Paytm : ಪೇಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ!

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಬಳಕೆದಾರರಿಗೆ ಹೊಸ ಸೇವೆಗಳನ್ನು ಪರಿಚಯಿಸಿದೆ. ಈ ಹೊಸ ಸೇವೆ ಎಲ್ಲಾ ಬಳಕೆದಾರರಿಗೆ ವ್ಯವಹಾರವನ್ನು ಮತ್ತಷ್ಟು ಸರಳೀಕರಣ ಮಾಡುತ್ತಿದೆ. ಈ ಹೊಸ ಸೇವೆಯಿಂದ ಹಣ ವರ್ಗಾವಣೆ ಸುಲಭವಾಗಲಿದೆ. ದೇಶದಲ್ಲಿ UPI ಪೇಮೆಂಟ್ಸ್ ವ್ಯವಸ್ಥೆಯ ಮೂಲಕ ಆನ್‌ಲೈನ್ ಹಣಕಾಸು ವಹಿವಾಟುಗಳನ್ನು ಸುಲಭವನ್ನಾಗಿಸಿದ ಸರ್ಕಾರವು ಈಗ ಮತ್ತೂ ಹೆಚ್ಚು ಸರಳವಾದ ‘UPI Lite’ ಪೇಮೆಂಟ್ಸ್ ವ್ಯವಸ್ಥೆಯನ್ನು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಿತ್ತು. ಇದರಲ್ಲಿ ಬಳಕೆದಾರರು ಇಂಟರ್ನೆಟ್ ಸಂಪರ್ಕವಿಲ್ಲದೆ ಪಾವತಿಗಳನ್ನು ಪಾವತಿಸಬಹುದಾದ ಆಯ್ಕೆ ಸೇರಿದಂತೆ ಹಲವು ಅತ್ಯದ್ಭುತ ವೈಶಿಷ್ಟ್ಯಗಳನ್ನು ತರಲಾಗಿದೆ.

ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಪೇಟಿಎಂ ಅಥವಾ ಪೇಟಿಎಂ ಪಾವತಿ ಬ್ಯಾಂಕ್ಸ್ ಲಿಮಿಟೆಡ್ (ಪಿಪಿಬಿಎಲ್) ಸಹಯೋಗದಲ್ಲಿ Paytm ಅಪ್ಲಿಕೇಶನ್‌ನಲ್ಲಿ ಹೊಸದಾಗಿ UPI LITE ಸೇವೆಗಳನ್ನು ಆರಂಭಿಸಲಾಗಿದ್ದು, ಇದೀಗ ಪೇಟಿಎಂ ಗ್ರಾಹಕರು ಸಣ್ಣ ಪಾವತಿಗಳು, ಇಂಟರ್‌ನೆಟ್ ಇಲ್ಲದೆ ಹಣ ಪಾವತಿ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆಯಬಹುದಾಗಿದೆ.

ಪೇಟಿಎಂ ಅಳವಡಿಸಿಕೊಂಡಿರುವ UPI Lite ಪೇಮೆಂಟ್ಸ್ ತಂತ್ರಜ್ಞಾನವು ಸಂಪೂರ್ಣ ಮಾಹಿತಿ ಇಲ್ಲಿದೆ:

• UPI ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿರುವ ಆದರೆ ಅದಕ್ಕಿಂತಲೂ ಸರಳವಾಗಿ ಸೇವೆಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ ಪರಿಚಯಿಸಿರುವ ಹೊಸ ಪೇಮೆಂಟ್ ತಂತ್ರಜ್ಞಾನ ಇದಾಗಿದೆ. ಇದರ ಸಹಾಯದಿಂದ ಇಂಟರ್‌ನೆಟ್‌ ಇಲ್ಲದಿದ್ದರೂ ಕೂಡ ವೇಗವಾಗಿ ಮತ್ತು ಸರಳವಾಗಿ ಹಣ ಪಾವತಿ ಮಾಡಬಹುದು. ಇದರಲ್ಲಿ ನೀವು ಹಣ ಪಾವತಿ ಮಾಡುವಾಗ ಯುಪಿಐ ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ, ಇದು ನಿಮ್ಮ ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುವುದಿಲ್ಲ. ಬದಲಾಗಿ ನಿಮ್ಮ ಹಣವನ್ನು ವಾಲೆಟ್‌ನಲ್ಲಿ ಇಟ್ಟುಕೊಂಡು, ಹಣವನ್ನು ಕಳುಹಿಸುತ್ತದೆ ಅಥವಾ ಸ್ವೀಕರಿಸುತ್ತದೆ. ಆಂದರೆ, ಇದಕ್ಕಾಗಿ ನೀವು ಮೊದಲೇ ನೀವು ಹಣವನ್ನು ಸೇರಿಸಬೇಕು. ಹಾಗಾಗಿ, ಇದು ಒಂದು ಆನ್‌ಲೈನ್ ವ್ಯಾಲೆಟ್ ಎಂದು ಎನ್ನಬಹುದು.

