Meat Sale Ban : ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್ , ವೀಕೆಂಡ್ ನಲ್ಲಿ ಮಾಂಸ ಮಾರಾಟ ನಿಷೇಧ
ಫೆಬ್ರವರಿ 18 ರಂದು ಹಿಂದೂಗಳ ಧಾರ್ಮಿಕ ಆಚರಣೆಯಾದ ಮಹಾ ಶಿವರಾತ್ರಿ ಹಬ್ಬದ ನಿಮಿತ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಇದಲ್ಲದೆ, ಯಾವುದೇ ರೀತಿಯ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ಮಾಡದಂತೆ ನಿಷೇಧ ಹೇರಿ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಮಾಂಸ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ಶನಿವಾರ ಎಲ್ಲ ರೀತಿಯ ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೂ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಷೇಧ ಹೇರಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಆದೇಶವನ್ನು ಯಾರು ಕೂಡ ಉಲ್ಲಂಘನೆ ಮಾಡದಂತೆ ಬಿಬಿಎಂಪಿ ಪಶುಪಾಲನೆಯ ಜಂಟಿ ನಿರ್ದೇಶಕ ರವಿಕುಮಾರ್ ರವರು ಆದೇಶ ಹೊರಡಿಸಿದ್ದಾರೆ.
ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸುಮಾರು 10 ಸಾವಿರಕ್ಕೂ ಅಧಿಕ ಕುರಿ, ಆಡು, ಮೇಕೆಗಳನ್ನು ವಧೆ ಮಾಡಿ ಮಾಂಸ ಸರಬರಾಜು ಮಾಡುತ್ತಿದ್ದ ವ್ಯಾಪಾರಿಗಳಿಗೆ ಆರ್ಥಿಕ ಹೊಡೆತ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ದಿನಗಳಾದ ಶನಿವಾರ ಮಾಂಸ ಸೇವನೆ ಮಾಡುವವರು ಕೂಡ ಇರುವ ಹಿನ್ನೆಲೆ ಬಿಬಿಎಂಪಿ ಆದೇಶ ವ್ಯಾಪಾರಿಗೆ ಹೊಡೆತ ನೀಡೋದು ಪಕ್ಕಾ!!. ಇದರ ಜೊತೆಗೆ ಹೋಟೆಲ್‌ಗಳಲ್ಲಿ ಸಹ ನಿಮಗೆ ಮಾಂಸದೂಟ ಸೇವನೆ ಮಾಡಲು ಅಸಾಧ್ಯ.
ಸಿಲಿಕಾನ್ ಸಿಟಿಯ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇದ್ದು, ಬಿಬಿಎಂಪಿ ಯಲಹಂಕ ವಲಯದ ಸುತ್ತ ಮುತ್ತ ಮಾಂಸ ಮಾರಾಟ ನಿಷೇಧ ಮಾಡಿ ಆದೇಶ ಪ್ರಕಟಿಸಿತ್ತು. ಈ ಆದೇಶ ಇನ್ನೂ ಚಾಲ್ತಿಯಲ್ಲಿದ್ದು, ಇದರ ನಡುವೆ ಈಗ ಪಾಲಿಕೆ ವ್ಯಾಪ್ತಿಯ ಎಲ್ಲ ಭಾಗಗಳಲ್ಲಿ ಪ್ರಾಣಿವಧೆಯನ್ನು ನಿಷೇಧ ಹೇರಿದ್ದು, ಮಾಂಸ ಪ್ರಿಯರಿಗೆ ನಿರಾಶೆ ಮೂಡಿಸಿದೆ. ಮುಂದಿನ 20 ದಿನಗಳ ಕಾಲ ಬೆಂಗಳೂರಿನ ಬಿಬಿಎಂಪಿ ಯಲಹಂಕ ಝೋನ್ನಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ, ಯಲಹಂಕ ವಲಯದಲ್ಲಿ ಎಲ್ಲ ರೀತಿಯ ಮಾಂಸ ಮಾರಾಟ ನಿಷೇಧಿಸಲಾಗಿದೆ. ಇದಲ್ಲದೇ, ಬಿಬಿಎಂಪಿ ಹೋಟೆಲ್ ಹಾಗೂ ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ಅನಧಿಕೃತ ಪ್ರಾಣಿವಧೆ, ಮಾಂಸ ಮಾರಾಟ ಕಂಡುಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅನಧಿಕೃತವಾಗಿ ಪ್ರಾಣಿವಧೆ ಮಾಡಿ ಮಾಂಸ ಮಾರಾಟ ಮಾಡುವವರ ವಿರುದ್ಧ ಹದ್ದಿನ ಕಣ್ಣು ಇಡಲಿದ್ದು, ಮಾರ್ಷಲ್‌ಗಳು ಗಸ್ತು ಬರಲಿದ್ದಾರೆ. ಹೀಗಾಗಿ, ದಿನನಿತ್ಯ ಮಾಂಸ ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳು ಸಹ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿರುವುದಿಲ್ಲ.