IRCTC : ರಜೆಯ ಮಜಾ ಸವಿಯಲು ವಿಶೇಷ ರೈಲು, ಎಲ್ಲಿಂದ? ಸಮಯದ ಕಂಪ್ಲೀಟ್‌ ವಿವರ ಇಲ್ಲಿದೆ!

ರೈಲ್ವೆ ಪ್ರಯಾಣಿಕರು ಗಮನಿಸಬೇಕಾದ ಮುಖ್ಯ ಮಾಹಿತಿ ನೀಡಲಾಗಿದೆ. ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇದೀಗ, ರೈಲ್ವೆ ಪ್ರಯಾಣಿಕರು ಹಬ್ಬದ ಸಂಭ್ರಮದಲ್ಲಿ ಹೆಚ್ಚು ಓಡಾಟ ನಡೆಸುತ್ತಿದ್ದು ಜನದಟ್ಟಣೆ ಕೂಡ ಹೆಚ್ಚಿರಲಿದೆ.

 

ಹಬ್ಬದ ಸಮಯದಲ್ಲಿ ದೂರದೂರುಗಳಿಂದ ಹುಟ್ಟೂರಿನತ್ತ ಪ್ರಯಾಣಿಸಲು ಸಜ್ಜಾಗುತ್ತಿರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ವಿಶೇಷ ರೈಲ್ವೆ ವ್ಯವಸ್ಥೆ ಕಲ್ಪಿಸಿದೆ. ಹಬ್ಬ ಹರಿದಿನಗಳ ಜೊತೆಗೆ ರಜೆಗಳಿರುವ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ತೆರಳುವುದರಿಂದ ಜನ ದಟ್ಟಣೆ ನಿಯಂತ್ರಿಸಲು ಪ್ರಯಾಣಕ್ಕೆ ಬೇಕಾದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಈಗಲೇ ಮಾಡಿಕೊಂಡಿದೆ.

 

ಐಆರ್‌ಸಿಟಿಸಿ (IRCTC) ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರಮುಖವಾಗಿ ಹಬ್ಬ ಹಾಗೂ ರಜೆಯ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಳವಾಗಿ ಜನರು ಪರದಾಡುವಂತಾಗುತ್ತದೆ. ಹೀಗಾಗಿ, ಜನದಟ್ಟಣೆ ಈ ವರ್ಷ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ವಿಶೇಷ ರೈಲನ್ನು ಆರಂಭ ಮಾಡಿದೆ. ಮಾರ್ಚ್ 8ರಂದು ಹೋಲಿ ಹಬ್ಬದ ವೇಳೆ ಜನರ ಓಡಾಟ ಹೆಚ್ಚಿರಲಿದೆ. ಈ ಹೋಲಿ ಸಂದರ್ಭದಲ್ಲಿ ಭಾರತಿಯ ರೈಲ್ವೆ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಮಧ್ಯಪ್ರದೇಶ, ಕೇರಳದಲ್ಲಿ ಅಧಿಕವಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

 

ಹೋಲಿ ಹಬ್ಬದ ಪ್ರಯಾಣಿಕರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಲವಾರು ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಆರಂಭಿಸಿರುವ ಕುರಿತು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಯಶವಂತಪುರದಿಂದ ಮತ್ತು ಯಶವಂತಪುರಕ್ಕೆ ಇರುವ ವಿಶೇಷ ರೈಲುಗಳ ಮಾಹಿತಿ ಇಲ್ಲಿದೆ.

 

ಐಆರ್‌ಸಿಟಿಸಿಯಿಂದ ಹೋಲಿ ವಿಶೇಷ ರೈಲುಗಳು 

ಪಾಟ್ನಾ-ಆನಂದ್ ವಿವಾರ ಸೂಪರ್‌ಫಾಸ್ಟ್‌ ಹೋಲಿ ಸ್ಪೆಷಲ್: 

ರೈಲು ಸಂಖ್ಯೆ 03255 ಪಾಟ್ನಾ-ಆನಂದ್ ವಿವಾರ ಸೂಪರ್‌ಫಾಸ್ಟ್ ಹೋಲಿ ವಿಶೇಷ ರೈಲು ಮಾರ್ಚ್ 9ರಿಂದ ಮಾರ್ಚ್ 23ರವರೆಗೆ ಸೇವೆ ನೀಡಲಿದೆ. ಪ್ರತಿ ಗುರುವಾರ ಹಾಗೂ ಭಾನುವಾರ ಪಾಟ್ನಾದಿಂದ ರಾತ್ರಿ 10:00 ಗಂಟೆಗೆ ರೈಲು ಹೊರಡಲಿದ್ದು, ಮುಂಜಾನೆ 3:00 ಗಂಟೆಗೆ ಆನಂದ್ ವಿವಾರಕ್ಕೆ ತಲುಪಲಿದೆ.