• UPI ಲೈಟ್‌ಗೆ UPI ಪಿನ್ ನಮೂದಿಸುವ ಅಗತ್ಯವಿಲ್ಲ:
ಆನ್-ಡಿವೈಸ್ ವ್ಯಾಲೆಟ್ ಆಗಿರುವ UPI Lite ನಲ್ಲಿ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ (ಇಂಟರ್‌ನೆಟ್ ಹೊಂದಿರುವಾಗ) ವಾಲೆಟ್‌ಗೆ ಹಣವನ್ನು ಸೇರಿಸಬೇಕಾಗುತ್ತದೆ ಮತ್ತು ನಂತರ ಇಂಟರ್ನೆಟ್ ಇಲ್ಲದಿದ್ದರೂ ಸಹ, ಬಳಕೆದಾರರು ತಕ್ಷಣ ಯಾರಿಗಾದರೂ ಹಣವನ್ನು ಕಳುಹಿಸಬಹುದು. ಇದರಿಂದ UPI Lite ನಲ್ಲಿ UPI ಪಿನ್ ನಮೂದಿಸುವ ಅಗತ್ಯ ಕೂಡ ಇರುವುದಿಲ್ಲ. ಪೇಮೆಂಟ್ಸ್ ಮಾಡುವಾಗ ಇದು ನಿಮ್ಮ ವ್ಯಾಲೆಟ್‌ನಲ್ಲಿರುವ ಹಣವನ್ನು ನೇರವಾಗಿ ಪ್ರವೇಶಿಸುತ್ತದೆ ಮತ್ತು ಆ ಹಣವನ್ನು ಪೇಮೆಂಟ್ ಮಾಡಲು ಬಳಸಿಕೊಳ್ಳುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ನಿಮ್ಮ UPI ಲೈಟ್ ವ್ಯಾಲೆಟ್‌ಗೆ ನೀವು ಎಷ್ಟು ಹಣವನ್ನು ಸೇರಿಸಬಹುದು ಎಂಬುದಕ್ಕೆ ಮಿತಿಯನ್ನು ಅನ್ವಯಿಸಲಾಗಿದೆ.

• ‘UPI Lite’ ಪೇಮೆಂಟ್ಸ್ ಮಿತಿ :
UPI Lite ನಲ್ಲಿ ನಿಮ್ಮ ವ್ಯಾಲೆಟ್‌ಗೆ 2000 ರೂ.ವರೆಗೆ ಮಾತ್ರ ಸೇರಿಸುವುದಕ್ಕೆ ಅನುಮತಿಸಲಾಗಿದೆ. ಏಕೆಂದರೆ, ಇದು ಇಂಟರ್‌ನೆಟ್‌ ಇಲ್ಲದೆ ಇರುವಾಗ ಕಾರ್ಯನಿರ್ವಹಿಸುವುದರಿಂದ ಕಡಿಮೆ ಮೌಲ್ಯದ ಪಾವತಿಗಳಿಗೆ ಮಾತ್ರ ಅನುಮತಿಸಲಿದೆ. ಅಲ್ಲದೆ, ನೀವು ಪ್ರತಿ ವಹಿವಾಟಿಗೆ ಗರಿಷ್ಠ 200 ರೂ.ಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗಲಿದೆ. ಅನ್‌ಲಿಮಿಟೆಡ್‌ ಟ್ರಾನ್ಸಾಕ್ಷನ್ಸ್ ಯುಪಿಐ ಲೈಟ್‌ನಲ್ಲಿ ನೀವು ದಿನವೊಂದಕ್ಕೆ ಎಷ್ಟು ವಹಿವಾಟುಗಳನ್ನು ಬೇಕಾದರೂ ನಡೆಸುವುದಕ್ಕೆ ಅವಕಾಶವಿದೆ. ಪ್ರಸ್ತುತ ಯುಪಿಐ ತಂತ್ರಜ್ಞಾನದಿಂದ ಕೇವಲ 10 ಟ್ರಾನ್ಸಾಕ್ಶನ್ ಗಳನ್ನು ಮಾತ್ರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, UPI Lite ನಲ್ಲಿ ಚಿಕ್ಕ ಮೊತ್ತವನ್ನು ಎಷ್ಟೇ ಬಾರಿಯಾದರೂ ಕಳುಹಿಸಬಹುದು. ಇದರಿಂದ ಗ್ರಾಹಕರಿಗೆ ಎದುರಾಗುತ್ತಿದ್ದ ಸಮಸ್ಯೆಯೊಂದು ತಪ್ಪಿದಂತಾಗಿದೆ.

ಈ ಮೇಲಿನ ನಿಯಮದಂತೆ ಪೇಟಿಎಂ ಗ್ರಾಹಕರು ಇಂಟರ್‌ನೆಟ್ ಇಲ್ಲದೆ ಹಣ ಪಾವತಿ, ಸಣ್ಣ ಪಾವತಿಗಳು, ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆಯಬಹುದಾಗಿದೆ.

Leave A Reply

Your email address will not be published.