Health Tips : ಮೊಸರು ಸೇವನೆಯಿಂದಲೂ ಇದೆ ಇಷ್ಟೆಲ್ಲಾ ಪ್ರಯೋಜನ!

ಮೊಸರನ್ನು ಯಾರೂ ತಾನೇ ಇಷ್ಟಪಡುವುದಿಲ್ಲ ಹೇಳಿ. ಪ್ರತಿದಿನ ಊಟದಲ್ಲಿ ಮೊಸರು ಸೇವಿಸುವುದು ಸಾಮಾನ್ಯ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾಮಾನ್ಯವಾಗಿ ಮೊಸರನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಆದರೆ, ಯಾವ ಸಮಯದಲ್ಲಿ ಮೊಸರು ತಿನ್ನಬೇಕು ಅನ್ನೋದು ಬಹುತೇಕರಿಗೆ ಕನ್ಫೂಸ್ ಆಗಿರುತ್ತದೆ.

ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು. ಹಾಗಿದ್ರೆ ಬನ್ನಿ ಮೋಸರಿನಿಂದ ಸಿಗುವ ಪ್ರಯೋಜನಗಳ ಕುರಿತು ತಿಳಿಯೋಣ.

ಸುಕ್ಕು ತಡೆಯಲು:
ಮೊಸರಿನ ಮೂಲಕ ಸುಕ್ಕು ಎದುರಿಸಬಹುದು. 2 ಟೇಬಲ್ ಸ್ಪೂನ್ ಮೊಸರಿಗೆ, 1 ಚಮಚ ಓಟ್ಸ್ ಸೇರಿಸಿ. ಓಟ್ಸ್ ಮೆತ್ತಗಾದ ನಂತರ ಮುಖ ಮತ್ತು ಕತ್ತಿನ ಭಾಗಗಳಿಗೆ ಹಚ್ಚಿ. ವೃತ್ತಾಕಾರವಾಗಿ ಮಸಾಜ್ ಮಾಡಿ. 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಸುಕ್ಕು ದೂರವಾಗುತ್ತದೆ.

ಕೂದಲು ಉದುರುವಿಕೆ ನಿಲ್ಲಿಸಲು:
ಕೂದಲು ಉದುರುವಿಕೆ ಹಲವಾರು ಕಾರಣಗಳಿಗಾಗಿ ಸಂಭವಿಸುತ್ತದೆ. ಆದರೆ ಮೊಸರನ್ನು ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಅರ್ಧ ಕಪ್ ಮೊಸರು ಹಾಗೂ 3 ಟೇಬಲ್ ಸ್ಪೂನ್ ನೆನಸಿದ ಮೆಂತ್ಯ ಬೀಜ ಒಟ್ಟಿಗೆ ಸೇರಿಸಿ ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ನೈಸರ್ಗಿಕ ಶಾಂಪೂ ಬಳಸಿ ತೊಳೆಯಿರಿ.

ಹೃದಯ ಕಾಯಿಲೆ:
ಪ್ರತಿನಿತ್ಯ 3 ಕಪ್ ಕೊಬ್ಬಿಲ್ಲದ ಅಥವಾ ಕಡಿಮೆ ಕೊಬ್ಬಿನ ಮೊಸರನ್ನು ಸೇವಿಸುವುದು ಆರೋಗ್ಯಕರ ಮತ್ತು ಸುರಕ್ಷಿತ. ನಂಬಲಾಗದಷ್ಟು ಪೌಷ್ಟಿಕಾಂಶ ಹೊಂದಿರುವ ಮೊಸರು ಸೇವಿಸುವುದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವುದರ ಜತೆಗೆ ತೂಕ ನಿರ್ವಹಣೆಯಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

ತಲೆಹೊಟ್ಟಿಗೆ ಪರಿಹಾರ:
ಈಗಂತೂ ತಲೆಹೊಟ್ಟು ಸಾಮಾನ್ಯ ಸಮಸ್ಯೆಯಾಗಿದೆ, ಆದರೆ ಮೊಸರು ಬಳಸುವುದರಿಂದ ಇದನ್ನು ತಪ್ಪಿಸಬಹುದು. ಮೊಸರು ನೈಸರ್ಗಿಕ ಆಂಟಿಫಂಗಲ್. ಹಾಗಾಗಿ ಅರ್ಧ ಕಪ್ ಮೊಸರು ತೆಗೆದುಕೊಂಡು ನೆತ್ತಿಗೆ ಮಸಾಜ್ ಮಾಡಿ. ನಂತರ 20 ನಿಮಿಷಗಳ ಕಾಲ ಬಿಡಿ. ಗುಣಮಟ್ಟದ ಶಾಂಪೂ ಬಳಸಿ ತೊಳೆಯಿರಿ.

ಮೊಡವೆ:
ಮೊಡವೆಗಳ ವಿರುದ್ಧ ಹೋರಾಡಲು ಮೊಸರು ಪರಿಣಾಮಕಾರಿ ಮನೆಮದ್ದು. ಒಂದು ಟೇಬಲ್ ಸ್ಪೂನ್ ಮೊಸರನ್ನು ತೆಗೆದುಕೊಂಡು, ಹತ್ತಿಯನ್ನು ಅದರಲ್ಲಿ ಅದ್ದಿ, ಸಮಸ್ಯೆಯಿರುವ ಜಾಗಕ್ಕೆ ಹಚ್ಚಿ. ಹೀಗೆ ಹಚ್ಚುವಾಗ ಹತ್ತಿ ಬದಲಾಯಿಸುತ್ತಿರಬೇಕು. ಇಲ್ಲದಿದ್ದಲ್ಲಿ ಮತ್ತೊಂದು ಜಾಗದಲ್ಲಿ ನಿಮ್ಮ ಮೊಡವೆ ಹರಡಲು ಕಾರಣವಾಗಬಹುದು. ಹೀಗೆ ರಾತ್ರಿಯಿಡೀ ಬಿಟ್ಟು, ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ.

ಮೃದುತ್ವ ತ್ವಚೆಗಾಗಿ:
ಮೊಸರು ಸೇವನೆಯಿಂದ ತ್ವಚೆಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ದಿನನಿತ್ಯ ಮೊಸರು ಸೇವನೆಯಿಂದ ಒಣ ಚರ್ಮವು ಮೃದತ್ವವನ್ನು ಪಡೆದುಕೊಳ್ಳುತ್ತದೆ. ಜಠರದ ಸಮಸ್ಯೆಗಳಿಂದಾಗಿ ಬಹಳಷ್ಟು ಜನರು ಮೊಡವೆಗಳಿಂದ ಬಳಲುತ್ತಿದ್ದಾರೆ. ಅಂತವರು ಮೊಸರನ್ನು ಬಳಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮೊಸರು ಕರುಳಿನ ಆರೋಗ್ಯವನ್ನು ಕಾಡುತ್ತದೆ. ಅದಲ್ಲದೆ ಮೊಸರು ಆರೋಗ್ಯಕರ ಚರ್ಮಕ್ಕೆ ಕಾರಣವಾಗಿದ್ದು, ಫೇಸ್ ಪ್ಯಾಕ್’ಗಳಿಗೆ ಅತ್ಯುತ್ತಮವಾದ ಸೌಂದರ್ಯವರ್ಧಕ ಅಂಶವಾಗಿದೆ. ಏಕೆಂದರೆ ಇದು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು ಅದು ಎಕ್ಸ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸಿ, ಎಲ್ಲಾ ಕಲೆಗಳನ್ನು ಗುಣಪಡಿಸುತ್ತದೆ.

Leave A Reply

Your email address will not be published.