ಕೋರ್ಟ್ ವಾರಂಟ್ ಹಿನ್ನೆಲೆ!! ಬಜ್ಪೆ ಪೊಲೀಸರಿಂದ ಮಾಡೂರು ಯೂಸುಫ್ ಹತ್ಯೆ ಆರೋಪಿಯ ಸಹಿತ ನಾಲ್ವರ ಬಂಧನ!! ಹಾಡಹಗಲೇ ಸಬ್-ಜೈಲಿನಲ್ಲಿ ಹರಿದಿತ್ತು ಮಾಡೂರು ನೆತ್ತರು!?

Maduru Yusuf murder case

ಮಂಗಳೂರು: ಕಳೆದ ಕೆಲ ವರ್ಷಗಳ ಹಿಂದೆ ನಡೆದಿದ್ದ ಹಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ಹಾಜರಾಗದೆ, ವಿವಿಡೆದೆ ತಲೆಮರೆಸಿಕೊಂಡಿದ್ದ ನಾಲ್ವರನ್ನು ಮಂಗಳೂರು ಹೊರವಲಯದ ಬಜಪೆ ಠಾಣಾ ಪೊಲೀಸರು ಬಂಧಿಸಿದ್ದು,ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬಂಧಿತರನ್ನು 2020 ರಲ್ಲಿ ಬೈಕ್ ಕಳವು ಪ್ರಕರಣದ ಆರೋಪಿ ಹಾಗೂ 2015 ರಲ್ಲಿ ಮಂಗಳೂರು ಸಬ್ ಜೈಲಿನಲ್ಲಿ ನಡೆದಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣದ ಆರೋಪಿ ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (27),2019 ರಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ ತಾರ್ಹಿಬ್ ಅಫ್ನಾನ್ ಪಟೇಲ್(33) ಹಾಗೂ 2021 ರಲ್ಲಿ ದಾಖಲಾಗಿದ್ದ MMRD ಪ್ರಕರಣದ ಆರೋಪಿ ಉಡುಪಿ ಶಿವಳ್ಳಿ ನಿವಾಸಿ ಸುರೇಶ್ ಕುಮಾರ್ (38) ಎಂದು ಗುರುತಿಸಲಾಗಿದೆ.

ಹಾಡಹಗಲೇ ಸಬ್ ಜೈಲಿನಲ್ಲಿ ನಡೆದಿದ್ದು ಮಾಡೂರು ಯೂಸುಫ್ ಯಾನೆ ಇಸುಬು ಹತ್ಯೆ!!

ಮಾಡೂರು ಯೂಸುಫ್ ಯಾನೆ ಇಸುಬು ಹೆಸರು ಮಂಗಳೂರು ರಕ್ತ ಚರಿತ್ರೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಮೂಲತಃ ಉಳ್ಳಾಲ ಕೋಟೆಕಾರ್ ಮಾಡೂರು ನಿವಾಸಿಯಾದ ಈತ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಕೋಮು ಸಂಘರ್ಷದ ಕಿಚ್ಚಿಗೆ ರಿವೆಂಜ್ ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾಗಿದ್ದ.

2015 ರಲ್ಲಿ ಮಂಗಳೂರು ರೌಡಿ ಶೀಟರ್ ಆಕಾಶಭವನ ಶರಣ್ ಹಾಗೂ ಇತರ ಮೂವರು ಆಟೋ ಚಾಲಕರು ಸೇರಿ ಹರೇಕಳ ಮೂಲದ ಫಾರೂಕ್ ಎಂಬ ಅಮಾಯಕ ಆಟೋ ಚಾಲಕನನ್ನು ರಿವೆಂಜ್ ಗಾಗಿ ಮೊರ್ಗನ್ ಗೇಟ್ ಬಳಿಯ ಪಿ.ಎಲ್ ಗೇಟ್ ಸಮೀಪ ಹತ್ಯೆ ನಡೆಸಿದ್ದರು. ಈ ಪ್ರಕರಣ ಕೋಮುವಾದಕ್ಕೆಎಡೆ ಮಾಡಿಕೊಟ್ಟಿತ್ತು.

ಇದಕ್ಕೆ ಪ್ರತೀಕಾರವಾಗಿ ಉಳ್ಳಾಲ ಮೂಲದ ಯುವಕರ ತಂಡ ಕಟ್ಟಿಕೊಂಡ ಯೂಸುಫ್ ಉಳ್ಳಾಲದಲ್ಲೇ ಹಿಂದೂ ಆಟೋ ಚಾಲಕ ಅಮಾಯಕ ನರಸಿಂಹ ಶೆಟ್ಟಿಗಾರ್ ಎಂಬವರನ್ನು ಹತ್ಯೆ ನಡೆಸಿದ್ದರು. ಬಳಿಕ ಮಂಗಳೂರು ನಗರ ಪೊಲೀಸರು ಮಾಡೂರು ಯೂಸುಫ್ ಸಹಿತ ಹಲವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದು, ಬಳಿಕ ಮಾಡೂರ್ ಯೂಸುಫ್ ಜಾಮೀನಿನಲ್ಲಿ ಬಿಡುಗಡೆಗೊಂದು ವಿದೇಶಕ್ಕೆ ಹಾರಿದ್ದ.