 

ರೈಲು ಸಂಖ್ಯೆ 03256 ಆನಂದ ವಿವಾಹರದಿಂದ ಪಾಟ್ನಾಕ್ಕೆ ಪ್ರಯಾಣಿಸುವ ರೈಲಾಗಿದ್ದು ಮಾರ್ಚ್ 10ರಿಂದ ಮಾರ್ಚ್ 24ರವರೆಗೆ ಪ್ರತಿ ಶುಕ್ರವಾರ ಮತ್ತು ಸೋಮವಾರ ಈ ರೈಲು ಸೇವೆ ಒದಗಿಸಲಿದೆ.ಇದು ಸಂಜೆ 5:20ಗೆ ತಲುಪಲಿದೆ.

 

ಯಶವಂತಪುರ-ಮುಜಾಫರ್‌ಪುರ ವಾರದ ಹೋಲಿ ವಿಶೇಷ ರೈಲು: 

ಮಾರ್ಚ್ 13ರಿಂದ ಮಾರ್ಚ್ 27ರವರೆಗೆ ಈ ರೈಲು ಇರಲಿದ್ದು, ಈ ರೈಲು ಪ್ರತಿ ಸೋಮವಾರ ಸಂಚಾರ ಮಾಡಲಿದೆ. ಸೋಮವಾರ ಮುಂಜಾನೆ 7:30ಗೆ ಈ ರೈಲು ಸಂಚಾರ ಆರಂಭಿಸಿದರೆ, ಬೇರೆ ಬೇರೆ ಸ್ಟಾಪ್‌ಗಳ ಮೂಲಕ ಹಾದು ಹೋಗಲಿದ್ದು, ಬುಧವಾರ ಮಧ್ಯಾಹ್ನದ ವೇಳೆಗೆ ಮುಜಾಫರ್‌ಪುರಕ್ಕೆ ತಲುಪಲಿದೆ.

 

ಬರೌನಿ-ಪುನೆ ವಾರದ ಹೋಲಿ ವಿಶೇಷ ರೈಲು:

ಈ ರೈಲು ಬರೌನಿಯಿಂದ ಮಧ್ಯಾಹ್ನ 12.10ಕ್ಕೆ ಹೊರಡಲಿದ್ದು, ಒಂದು ದಿನದ ಬಳಿಕ ರಾತ್ರಿ 10.30 ಗಂಟೆಗೆ ಪುಣೆಗೆ ತಲುಪಲಿದೆ. ಮಾರ್ಚ್ 9ರಿಂದ ಮಾರ್ಚ್ 16ರವರೆಗೆ ಈ ರೈಲು ಸೇವೆ ಒದಗಿಸಲಿದೆ. ಈ ರೈಲು ಪುಣೆ ತಲುಪುವ ಮುನ್ನ ಹಲವಾರು ರೈಲ್ವೆ ಸ್ಟೇಷನ್‌ಗಳನ್ನು ದಾಟಿ ಹೋಗಲಿದೆ.

 

ರೈಲು ಸಂಖ್ಯೆ 05280 ಪುಣೆಯಿಂದ ಬರೌನಿಗೆ ಬರುವ ರೈಲಾಗಿದ್ದು, ಈ ರೈಲು ಮಾರ್ಚ್ 11ರಿಂದ ಮಾರ್ಚ್ 18ರವರೆಗೆ ಇರಲಿದೆ. ಮುಂಜಾನೆ 5:00 ಗಂಟೆಗೆ ಪುಣೆಯಿಂದ ಈ ರೈಲು ಹೊರಡಲಿದ್ದು, ಬರೌನಿಗೆ 1:00 ಗಂಟೆಗೆ ಬಂದು ತಲುಪಲಿದೆ.

 

ಮುಜಾಫರ್‌ಪುರ-ಯಶವಂತಪುರ ಹೋಲಿ ವಿಶೇಷ ರೈಲು:

ರೈಲು ಸಂಖ್ಯೆ 05271 ಮುಜಾಫರ್‌ಪುರ-ಯಶವಂತಪುರ ಹೋಲಿಯ ಪ್ರಯುಕ್ತ ವಿಶೇಷ ರೈಲು ಮುಜಾಫರ್‌ಪುರದಿಂದ ಪ್ರಯಾಣ ಪ್ರಾರಂಭಿಸಲಿದೆ. ಈ ರೈಲು ಮಾರ್ಚ್ 10ರಿಂದ ಮಾರ್ಚ್ 24ರವರೆಗೆ ಸೇವೆ ಒದಗಿಸಲಿದೆ. ಇದರ ಜೊತೆಗೆ, ಪ್ರತಿ ಭಾನುವಾರ ಸಂಜೆ 4:30ಗೆ ಈ ರೈಲು ಯಶವಂತಪುರಕ್ಕೆ ತಲುಪಲಿದೆ.

Leave A Reply

Your email address will not be published.