Bank News : ಗ್ರಾಹಕರೇ ಗಮನಿಸಿ, ಈ 7 ಬ್ಯಾಂಕ್‌ಗಳಿಂದ ನಿಮಗೊಂದು ಮಹತ್ವದ ಮಾಹಿತಿ!

ಇತ್ತೀಚಿಗೆ ಬ್ಯಾಂಕ್‌ಗಳು(bank)ಗ್ರಾಹಕರಿಗೆ ಹೆಚ್ಚಿನ ಹಣ ನೀಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಹೆಚ್ಚಿಸಿರುವುದು ಇದಕ್ಕೆ ಕಾರಣ ಎನ್ನಬಹುದು. ಆರ್‌ಬಿಐ ನೀತಿ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಬ್ಯಾಂಕ್‌ಗಳೂ ಸಾಲದ ದರವನ್ನು ಹೆಚ್ಚಿಸುತ್ತಿವೆ. ಈಗಾಗಲೇ ಹಲವು ಬ್ಯಾಂಕ್‌ಗಳು ಈ ರೀತಿ ಮಾಡುತ್ತಿದೆ. ಸದ್ಯ ಒಂದಾದ ನಂತರ ಒಂದರಂತೆ ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ಶಾಕ್ ನೀಡುತ್ತಿವೆ. ಈಗಾಗಲೇ ಹಣದುಬ್ಬರದಿಂದ ಸಂಕಷ್ಟದಲ್ಲಿರುವ ಜನತೆ ಬ್ಯಾಂಕ್​ಗಳು ಶುಲ್ಕ ಏರಿಕೆಯ ಹೊಡೆತವನ್ನು ನೀಡುತ್ತಿವೆ.

ಸಾಲದ ಮೇಲಿನ ಬಡ್ಡಿದರ, ಕ್ರೆಡಿಟ್ ಕಾರ್ಡ್ ಶುಲ್ಕ ಹೀಗೆ ತಮ್ಮ ಎಲ್ಲಾ ಸೇವೆಗಳ ಮೇಲಿನ ಶುಲ್ಕವನ್ನು ಬ್ಯಾಂಕ್​ಗಳು ಹೆಚ್ಚಳ ಮಾಡಲು ಆರಂಭಿಸಿವೆ. ದೇಶದ ಪ್ರಮುಖ ಬ್ಯಾಂಕ್​ ಆಗಿರುವ ಎಸ್​ಬಿಐ (state bank of india ) ಸಹ ತನ್ನ ಸಾಲದ ದರವನ್ನು ಹೆಚ್ಚಳ ಮಾಡಿದೆ. ಫೆಬ್ರವರಿ 15ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರವನ್ನು (MCLR) 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ ಎಂದು ಮಾಹಿತಿ ದೊರೆತಿದೆ.

ಒಂದೇ ರಾತ್ರಿ ಎಂಸಿಎಲ್​ಆರ್​ ಶೇ.7.5ಕ್ಕೆ ತಲುಪಿತ್ತು. ಒಂದು ತಿಂಗಳ ಎಂಸಿಎಲ್‌ಆರ್ ಮತ್ತು ಆರು ತಿಂಗಳ ಎಂಸಿಎಲ್‌ಆರ್ ಶೇ 8.1ಕ್ಕೆ ಏರಿಕೆಯಾಗಿದೆ. ವಾರ್ಷಿಕ ಎಂಸಿಎಲ್‌ಆರ್ ದರ ಶೇ.8.5ಕ್ಕೆ ತಲುಪಿದೆ. ಎರಡು ವರ್ಷದ ಎಂಸಿಎಲ್‌ಆರ್ ಶೇಕಡ 8.6ಕ್ಕೆ ಮತ್ತು ಮೂರು ವರ್ಷದ ಎಂಸಿಎಲ್‌ಆರ್ ಶೇಕಡ 8.7ಕ್ಕೆ ಏರಿಕೆಯಾಗಿದೆ.

