7th Pay Commission : ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಗುಡ್ ನ್ಯೂಸ್ !
ಕೊರೋನಾ ಸಮಯದಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಬಾಕಿ ಆಗಿತ್ತು. 18 ತಿಂಗಳಿನಿಂದ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ಡಿಎ ಪಾವತಿ ಬಾಕಿ ಉಳಿದಿದ್ದು, ಈ ಬಾಕಿ ಆಗಿದ್ದ ಡಿಎ ಬಗ್ಗೆ ಸರ್ಕಾರವು ಸದ್ಯದಲ್ಲೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಶೀಘ್ರವೇ ಸಂತಸದ ಸುದ್ದಿ ಸಿಗಲಿದೆ ಎನ್ನಲಾಗಿದೆ.
2020 ರ ಜನವರಿಯಿಂದ 2021ರ ಜೂನ್‌ವರೆಗೆ ತುಟ್ಟಿಭತ್ಯೆ ಬಿಡುಗಡೆ ಮಾಡಬೇಕು ಎಂದು ಕೇಂದ್ರ ನೌಕರರು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಈ ಬಗ್ಗೆ ಚರ್ಚಿಸಲು ಸಮಯಾವಕಾಶ ನೀಡಬೇಕೆಂದು ಸಂಪುಟ ಕಾರ್ಯದರ್ಶಿಗೆ ಜೆಸಿಎಂ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಡಿಎ ನೌಕರರ ಹಕ್ಕು, ಶೀಘ್ರವೇ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
7 ನೇ ವೇತನ ಆಯೋಗದ ಅಡಿಯಲ್ಲಿ ಬಾಕಿ ಉಳಿದಿರುವ ಡಿಎ ಬೇಡಿಕೆಗೆ ಸರ್ಕಾರ ಸಮ್ಮತಿ ನೀಡಿದರೆ, ಸರ್ಕಾರಿ ಉದ್ಯೋಗಿಗಳ ಭಾರೀ ಲಾಭ ಬರಲಿದೆ. ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಆಗಲಿದ್ದು, ಬ್ಯಾಂಕ್ ಖಾತೆಗೆ ಭಾರೀ ಹಣ ಬೀಳಲಿದೆ.
ಹಂತ-13 ಅಧಿಕಾರಿಗಳು ಈ ತುಟ್ಟಿಭತ್ಯೆಯಿಂದ 1,23,100 ರಿಂದ 2,15,900 ರೂ. ಮತ್ತು ಹಂತ-14 ಗಾಗಿ, ಡಿಎ ಬಾಕಿಯು ರೂ 1,44,200 ರಿಂದ ರೂ 2,18,200 ರ ನಡುವೆ ಇರಲಿದೆ. ಹೀಗಾದರೆ, 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷಕ್ಕೂ ಅಧಿಕ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ . ಡಿಎ ಬಾಕಿ ಇರುವ ಹಣವನ್ನು ನೌಕರರಿಗೆ ಅವರ ವೇತನದ ಸ್ಕೇಲ್ ಆಧರಿಸಿ ನೀಡಲಾಗುತ್ತದೆ ಎನ್ನಲಾಗಿದೆ. ಹೋಳಿ ಸಮಯದಲ್ಲಿ ಈ ಬಾಕಿ ಹಣ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.