Personality Development :ವ್ಯಕ್ತಿತ್ವ ವಿಕಸನದಲ್ಲಿ SWOT ಪಾತ್ರವೇನು? ಇದು ಮಕ್ಕಳಿಗೆ ಮಾತ್ರವಲ್ಲ ವಯಸ್ಕರಿಗೂ ಇದು ಮುಖ್ಯ!
ಯಶಸ್ಸನ್ನು ಇಂದಿನ ಕಾಲದಲ್ಲಿ ಎಲ್ಲರೂ ಪಡೆಯಲು ಬಯಸುತ್ತಾರೆ. ಆದರೆ ಈ ಯಶಸ್ಸನ್ನು ಪಡೆಯಲು ಸತತ ಪ್ರಯತ್ನದ ಅಗತ್ಯತೆ ಯಾವಾಗಲೂ ಇರಬೇಕು. ಅಂದ ಹಾಗೇ ಈ ಯಶಸ್ಸನ್ನು ಪಡೆಯುವ ಓಟದಲ್ಲಿ ಪ್ರಮುಖ ಪಾತ್ರ ವಹಿಸುವುದೇ ನಮ್ಮ ವ್ಯಕ್ತಿತ್ವ. ನಮ್ಮ ಸನ್ನೆಗಳು, ಭಂಗಿಗಳು ಕೂಡಾ ನಮ್ಮ ವ್ಯಕ್ತಿತ್ವದ ಕುರಿತು ಹೇಳುತ್ತದೆ. ಇವೆರಡನ್ನು ಹೊರತು ಪಡಿಸಿದರೆ ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅನೇಕ ಅಂಶಗಳು ಕೂಡಾ ಬೇಕು. ಅವುಗಳಲ್ಲಿ ಒಂದು SWOT ಎಂಬುವುದು. ಇದರ ಬಗ್ಗೆ ಇಲ್ಲಿ ವಿಶ್ಲೇಷಣೆ ಮಾಡೋಣ ಬನ್ನಿ. ಇದರ ಬಗ್ಗೆ ಎಲ್ಲರಿಗೂ ತುಂಬಾನೇ ಕಡಿಮೆ ಜನರಿಗೆ ತಿಳಿದಿದೆ. ಆದರೆ ಇದೊಂದು ಉಪಯುಕ್ತ ವಿಷಯ.
1960 ರ ದಶಕದಲ್ಲಿ SWOT ವಿಶ್ಲೇಷಣೆ ಎಂಬ ಪದವನ್ನು ಆಲ್ಬರ್ಟ್ ಹಂಫ್ರೆ ಎಂಬುವರು ಪ್ರತಿಪಾದಿಸಿದರು. ಇದು ಒಂದು ಸಿದ್ಧಾಂತವಾಗಿದೆ. ಯಾವುದನ್ನು ತಿಳಿದುಕೊಳ್ಳುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ವಿಭಿನ್ನ ರೀತಿಯ ಬದಲಾವಣೆಯನ್ನು ನೀವು ಕಾಣಬಹುದು ಎಂಬುವುದಕ್ಕೆ, ವ್ಯಕ್ತಿತ್ವ ವಿಕಸನಕ್ಕೆ SWOT ವಿಶ್ಲೇಷಣೆ ಬಹಳ ಮುಖ್ಯ.
SWOT ವಿಶ್ಲೇಷಣೆಯನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ. S – ಸಾಮರ್ಥ್ಯ, W – ದೌರ್ಬಲ್ಯ, O – ಅವಕಾಶಗಳು ಮತ್ತು T – ಬೆದರಿಕೆ. ನೀವು ಮತ್ತೆ ಮತ್ತೆ ವಿಫಲರಾಗುತ್ತಿದ್ದರೆ, ಖಂಡಿತವಾಗಿಯೂ ಈ ವಿಶ್ಲೇಷಣೆಯನ್ನು ಮಾಡಿ.
ಮೊದಲನೆಯದಾಗಿ, ಖಾಲಿ ಕಾಗದದ ಮೇಲೆ ನಿಮ್ಮ ಸಾಮರ್ಥ್ಯದ ಬಗ್ಗೆ ಬರೆಯಿರಿ. ಅದರ ನಂತರ ನಿಮ್ಮ ದೌರ್ಬಲ್ಯದ ಬಗ್ಗೆ ಬರೆಯಲು ಹಿಂಜರಿಯಬೇಡಿ. ನಂತರ ಅವಕಾಶಗಳ ಬಗ್ಗೆ ಬರೆಯಿರಿ. ಕೊನೆಯಲ್ಲಿ, ನೀವು ಬೆದರಿಕೆಯ ಬಗ್ಗೆ ಬರೆಯುತ್ತೀರಿ, ಅಂದರೆ ನಿಮ್ಮ ಭಯ.
ಇದನ್ನು ಮಾಡುವುದರಿಂದ ನಿಮ್ಮ ದೌರ್ಬಲ್ಯಗಳು ಮತ್ತು ಭಯಗಳ ಬಗ್ಗೆ ನಿಮಗೆ ತಿಳಿಯುವುದು ಮಾತ್ರವಲ್ಲದೆ ನಿಮ್ಮ ಆಂತರಿಕ ಶಕ್ತಿಯನ್ನು ಸಹ ನೀವು ಗುರುತಿಸುತ್ತೀರಿ. ನಿಮ್ಮ ಬಗ್ಗೆ ನಿಮಗೆ ತಿಳಿದಾಗ ಮಾತ್ರ ನಿಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ವಿದ್ಯಾರ್ಥಿಗಳಿಂದ ಹಿಡಿದು ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುವ ಜನರು ಸಹ ಈ ವಿಶ್ಲೇಷಣೆಯನ್ನು ಮಾಡಬಹುದು. ಈ ವಿಶ್ಲೇಷಣೆಯನ್ನು ನೀವು ಬರೆದು ಮಾಡುವುದರಿಂದ ಅದರಿಂದ ಹೇಗೆ ಬದಲಾವಣೆ ತರಬಹುದು ಎಂಬುವುದನ್ನು ಕಂಡು ಹಿಡಿಯಬಹುದು.