ಇವುಗಳು ನಿಮ್ಮ ಮನೆ ಮುಂದೆ ಕಂಡರೆ ಅದೃಷ್ಟ ನಿಮ್ಮ ಜೊತೆಗಿರುತ್ತೆ!
ಪ್ರತಿಯೊಂದ್ದು ಶಾಸ್ತ್ರ ರೂಢಿ ಸಂಪ್ರದಾಯಗಳಿಗೂ ತನ್ನದೇ ಆದ ಮಹತ್ವ ಇರುತ್ತದೆ. ನಮ್ಮ ಹಿರಿಯರು, ಸಾದು ಸಂತರು ಯಾವುದೇ ಮಾತನ್ನು ಹೇಳಿದರು ಆ ಮಾತಿನಲ್ಲಿ ಅಥವಾ ಆಚರಣೆ ಅರ್ಥಗರ್ಭಿತವಾಗಿರುತ್ತದೆ. ಇನ್ನು ಪ್ರಾಣಿ-ಪಕ್ಷಿಗಳು ಬಗ್ಗೆ ಶಾಸ್ತ್ರದಲ್ಲಿ ಹಲವಾರು ಅರ್ಥಗಳನ್ನು ತಿಳಿಸಲಾಗಿದೆ. ಹೌದು ಮನೆ ಮುಂದೆ ಈ ಪ್ರಾಣಿಗಳನ್ನು ಕಂಡರೆ ಭಾರೀ ಅದೃಷ್ಟ ಎನ್ನಲಾಗಿದೆ. ಹಿಂದೂ ಧರ್ಮದಲ್ಲಿ ಶಕುನ-ಅಪಶಕುನಗಳನ್ನು ಹೆಚ್ಚಾಗಿ ನಂಬಲಾಗುತ್ತದೆ. ಹಾಗೆಯೇ ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆ ಮುಂದೆ ಕೆಲವು ಪ್ರಾಣಿಗಳನ್ನು ಕಾಣುವುದನ್ನು ಶುಭ ಸಂಕೇತ ಎಂದು ಹೇಳಲಾಗುತ್ತದೆ.
- ಬಿಳಿ ಬಣ್ಣ ಶಾಂತಿಯ ಸಂಕೇತ ಎನ್ನುವುದು ಗೊತ್ತಿರುವ ವಿಚಾರ. ನಿಮ್ಮ ಮನೆಯ ಮುಂದೆ ಬಿಳಿ ಪಾರಿವಾಳ ಕಾಣಿಸಿಕೊಂಡರೆ ನಿಮ್ಮ ಬಹುದಿನದ ಆಸೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬುದರ ಶುಭ ಸೂಚನೆ ಎಂದು ಹೇಳಲಾಗುತ್ತದೆ.
- ಸಾಮಾನ್ಯವಾಗಿ ಸಾವಿರಕಾಲನ್ನು ಕಂಡರೆ ಹೆದರುತ್ತೇವೆ. ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಸಾವಿರಕಾಲು ಕಾಣಿಸಿಕೊಳ್ಳುವುದು ತುಂಬಾ ಶುಭ. ಇದು ಶೀಘ್ರದಲ್ಲೇ ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ ಎಂಬುದನ್ನು ಸೂಚಿಸುತ್ತದೆ.
- ನಾಗರಾಧನೆ ತುಳುನಾಡ ಮಣ್ಣಿನ ಸೊಗಡಿನ ಒಂದು ಅಲಂಕಾರ. ಹಾಗೆಯೇ ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದನ್ನು ಕೂಡ ಶುಭ ಎಂದು ಪರಿಗಣಿಸಲಾಗಿದೆ.
- ನಿಮ್ಮ ಮನೆ ಮುಂದೆ ಕಪ್ಪು ನಾಯಿ ಕಾಣಿಸಿಕೊಂಡರೆ ಶೀಘ್ರದಲ್ಲಿಯೇ ಶನಿಯ ವಕ್ರದೃಷ್ಟಿ ನಿವಾರಣೆ ಆಗಲಿದೆ. ಶನಿ ಮಹಾತ್ಮನು ನಿಮ್ಮ ಮೇಲೆ ಕೃಪೆ ತೋರಲಿದ್ದಾನೆ ಎಂದರ್ಥ.
- ಹಲ್ಲಿ ಬಗೆಗಿನ ಹಲವಾರು ನಂಬಿಕೆಗಳಿವೆ. ಹಾಗೇ ಹಲ್ಲಿ ನಿಮ್ಮ ಮೇಲೆ ಬಿದ್ದರೆ ನೀವು ಹೊಸ ಉಡುಪನ್ನು ಪಡೆಯಲಿದ್ದೀರಿ ಎಂಬುದರ ಸಂಕೇತವಾಗಿದೆ.
