Interest Rate Hike : ಬಡ್ಡಿದರ ಹೆಚ್ಚಿಸಿದ ಬ್ಯಾಂಕ್ಗಳು!
ಬ್ಯಾಂಕ್ ಗಳು ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. RBI ರೆಪೊ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಬ್ಯಾಂಕ್ಗಳು ಬಡ್ಡಿದರವನ್ನು ಹೆಚ್ಚಿಸುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದ ನಂತರ ಬ್ಯಾಂಕ್ ಗಳು ಬಡ್ಡಿದರ ಹೆಚ್ಚಿಸಿದೆ.
RBI ರೆಪೊ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ಎಚ್ಡಿಎಫ್ಸಿ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದು, ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಬ್ಯಾಂಕ್ ಆಫ್ ಬರೋಡಾ (BoB) ಸಾಲಗಳ ಮೇಲಿನ ಬಡ್ಡಿಯನ್ನು ಶೇಕಡಾ 0.25 ರಷ್ಟು ಹೆಚ್ಚಿಸಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ರೆಪೊ ದರ ಆಧಾರಿತ ಬಡ್ಡಿ ದರವನ್ನು (ಆರ್ಎಲ್ಎಲ್ಆರ್) ಶೇ.0.25ರಷ್ಟು ಹೆಚ್ಚಿಸಲಾಗಿದ್ದು, ಶೇ.8.75ರಿಂದ ಶೇ.9.0ಕ್ಕೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಹೊಸ ದರಗಳು ಫೆಬ್ರವರಿ 9 ರಿಂದ ಜಾರಿಗೆ ಬಂದಿದ್ದು, ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಆರ್ಬಿಐ ಬುಧವಾರ ರೆಪೊ ದರವನ್ನು ಶೇ 0.25 ರಿಂದ ಶೇ 6.5 ರಷ್ಟು ಹೆಚ್ಚಿಸಿತ್ತು.
ಬ್ಯಾಂಕ್ ಆಫ್ ಬರೋಡಾ ಕನಿಷ್ಠ ವೆಚ್ಚ ಆಧಾರಿತ ಬಡ್ಡಿ ದರವನ್ನು (MCLR) ಶೇಕಡಾ 0.05 ರಷ್ಟು ಹೆಚ್ಚಿಸಿದೆ. ಈ ಹೊಸ ದರಗಳು ಫೆಬ್ರವರಿ 12 ರಿಂದ ಜಾರಿಗೆ ಬರಲಿದೆ ಎಂದು BoB ಷೇರು ಮಾರುಕಟ್ಟೆಗೆ ತಿಳಿಸಿದೆ.
ಇದಲ್ಲದೆ, ರಾತ್ರಿಯ ಸಾಲಗಳ MCLR ಅನ್ನು ಶೇ. 7.85 ರಿಂದ ಶೇ. 7.90 ಕ್ಕೆ ಹೆಚ್ಚಿಸಲಾಗಿದ್ದು, ಒಂದು ತಿಂಗಳ MCLR ಅನ್ನು ಶೇ. 8.15 ರಿಂದ ಶೇ. 8.20 ಕ್ಕೆ ಹೆಚ್ಚಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾ ಮೂರು ತಿಂಗಳ ಅವಧಿಗೆ ಸಾಲಗಳ ಮೇಲಿನ MCLR ಅನ್ನು ಶೇ. 8.25 ರಿಂದ 8.30 ಕ್ಕೆ ಹೆಚ್ಚಿಸಿದ್ದು, ಒಂದು ವರ್ಷದ ಅವಧಿಗೆ ಸಾಲದ ಮೇಲಿನ ಬಡ್ಡಿಯನ್ನು ಶೇ. 8.50 ರ ಬದಲು ಶೇ. 8.55 ಕ್ಕೆ ಇಳಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.