ಯುಕೋ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಸಾಲದ ದರವನ್ನು ಹೆಚ್ಚಿಸಿದೆ. ಮತ್ತೊಂದು ಸಾರ್ವಜನಿಕ ವಲಯದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಸಾಲದ ದರದಲ್ಲಿ ಹೆಚ್ಚಳವನ್ನು ಘೋಷಿಸಿದೆ.

ಯೂನಿಯನ್ ಬ್ಯಾಂಕ್ ಆಫ್​ ಇಂಡಿಯಾ 25 ಬೇಸಿಸ್ ಪಾಯಿಂಟ್​​ ಎಂಸಿಎಲ್​ಆರ್ ದರ ಹೆಚ್ಚಿಸಿದೆ. ಈ ದರಗಳು ಫೆಬ್ರವರಿ 11 ರಿಂದಲೇ ಜಾರಿಗೆ ಬಂದಿದ್ದು, ಸದ್ಯ ಬ್ಯಾಂಕ್​ನ ಎಂಸಿಎಲ್​ಆರ್ ದರ ಶೇ.8.65ರಷ್ಟಿದೆ.

ಬ್ಯಾಂಕ್ ಆಫ್ ಬರೋಡಾ ಕೂಡ ಎಂಸಿಎಲ್ಆರ್ ದರ 5 ಬೇಸಿಸ್ ಪಾಯಿಂಟ್ ಏರಿಕೆಯಾಗಿದೆ. ಫೆಬ್ರವರಿ 12ರಿಂದ ಹೊಸ ದರ ಜಾರಿಗೆ ಬಂದಿದ್ದು, ಸದ್ಯ ಎಂಸಿಎಲ್​ಆರ್ ದರ ಶೇ.8.55ಕ್ಕೆ ಏರಿಕೆಯಾಗಿದೆ.

ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಹ ಸಾಲದ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಬ್ಯಾಂಕ್ ಎಂಸಿಎಲ್‌ಆರ್ ದರವನ್ನು 15 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದರೊಂದಿಗೆ ಬ್ಯಾಂಕ್ ನ ವಾರ್ಷಿಕ ಎಂಸಿಎಲ್ ಆರ್ ದರ ಶೇ.8.45ಕ್ಕೆ ಏರಿಕೆಯಾಗಿದೆ.

ಸದ್ಯ ರೆಪೋ ದರ ಶೇ.6.5ಕ್ಕೆ ತಲುಪಿದೆ. ಕಳೆದ ವರ್ಷ ಮೇ ತಿಂಗಳಿನಿಂದ ರೆಪೋ ದರವು 250 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ. ಆದ್ದರಿಂದ ಹಣದುಬ್ಬರ ತಡೆಯಲು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ.

ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿರುವುದರಿಂದ ಸಾಲದ ದರವನ್ನೂ ಹೆಚ್ಚಿಸಿದೆ. ಇದು ಬ್ಯಾಂಕಿನಿಂದ ಸಾಲ ಪಡೆದವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಾಸಿಕ EMI ಮೇಲಕ್ಕೆ ಚಲಿಸುವ ಸಾಧ್ಯತೆಯಿದೆ. ಅವರು ಹೊಸ ಸಾಲ ಪಡೆಯಲು ಬಯಸಿದರೆ, ನಂತರ ಅವರ ಮೇಲಿನ ಬಡ್ಡಿಯ ಹೊರೆ ಹೆಚ್ಚಾಗುತ್ತದೆ. ಏಕೆಂದರೆ ಸಾಲದ ಮೇಲಿನ ಬಡ್ಡಿದರಗಳು ಹೆಚ್ಚಾಗುತ್ತವೆ. ಇದರಿಂದಾಗಿ ಸಾಲದ ದರ ಹೆಚ್ಚಾದರೆ ಸಾಲಗಾರರ ಮೇಲೆ ಪರಿಣಾಮ ಬೀರುತ್ತದೆ.

Leave A Reply

Your email address will not be published.