BJP donation increased to 614 crores : 614 ಕೋಟಿ ಸಂಗ್ರಹಿಸಿದ ಬಿಜೆಪಿ, ಕಾಂಗ್ರೆಸ್ ಕೇವಲ 95 ಕೋಟಿ ಸಂಗ್ರಹಿಸಲಷ್ಟೇ ಶಕ್ತ !

ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವರ್ಷ 2022 ರಲ್ಲಿ ಆಡಳಿತರೂಢ ಬಿಜೆಪಿ (BJP) ಬರೋಬ್ಬರಿ 614 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿ ನಿಂತರೆ ಕಾಂಗ್ರೆಸ್ ಕೇವಲ ಕೇವಲ 95 ಕೋಟಿ ರೂ. ದೇಣಿಗೆ ಸಂಗ್ರಹ ಸಂಗ್ರಹಿಸಲು ಶಕ್ತವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಹೇಳಿದೆ.

 

2021-22ರ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಒಟ್ಟು 187.03 ಕೋಟಿ ರೂಪಾಯಿ ದೇಣಿಗೆ ಪಡೆದಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 31.50 ರಷ್ಟು ಹೆಚ್ಚಳವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ವರದಿ ಹೇಳಿದೆ.

ಬಿಜೆಪಿ ಪಕ್ಷವು ಒಟ್ಟು 4,957 ದೇಣಿಗೆಗಳ ಮೂಲಕ ಒಟ್ಟು 614.63 ಕೋಟಿ ರೂ. ಸಂಗ್ರಹ ಮಾಡಿರೋದಾಗಿ ಘೋಷಿಸಿ ಕೊಂಡಿದೆ. ಕಾಂಗ್ರೆಸ್ ಪಕ್ಷವು 1,255 ದೇಣಿಗೆಗಳ ಮೂಲಕ ಒಟ್ಟು 95.46 ಕೋಟಿ ರೂ. ಸಂಗ್ರಹ ಮಾಡಿರೋದಾಗಿ ಹೇಳಿದೆ. ಬಿಜೆಪಿಯು ಘೋಷಣೆ ಮಾಡಿರುವ ಒಟ್ಟು ದೇಣಿಗೆಯ ಪ್ರಮಾಣ ಕಾಂಗ್ರೆಸ್ ಗಿಂತಾ 3 ಪಟ್ಟು ಅಧಿಕ ಇರೋದು ಕಂಡು ಬರುತ್ತೆ. ಇದಲ್ಲದೆ, ಎನ್‌ಸಿಪಿ, ಸಿಪಿಐ, ಸಿಪಿಎಂ, ಎನ್‌ಪಿಇಪಿ ಹಾಗೂ ಎಐಟಿಸಿ ಪಕ್ಷಗಳೂ ಕೂಡಾ ಅಲ್ಪ ಪ್ರಮಾಣದ ದೇಣಿಗೆ ಗಿಟ್ಟಿಸಿವೆ.

ಆದರೆ ಬಹುಜನ ಸಮಾಜ ಪಕ್ಷ (BSP) ಕಳೆದ 16 ವರ್ಷಗಳಿಂದ ಘೋಷಿಸುತ್ತಿರುವಂತೆ 2021-22 ರ ಅವಧಿಯಲ್ಲೂ ತನಗೆ ಕೇವಲ 20,000 ರೂ.ಗಿಂತ ಮೇಲ್ಪಟ್ಟು ಯಾವೊಂದು ದೇಣಿಗೆಯೂ ಬಂದಿಲ್ಲ ಎಂದು ಘೋಷಿಸಿರುವುದಾಗಿ ಎಂದು ಎಡಿಆರ್ ವರದಿ ಮಾಡಿದೆ. ಇದು ಪಕ್ಷಗಳು ಘೋಷಿಸಿಕೊಂಡ ಸಂಖ್ಯೆಗಳು. ಬರುವ ಆದಾಯವನ್ನು ಘೋಷಿಸಿಕೊಳ್ಳದೆ, ಅದೇಷು ಪಕ್ಷಗಳು ಅದೆಷ್ಟ್ಯ ಹಣವನ್ನು ದೇಣಿಗೆಯಾಗಿ ಪಡೆದು ದುಡ್ಡು ಹೊಡೆದಿವೆಯೋ ಎನ್ನುವುದು ಯಾರಿಗೂ ಗೊತ್ತಾಗಲ್ಲ. ಸದ್ಯದ ಪರಿಸ್ಥಿಯಲ್ಲಿ ಎಲ್ಲಾ ಪಕ್ಷಗಳೂ ಅದರಲ್ಲಿ ಹಿಂದೆ ಬಿದ್ದಿಲ್ಲ ಅನ್ನುವುದೊಂದು ಜನಸಾಮಾನ್ಯರ ಸಾಮಾನ್ಯ ನಂಬಿಕೆ.

Leave A Reply

Your email address will not be published.