ಇತ್ತ ಮಾಡೂರ್ ಯೂಸುಫ್ ಗೆ ಉಳ್ಳಾಲ ಸಹಿತ ಮಂಗಳೂರು ನಗರದಲ್ಲಿ ಡಾನ್ ಪಟ್ಟ ಸಿಗುತ್ತಿದ್ದಂತೆ ವಿದೇಶದಲ್ಲೇ ಕುಳಿತು ಬೆದರಿಸುತ್ತಿದ್ದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದಾಗ ಪೊಲೀಸರ ಅತಿಥಿಯಾಗಿ ಮತ್ತೊಮ್ಮೆ ಜೈಲಿಗೆ ಹೋಗಿದ್ದ. ಇದೇ ಸಮಯಕ್ಕೆ ಆಕಾಶ ಭವನ ಶರಣ್ ಸಹಿತ ಇತರರು ಮಂಗಳೂರು ಜೈಲಿನಲ್ಲಿ ಇದ್ದ ಹಿನ್ನೆಲೆಯಲ್ಲಿ, ಎರಡೂ ತಂಡಗಳ ಮಧ್ಯೆ ಜಗಳವಾಗುತ್ತದೆ ಎನ್ನುವ ಕಾರಣಕ್ಕೆ ಆಕಾಶ ಭವನ ಶರಣ್ ಸಹಿತ ಇತರರನ್ನು ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಇತ್ತ ಜೈಲಿನಲ್ಲಿ ರಾಜಾರೋಷವಾಗಿದ್ದ ಇಸುಬು ಗಾಗಿ ಯುವಕರ ತಂಡವೊಂದು ಜೈಲಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದು, ಇದರಿಂದ ಕೆರಳಿದ ಶರಣ್ ಸಹಚರರು ಮುಂಜಾನೆ ವೇಳೆಗೆ ಸ್ಕೆಚ್ ಹಾಕಿದ್ದರು. ಅದರಂತೆ ಹರಿತವಾದ ಆಯುಧದಿಂದ ಯೂಸುಫ್ ಮೇಲೆರಗಿದ ತಂಡವು ಯದ್ವಾತದ್ವ ಇರಿದಿದ್ದು, ಇದೇ ವೇಳೆ ಜಗಳ ಬಿಡಿಸಲು ಬಂದಿದ್ದ ಇನ್ನೊರ್ವ ಗಣೇಶ್ ಶೆಟ್ಟಿ ಎಂಬಾತನ ಮೇಲೆ ಯೂಸುಫ್ ತಂಡವು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು.

ಕೂಡಲೇ ಜೈಲು ಸಿಬ್ಬಂದಿಗಳು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಜೈಲಿನಲ್ಲಿ ನಡೆದಿದ್ದ ಹೊಡೆದಾಟದಲ್ಲಿ ಹಲವು ಪೊಲೀಸರಿಗೂ ಗಾಯಗಳಾಗಿತ್ತು. ಗಂಭೀರ ಗಾಯಗೊಂಡಿದ್ದ ಮಾಡೂರ್ ಯೂಸುಫ್ ಹಾಗೂ ಗಣೇಶ್ ಶೆಟ್ಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮಂಗಳೂರು ಕಂಡಿದ್ದ ಕುಖ್ಯಾತ ರೌಡಿ ಮಾಡೂರ್ ಇಸುಬು ಹೆಸರು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕಾಶಭವನ ಶರಣ್ ಹಾಗೂ ಇತರ ಸಹಚರರ ಮೇಲೂ ಪ್ರಕರಣ ದಾಖಲಾಗಿತ್ತು.

ಸದ್ಯ ಬಜಪೆ ಠಾಣಾ ಪೊಲೀಸರು ವಾರಂಟ್ ಮೇಲೆ ಬಂಧಿಸಿದ ಆರೋಪಿಗಳಲ್ಲಿ ಪ್ರದೀಪ್ ಪೂಜಾರಿ ಮಾಡೂರು ಹತ್ಯೆಯ ಆರೋಪಿಯಾಗಿದ್ದು, ಹಲವು ಸಮಯಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.

Leave A Reply

Your email address will not be published.