ಮನೆಯ ಯಾವ ಕೋಣೆಗೆ ಯಾವ ಬಣ್ಣ ಉತ್ತಮ?
ಮನೆಗೆ ಪೇಯಿಂಟ್ ಮಾಡುವಾಗ ನಮಗೆ ಇಷ್ಟವಾದ ಬಣ್ಣದ ಪೇಯಿಂಟ್ ಮಾಡಿಸುತ್ತೇವೆ. ಆದರೆ ಕೆಲವೊಂದು ಬಣ್ಣ ಕೆಲವೊಂದು ದಿಕ್ಕಿಗೆ ಒಳ್ಳೆಯದಲ್ಲ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹೌದು ವಾಸ್ತು ಪ್ರಕಾರ ಮನೆಯ ಗೋಡೆಗಳ ಬಣ್ಣಗಳು ಕೂಡ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ.
ಗೋಡೆಗಳ ಬಣ್ಣವು ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ. ಸೂಕ್ತವಾದ ಬಣ್ಣ ವನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಯಾವ ಕೋಣೆಯಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು ಎಂಬುದನ್ನು ತಿಳಿಯೋಣ.
• ಮನೆಯ ಹೊರಗಿನ ಗೋಡೆಗಳು ಬಿಳಿ ಅಥವಾ ತಿಳಿ ಹಳದಿ ಬಣ್ಣದಲ್ಲಿದ್ದರೆ ಮನೆಯೊಳಗೆ ನಕರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲವಂತೆ.
• ಮನೆಯಲ್ಲಿ ಡ್ರಾಯಿಂಗ್ ರೂಮ್ ಗೆ ಬಿಳಿ ಅಥವಾ ತಿಳಿ ಹಳದಿ ಬಣ್ಣ ವನ್ನು ಹಾಕಿದರೆ ಒಳ್ಳೆಯದು. ಇದರಿಂದ ಮನೆಯೊಳಗೆ ಪ್ರವೇಶಿಸುವವರ ಮನಸ್ಸು ಶಾಂತವಾಗುತ್ತದೆ.
• ಮಲಗುವ ಕೋಣೆಗೆ ಗುಲಾಬಿ, ತಿಳಿ ನೀಲಿ ಅಥವಾ ತಿಳಿ ಹಸಿರು ಬಣ್ಣ ವನ್ನು ಹಾಕಿ. ಇದು ದಾಂಪತ್ಯ ಜೀವನದಲ್ಲಿ ಮಾಧುರ್ಯವನ್ನು ನೀಡುತ್ತದೆ.
• ಅಡುಗೆ ಮನೆಗೆ ಕೆಂಪು ಅಥವಾ ಕಿತ್ತಳೆ ಬಣ್ಣ ಒಳ್ಳೆಯದು. ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ.
• ಬಾತ್ ರೂಂಗೆ ಬಿಳಿ ಬಣ್ಣವನ್ನು ಹಾಕಿ. ವಾಸ್ತು ಪ್ರಕಾರ ಇದು ಶುಭ ಎನ್ನಲಾಗುತ್ತದೆ.
• ಪೂಜಾ ಮನೆಯ ಅಥವಾ ಸುತ್ತಮುತ್ತಲಿನ ಸ್ಥಳಕ್ಕೆ ಹಳದಿ, ತಿಳಿ ನೀಲಿ ಅಥವಾ ಕಿತ್ತಳೆ ಬಣ್ಣನವನ್ನು ಮಾಡಿದರೆ ಒಳ್ಳೆಯದು.
ಇನ್ನು ಮನೆಯ ಆಗ್ನೇಯ ದಿಕ್ಕಿಗೆ ಬಿಳಿ, ಸಿಲ್ವರ್, ಬೂದು ಬಣ್ಣ ಇವೆಲ್ಲಾ ಒಳ್ಳೆಯದಲ್ಲ. ಆಗ್ನೇಯ ದಿಕ್ಕಿಗೆ ಬಿಳಿ ಬಣ್ಣದ ಪೇಯಿಂಟ್ ಒಳ್ಳೆಯದಲ್ಲ ಆಗ್ನೇಯ ದಿಕ್ಕಿಗೆ ಬಿಳಿ ಬಣ್ಣ, ಮೆಟಲ್, ಬೂದು ಬಣ್ಣ ಒಳ್ಳೆಯದಲ್ಲ ಎಂಬುವುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಆಗ್ನೇಯ ದಿಕ್ಕಿನಲ್ಲಿ ಈ ಬಣ್ಣಗಳಿದ್ದರೆ ಮನೆಯ ಮುಖ್ಯಸ್ಥನಿಗೆ ಅಪಾಯ ಉಂಟಾಗುತ್ತದೆ ಎಂದು ಹೇಳಲಾಗುವುದು.
ಆಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣ ಕೂಡ ಬಳಸಬೇಡಿ
ಆಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣವಿದ್ದರೆ ಮನೆಗೆ ಹಾನಿಯುಂಟಾಗುವುದು ಎಂದು ಹೇಳಲಾಗುವುದು. ಅಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣವಿದ್ದರೆ ಮನೆಯ ಒಡೆಯನಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಮನೆಯ ಕಿರಿಯ ಮಗನಿಗೆ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮುಖ್ಯವಾಗಿ ನಿಮ್ಮ ಮನೆಗೆ ಪೇಯಿಂಟ್ ಮಾಡಿ ಸಾಕಷ್ಟು ವರ್ಷಗಳಾಗಿದ್ದರೆ ಕೂಡಲೇ ಬಣ್ಣ ಹೊಡೆಸಿ. ಆ ಮೂಲಕ ಮನೆ ನೋಡಿದ ತಕ್ಷಣ ಮನಸ್ಸು ಪ್ರಫುಲ್ಲವಾಗುತ್ತದೆ. ಇದು ಮಾನಸಿಕ ಆರೋಗ್ಯ ಮತ್ತು ಮನಸ್ಸಿನ ದೃಢತೆಯನ್ನು ಹೆಚ್ಚಿಸುತ್ತದೆ.