ಅಬ್ಬಾ ! ಏರಿತು ಟೀ ಪುಡಿ, 1 ಕೆಜಿಗೆ ಬರೋಬ್ಬರಿ 1600 ರೂ!!!
ಪಾಕಿಸ್ತಾನದ ಜನತೆಗೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಬಿಸಿ ತುಪ್ಪದಂತೆ ಪರಿಣಮಿಸುತ್ತಿದೆ. ಹೌದು!!ಪಾಕಿಸ್ತಾನದಲ್ಲಿ ಕಳೆದ ತಿಂಗಳು ಗೋಧಿಹಿಟ್ಟಿನ ಬೆಲೆ ಕೆಜಿಗೆ 500 ರೂ.ನಿಂದ 1000 ರೂ.ವರೆಗೆ ತಲುಪಿತ್ತು. ಮತ್ತೊಂದೆಡೆ ಚಿಕನ್ ದರ ಕೇವಲ ಒಂದು ತಿಂಗಳಲ್ಲಿ 300 ರೂ.ನಷ್ಟು ಏರಿಕೆಯಾಗಿ ಕೆಜಿಗೆ 700 ರು.ಗೆ ತಲುಪಿದೆ. ಇದರ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಒಂದು ಕೆಜಿ ಬ್ರಾಂಡೆಡ್ ಟೀಪುಡಿ ಕಳೆದ 15 ದಿನಗಳ ಹಿಂದೆ ಈ ಬೆಲೆ 1,100 ರೂ.ಗಳಿದ್ದ ಬೆಲೆ ಇದೀಗ, 1600ರೂ. ಆಗಿದ್ದು ಪಾಕಿಸ್ತಾನದ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ.
ಪಾಕಿಸ್ತಾನ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆ ಕಳೆದ ಡಿಸೆಂಬರ್ ಕೊನೆಗೆ ಪಾಕ್ ಬಂದರಿಗೆ ಬಂದು ತಲುಪಿರುವ ಟೀಪುಡಿಯ 250 ಕಂಟೈನರ್‌ಗಳನ್ನು ಕೆಳಕ್ಕಿಳಿಸಲು ಕೂಡ ಹಣವಿಲ್ಲದೆ ಇರುವುದರಿಂದ ಲೋಡ್ ಗಳನ್ನು ಇಳಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ವಿದೇಶಿ ವಿನಿಮಯ ಸಂಗ್ರಹ (Foreign exchange collection) ಖಾಲಿಯಾಗಿರುವುದರಿಂದ ಕೇವಲ ಅತೀ ಅಗತ್ಯವಾದ ವಸ್ತುಗಳನ್ನು ಮಾತ್ರವೇ ಪಾಕ್ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು ಹೀಗಾಗಿ ಚಹಾ ಆಮದಿಗೂ (Tea Powder) ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.
ಪಾಕಿಸ್ತಾನದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಫ್ಪಿಸಿಸಿಐ) ಟೀ ವಿಭಾಗದ ಸ್ಥಾಯೀ ಸಮಿತಿ ಕಾರ್ಯದರ್ಶಿ ಝೀಶನ್ ಮಖೂದ್ ಈ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ವಿದೇಶಿ ವಿನಿಮಯದ ಪ್ರಮಾಣ ಕಡಿಮೆಯಿರುವ ಹಿನ್ನೆಲೆ ಆಮದು ಮಾಡಿಕೊಳ್ಳುವುದು ಕಷ್ಟ ಸಾಧ್ಯ ಎನ್ನಲಾಗಿದ್ದು, ಹೀಗಾಗಿ ಮಾರ್ಚ್ ವೇಳೆಗೆ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ವಿದೇಶದಿಂದ ಆಮದು ಮಾಡಿಕೊಂಡು ಬಂದರಿನಲ್ಲಿರುವ (Fort) ಚಹಾ ಖರೀದಿ ಕೂಡ ವ್ಯಾಪಾರಸ್ಥರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಮುಂದಿನ 180 ದಿನಗಳ ನಂತರದ ಡಾಲರ್ ಲೆಕ್ಕಾಚಾರದಲ್ಲಿ ಚಹಾ ಖರೀದಿಗೆ ನೀಡಬೇಕಾದ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ, 6 ತಿಂಗಳ ಬಳಿಕ ಡಾಲರ್ ಎದುರು ಪಾಕಿಸ್ತಾನದ (Pakistan) ರುಪಾಯಿ ಮೌಲ್ಯ ಇಳಿಕೆ ಕಂಡರೆ ವ್ಯಾಪಾರಿಗಳಿಗೆ ಆರ್ಥಿಕ ಸಮಸ್ಯೆ ಎದುರಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಬಂದರಿಗೆ ಬಂದಿರುವ ಚಹಾಪುಡಿಯನ್ನು ಯಾರು ಖರೀದಿ ಮಾಡುವತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಸದ್ಯ, ಖ್ಯಾತ ಅರ್ಥಶಾಸ್ತ್ರಜ್ಞರು ಪಾಕಿಸ್ತಾನವನ್ನು ದಿವಾಳಿಯ ಅಂಚಿಗೆ ತಂದಿರುವ ಆರ್ಥಿಕ ಸಂಕಷ್ಟದ ಕಾರಣವನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.