Oppo ಫೈಂಡ್ N2 ಫ್ಲಿಪ್ ಸ್ಮಾರ್ಟ್ ಫೋನ್ ಬೆಲೆ, ವೈಶಿಷ್ಟ್ಯದ ಕುತೂಹಲಕ್ಕೆ ತೆರೆ! ಆಕರ್ಷಕ ಕಲರ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ!!!

ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲಿಯೂ ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿಸುತ್ತಿವೆ. ಈ ನಡುವೆ ಒಪ್ಪೋ ಸಂಸ್ಥೆಯು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಅಣಿಯಾಗಿದ್ದು, ಮೊಬೈಲ್ ಗಳ ಕ್ರೇಜ್ ಇರುವವರು ಈ ಹೊಚ್ಚ ಹೊಸ ಮಾದರಿಯ ಸ್ಮಾರ್ಟ್ ಫೋನಿನ ವಿಶೇಷತೆ ಬಗ್ಗೆ ಮಾಹಿತಿ ತಿಳಿದುಕೊಳ್ಳವುದು ಒಳ್ಳೆಯದು.

ಒಪ್ಪೋ ಸಂಸ್ಥೆಯು ಒಪ್ಪೋ ಫೈಂಡ್‌ N2 ಫ್ಲಿಪ್‌ ( Oppo Find N2 Flip) ಸ್ಮಾರ್ಟ್‌ಫೋನ್‌ ಫ್ಲಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಸಿದ್ಧತೆ ನಡೆಸಿದ್ದು, ಈ ನೂತನ ಸ್ಮಾರ್ಟ್‌ಫೋನ್‌ ನವೀನ ಮಾದರಿಯ ಜೊತೆಗೆ ವಿಶೇಷ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದೆ. ಹೌದು!! ಒಪ್ಪೋ ಮೊಬೈಲ್‌ ಸಂಸ್ಥೆಯು ಕಳೆದ ವರ್ಷದ ಅಂತ್ಯದ ವೇಳೆ ಚೀನಾದಲ್ಲಿ ಅನಾವರಣ ಮಾಡಿದ್ದ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಜನರಲ್ಲಿ ಕುತೂಹಲ ಸೃಷ್ಟಿ ಮಾಡಿತ್ತು. ಸದ್ಯ ಈ ಸ್ಮಾರ್ಟ್ ಫೋನ್ ಇದೇ ಫೆಬ್ರವರಿ 15 ರಂದು ಭಾರತವನ್ನೊಳಗೊಡಂತೆ ಗ್ಲೋಬಲ್ ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲು ಅಣಿಯಾಗಿದೆ.

ಅಂದಹಾಗೆ, ಈ ಸ್ಮಾರ್ಟ್ ಫೋನ್ ಫೆಬ್ರವರಿ 15 ರಂದು ರಾತ್ರಿ 8:30 ಗಂಟೆಗೆ ಲಾಂಚ್ ಆಗಲಿದ್ದು, ನೀವೇನಾದರೂ ಈ ಫೋನ್ ಬಿಡುಗಡೆ ಕಾರ್ಯಕ್ರಮವನ್ನು ನೋಡಬೇಕು ಎಂದುಕೊಂಡರೆ, ಖಂಡಿತ ಮಿಸ್ ಮಾಡ್ಕೋಬೇಡಿ!!! ಯಾಕಂದ್ರೆ ನಿಮಗಾಗಿ ಕಾರ್ಯಕ್ರಮದ ಲೈವ್‌ ಸ್ಟ್ರೀಮಿಂಗ್‌ ಅನ್ನು ಅಧಿಕೃತ ಒಪ್ಪೋ ಸೋಶಿಯಲ್‌ ಮೀಡಿಯಾ ಚಾನೆಲ್‌ಗಳಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸ್ಮಾರ್ಟ್ ಫೋನ್ ಫೀಚರ್ ಬಗ್ಗೆ ಗಮನ ಹರಿಸಿದರೆ, ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು 1,080 × 2,520 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದ್ದು, ಅದೇ ರೀತಿ, 120Hz ಅಡಾಪ್ಟಿವ್ ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಈ ಫೋನ್ ಪ್ಯಾನಲ್‌ನಲ್ಲಿ 3.62 ಇಂಚಿನ ವಿಶೇಷ ಡಿಸ್‌ಪ್ಲೇ ಯನ್ನು ಕೂಡ ಒಳಗೊಂಡಿದೆ. ಈ ಫೋನ್ ಪಿಂಕ್ ಹಾಗೂ ಬ್ಲ್ಯಾಕ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, ಈ ಫೋನ್‌ ಕೂಡ ಆಂಡ್ರಾಯ್ಡ್ 13 ಆಧಾರಿತ ಕಲರ್‌ಓಎಸ್‌ 13.0 ನಲ್ಲಿ ರನ್‌ ಆಗಲಿದೆ. 16GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿದೆ. ಅದೇ ರೀತಿ, ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸಾಮರ್ಥ್ಯ ಹೊಂದಿದ್ದು, 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಕೂಡ ನೀಡಲಾಗಿದೆ. ಹಾಗಾದ್ರೆ, ಇಷ್ಟೆಲ್ಲಾ ವಿಶೇಷತೆ ಇರುವ ಒಪ್ಪೋ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಎಂಬ ನಿಮ್ಮ ಕುತೂಹಲಕ್ಕೆ ನಾವು ಉತ್ತರ ಕೊಡ್ತೀವಿ!! ಭಾರತದಲ್ಲಿ ಸುಮಾರು 82,999ರೂ. ಗಳ ಆರಂಭಿಕ ಬೆಲೆ ಇರುವ ಸಾಧ್ಯತೆ ಇದೆ.

ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಜೊತೆಗೆ 44W ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್ ಹೊಂದಿದೆ. ಇದರ ಜೊತೆಗೆ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಕೂಡ ನೀಡಲಾಗಿದೆ. ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ 8GB + 256GB, 12GB + 256GB ಮತ್ತು 16GB + 512GB ನ ಮೂರು ವೇರಿಯಂಟ್‌ನಲ್ಲಿ ದೊರೆಯಲಿದೆ.

Leave A Reply

Your email address will not be published.