- ಯಾರ ಮನೆ ಎದುರು ಕಪ್ಪು ಇರುವೆಗಳು ಕಾಣಿಸಿಕೊಳ್ಳುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಇರುತ್ತೆ ಲಕ್ಷ್ಮಿ ನೆಲೆ ನಿಂತು ಸಂಪೂರ್ಣ ಕೃಪೆಯಿಂದ ಅನುಗ್ರಹದಿಂದ ಅವರನ್ನ ಹರಸುತ್ತಾಳೆ.
ಹಾಗೆಯೇ ಮನೆ ಒಳಗಡೆ ನಾವು ಕೆಲವು ಪ್ರಾಣಿಗಳನ್ನು ಸಾಕುವುದರಿಂದ ಶುಭವಾಗಲಿದೆ. ಹೌದು ಧಾರ್ಮಿಕ ಗ್ರಂಥಗಳ ಪ್ರಕಾರ, ಈ ಕೆಳಗಿನ ಪ್ರಾಣಿಗಳನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತು, ಸಂತೋಷ, ಸಮೃದ್ಧಿ ಮತ್ತು ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.
- ಮೊಲವನ್ನು ಮನೆಯಲ್ಲಿ ಸಾಕುವುದು ಧರ್ಮಗ್ರಂಥಗಳಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯ ಋಣಾತ್ಮಕತೆ ದೂರವಾಗಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಎಲ್ಲಾ ರೀತಿಯ ದುಷ್ಟ ಕಣ್ಣುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಮೊಲವನ್ನು ಅದೃಷ್ಟದ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸಾಕುವುದರಿಂದ ಸಂಪತ್ತು ಕೂಡ ಬರುತ್ತದೆ.
- ಮನೆಯಲ್ಲಿ ಆಮೆಯನ್ನು ಸಾಕುವುದರಿಂದ ಅನೇಕ ರೀತಿಯಲ್ಲಿ ಹಣವನ್ನು ಗಳಿಸಬಹುದು. ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಚಂದ್ರನ ಮೇಲೆ ಮೊಲದ ಆಕಾರದಲ್ಲಿ ಕಾಣುತ್ತದೆ. ಆಮೆ ಆಕಾರದ ಉಂಗುರವನ್ನು ಧರಿಸಿದರೆ ಒಳ್ಳೆಯದು. ಆದರೆ ಇದು ಎಲ್ಲಾ ರಾಶಿಯವರಿಗೆ ಅನ್ವಯಿಸುವುದಿಲ್ಲ.
- ಪಾರಿವಾಳ ಇದೊಂದು ಪಕ್ಷಿಯಾಗಿದ್ದು, ಮನೆಯ ಮೇಲ್ಭಾಗದಲ್ಲಿ ಪಾರಿವಾಳಗಳನ್ನು ಸಾಕುವುದರಿಂದ ಧನಲಕ್ಷ್ಮಿಯು ಒಲಿದು ಬರುತ್ತಾಳೆ ಎಂಬುದು ಪುರಾಣಗಳಲ್ಲಿ ತಿಳಿಸಲಾಗಿದೆ. ಹಾಗೆಯೇ ಇದು ಸತ್ಯ ಕೂಡ. ಪಾರಿವಾಳಗಳಿಗೆ ಕಾಳುಗಳಲ್ಲಿ ಅಕ್ಕಿಯನ್ನು ಕೊಡುವುದು ಉತ್ತಮ.
- ಮೀನುಗಳು ಸಕರಾತ್ಮಕ ಶಕ್ತಿಯನ್ನು ನೀಡುತ್ತದೆ ಈ ಪ್ರಾಣಿ. ಮೀನುಗಳಲ್ಲಿ ಗೋಲ್ಡನ್ ಫಿಶ್ ಮತ್ತು ಕಪ್ಪು ಮೀನುಗಳನ್ನು ಮನೆಯಲ್ಲಿ ಇಡಬೇಕು. ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಹೀಗೆ ನಾನಾ ದೇವರ ವಾಹನಗಳಾದ ವಿವಿಧ ಪ್ರಾಣಿಗಳನ್ನು ಸಾಕಿ ಸಲಹುದರ ಮೂಲಕ ಮನೆಗೆ ಅದೃಷ್ಟ ಖಂಡಿತವಾಗಿ ಒಲಿದು ಬರುತ್ತದೆ. ಇದರ ಸಕರಾತ್ಮಕ ಪ್ರಭಾವವು ಖಂಡಿತವಾಗಿಯೂ ನಿಮಗೆ ತಿಳಿಯುತ್ತದೆ.