CPRI Recruitment 2023: ಎಂಜಿನಿಯರಿಂಗ್ ಮಾಡಿದವರಿಗೆ ಉದ್ಯೋಗವಕಾಶ : ಮಾಸಿಕ ರೂ.42,000 ಸಂಬಳ
ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗೆ ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಗೆ ಅರ್ಜಿ ಹಾಕಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಅರ್ಜಿ ಸಲ್ಲಿಸಲು ವಯಸ್ಸು ಗರಿಷ್ಠ 30 ವರ್ಷ ಆಗಿದ್ದು, ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಹಾಗೇಯೇ ಹುದ್ದೆಯ ಮಾಸಿಕ ವೇತನ ರೂ. 42,000 ಆಗಿದ್ದು, ಇನ್ನು ಯಾವ ಹುದ್ದೆ, ವಿದ್ಯಾರ್ಹತೆ ಎಷ್ಟಿರಬೇಕು ಎಂಬುದು ಇಲ್ಲಿದೆ.
ಹುದ್ದೆ : ಪ್ರಾಜೆಕ್ಟ್ ಎಂಜಿನಿಯರ್
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 09/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24/2/2023
ವಿದ್ಯಾರ್ಹತೆ :
ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್ ಪದವಿ ಪಡೆದಿದ್ದು, ಜೊತೆಗೆ ಅಭ್ಯರ್ಥಿಗಳಿಗೆ ಕನಿಷ್ಠ 5 ವರ್ಷ ಅನುಭವ ಇರಬೇಕು. ಹಾಗೂ ಡಿಸೈನ್ ಎಂಜಿನಿಯರಿಂಗ್ನಲ್ಲಿ ಎಂಇ/ ಎಂ.ಟೆಕ್ ಮಾಡಿರಬೇಕು. ಇದರಲ್ಲೂ 3 ವರ್ಷ ಅನುಭವ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ
ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ :
ಮುಖ್ಯ ಆಡಳಿತಾಧಿಕಾರಿ
ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪಿಆರ್ಐ)
ಪೋಸ್ಟ್ ಬಾಕ್ಸ್ ಸಂಖ್ಯೆ. 8066
ಪ್ರೊ. ಸರ್. ಸಿ ವಿ ರಾಮನ್ ರಸ್ತೆ
ಸದಾಶಿವನಗರ ಅಂಚೆ ಕಚೇರಿ
ಬೆಂಗಳೂರು – 560080