Good News : ಅಡಕೆ ಬೆಳೆಗಾರರಿಗೆ ಬಜೆಟ್ ನಲ್ಲಿ ಆರ್ಥಿಕ ನೆರವು – ಸಿಎಂ ಬೊಮ್ಮಾಯಿ ಘೋಷಣೆ
ಮಂಗಳೂರು : ಬೊಮ್ಮಾಯಿ ಸರ್ಕಾರವು ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ಬಾರಿಯ ಬಜೆಟ್’ನಲ್ಲಿ ಅಡಕೆ ಬೆಳೆಗಾರರಿಗೆ ಪ್ರತ್ಯೇಕ ಅನುದಾನ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಎಲೆಚುಕ್ಕೆ ರೋಗಕ್ಕೆ ಈಗಾಗಲೆ ರಾಜ್ಯ ಸರ್ಕಾರವು ಅಡಿಕೆ ಬೆಳೆಗಾರರಿಗೆ ಪರಿಹಾರವನ್ನು ಘೋಷಿಸಿದೆ. ಇದೀಗ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಜೆಟ್ ನಲ್ಲೂ ಪ್ರತ್ಯೇಕ ಅನುದಾನವನ್ನು ನೀಡಲಿದೆ.
ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅಡಕೆ ಸಂಶೋಧನಾ ಕೇಂದ್ರಕ್ಕೆ ಸರ್ಕಾರ 10 ಕೋಟಿ ರೂ. ನೀಡಿದ್ದು, ಎಲೆ ಚುಕ್ಕಿ ರೋಗ ಸೇರಿ ಬೆಳಗಾರರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕುವಂತಾಗಬೇಕು. ಈ ಭಾಗದ ಕೃಷಿಕರ ಬಹುಕಾಲದ ಬೇಡಿಕೆಯಾದ ಕಾಣೆ, ಬಾಣೆ ಸೊಪ್ಪಿನಬೆಟ್ಟ ಜಮೀನನ ಸಮಸ್ಯೆ ಹೋಗಲಾಡಿಸಲು ನಿರ್ಧಾರಿಸಲಾಗಿದೆ ಎಂದರು.
ಅಡಿಕೆ ಬೆಳೆಗಾರರ ಸಂಕಷ್ಟಗಳಿಗೆ ಕಾಂಪ್ಕೋ ಸ್ಪಂದಿಸುತ್ತಿದೆ. ಪ್ರಸ್ತುತ 6.11 ಲಕ್ಷ ಹೆಕ್ಟರ್ ವರೆಗೆ ಅಡಿಕೆ ಬೆಳೆಯು ವ್ಯಾಪಿಸಿದೆ. ಈ ಭಾಗದ ಕೃಷಿಕರ ರಕ್ಷಣೆಗೆ ನಮ್ಮ ಸರ್ಕಾರ ಸಿದ್ದವಾಗಿದೆ ಎಂದು ತಿಳಿಸಿದರು.