎಸ್‌ನ ಉರ್ದು ಶಿಕ್ಷಕರು, ಗಣಿತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ನಿಲಯಪಾಲಕರು ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.

 

ಕೆಪಿಎಸ್‌ಸಿ ಯಿಂದ ವಿವಿಧ ಹುದ್ದೆಗಳಿಗೆ ಇಲಾಖೆಯ ಹುದ್ದೆಗೆ ಹೆಚ್ಚುವರಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

 

ಹುದ್ದೆಯ ಇಲಾಖೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ

ಹುದ್ದೆಯ ಹೆಸರು: ಗ್ರಂಥಾಲಯ ಸಹಾಯಕರು

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 17-02-2022 ರಂದು ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇದೀಗ, ಈಗ ಆರ್‌ಪಿಸಿ ವೃಂದಕ್ಕೆ 1 ಅಭ್ಯರ್ಥಿಯ ಹೆಸರನ್ನು ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ.

 

ಹುದ್ದೆಯ ಇಲಾಖೆ: ಆಯುಷ್ ಇಲಾಖೆ

ಹುದ್ದೆ ಹೆಸರು : ಆಯುರ್ವೇದ ಸಹಾಯಕ ಪ್ರಾಧ್ಯಾಪಕರು (ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ)

ಈ ಹುದ್ದೆಗಳಿಗೆ 30-07-2022 ರಂದು ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇದೀಗ ಉಳಿಕೆ ಇರುವಂತಹ ಮೂಲ ವೃಂದಕ್ಕೆ 1, ಹೈ.ಕ ವೃಂದಕ್ಕೆ 1 ಹುದ್ದೆಯಂತೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ.

 

ಹುದ್ದೆಯ ಇಲಾಖೆ : ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು

ಹುದ್ದೆ ಹೆಸರು: ಉರ್ದು ಶಿಕ್ಷಕರು, ಗಣಿತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು(MDRS Physical Education Teachers – Additional List)(MDRS Mathematics Teacher – Additional List)(MDRS Urdu Teachers -Additional Select List)

 

ಹುದ್ದೆಯ ಇಲಾಖೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನವೋದಯ ಮಾದರಿ ವಸತಿ ಶಾಲೆಗಳು

ಹುದ್ದೆ: ದೈಹಿಕ ಶಿಕ್ಷಣ ಶಿಕ್ಷಕರು(MMRS Navodaya Physical Education Teachers – Additional List)

ಮೇಲೆ ತಿಳಿಸಿದ ಹುದ್ದೆಗಳಿಗೆ 19-08-2021 ರಂದು ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ ಆರ್‌ಪಿಸಿ ಕೇಡರ್‌ಗೆ ಹೆಚ್ಚುವರಿಯಾಗಿ 6 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ.

 

ಹುದ್ದೆಯ ಇಲಾಖೆ: ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜುಗಳು.

ಹುದ್ದೆ ಹೆಸರು : ನಿಲಯಪಾಲಕರು

ಈ ಹುದ್ದೆಗಳಿಗೆ 06-08-2021 ರಂದು ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಆರ್‌ಪಿಸಿ ಕೇಡರ್‌ಗೆ 9, ಹೆಚ್‌ಕೆ ಕೇಡರ್‌ಗೆ 3 ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 

ಹುದ್ದೆ ಹೆಸರು: ನಿಲಯಪಾಲಕರು(MDR PU College women Wardens – Additional List): ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ

ಈ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು 06-08-2021 ರಂದು ಬಿಡುಗಡೆ ಮಾಡಲಾಗಿತ್ತು. ಇದೀಗ ಉಳಿಕೆ ಮೂಲ ವೃಂದದ ಮೀಸಲಾತಿ ಅಡಿ 19 ಅಭ್ಯರ್ಥಿಗಳ ಹೆಸರು, ಹೈದರಾಬಾದ್ ಕರ್ನಾಟಕ ವೃಂದಕ್ಕೆ 5 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿದೆ.

Leave A Reply