KIOCL Recruitment 2023 : KIOCL ನಲ್ಲಿ ಉದ್ಯೋಗ, ಮಾಸಿಕ ಎರಡು ಲಕ್ಷ ಸಂಬಳ!

ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮತ್ತು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಇನ್ನು ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ಸಿಗಲಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಹುದ್ದೆಯ ವಿವರ : ಸೀನಿಯರ್ ಮೆಡಿಕಲ್ ಆಫೀಸರ್ – 2, ಮ್ಯಾನೇಜರ್ ಪೋಸ್ಟ್ – 1

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 16-02-2023
ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್​ 2, 2023
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್​ 6, 2023

ವಿದ್ಯಾರ್ಹತೆ : ಸೀನಿಯರ್ ಮೆಡಿಕಲ್ ಆಫೀಸರ್ – ಎಂಬಿಬಿಎಸ್
ಮ್ಯಾನೇಜರ್- ಮೆಕ್ಯಾನಿಕಲ್/ ಎಲೆಕ್ಟ್ರಿಕಲ್​​ನಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿ

ವಯೋಮಿತಿ ಸಡಿಲಿಕೆ : ಒಬಿಸಿ (NCL) ಅಭ್ಯರ್ಥಿಗಳು – 3 ವರ್ಷ
SC ಅಭ್ಯರ್ಥಿಗಳು – 5 ವರ್ಷ
PWD (ಜನರಲ್) ಅಭ್ಯರ್ಥಿಗಳು – 10 ವರ್ಷ
PWD (OBC) ಅಭ್ಯರ್ಥಿಗಳು – 13 ವರ್ಷ
PWD (SC) ಅಭ್ಯರ್ಥಿಗಳು – 15 ವರ್ಷ

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ : SC/ST/PWD/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಎಲ್ಲಾ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ಇದ್ದು, 500 ರೂ. ಪಾವತಿಸಬೇಕು.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್​

ಅಭ್ಯರ್ಥಿಗಳು ಪೋಸ್ಟ್​ ಮುಖಾಂತರ ಅರ್ಜಿ ಸಲ್ಲಿಸುವುದಾದರೆ, ಅರ್ಜಿ ಭರ್ತಿ ಮಾಡಿ, ಅದನ್ನು ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ್​ 6, 2023ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ : ಜನರಲ್ ಮ್ಯಾನೇಜರ್ (HR)
ಮಾನವ ಸಂಪನ್ಮೂಲ ಇಲಾಖೆ
KIOCL ಲಿಮಿಟೆಡ್
ಕೋರಮಂಗಲ 2ನೇ ಬ್ಲಾಕ್
ಸರ್ಜಾಪುರ ರಸ್ತೆ
ಬೆಂಗಳೂರು-560034

Leave A Reply

Your email address will not be published.