Jeevan Saral : ರೂ.182 ಹೂಡಿಕೆ ಮಾಡಿದರೆ ನೀವು ಭರ್ಜರಿ 15 ಲಕ್ಷ ಪಡೆಯುವಿರಿ!
ಭವಿಷ್ಯದ ದೃಷ್ಟಿಯಿಂದ ಉಳಿತಾಯ ಬಹಳ ಮುಖ್ಯ. ಇದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕೆಲವರು ಉತ್ತಮ ಆದಾಯ ಗಳಿಸಲು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಇನ್ನೂ ಕೆಲವರು ತೆರಿಗೆ ಉಳಿಸುವ ಸಲುವಾಗಿ ಹಣವನ್ನು ಹೂಡಿಕೆ ಮಾಡುತ್ತಾರೆ.
ಮುಖ್ಯವಾಗಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯೋಜನೆಗಳು ಮತ್ತು ಅಂಚೆ ಕಚೇರಿ ಯೋಜನೆಗಳು ಹೂಡಿಕೆ ಮಾಡಲು ಸುರಕ್ಷಿತವಾಗಿದೆ, ಹಾಗೆಯೇ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗುವ ಯೋಜನೆಗಳಾಗಿದೆ.
ಇದೀಗ ಭಾರತೀಯ ಜೀವ ವಿಮಾ ನಿಗಮದ ಪ್ರಖ್ಯಾತ ಯೋಜನೆಗಳಲ್ಲಿ ಎಲ್‌ಐಸಿ ಜೀವನ ಸರಳ ಯೋಜನೆಯೂ ಒಂದು. ಸುರಕ್ಷತೆಯ ಜೊತೆಗೆ ಪಾಲಿಸಿದಾರರು ಹಣವನ್ನು ಉಳಿತಾಯ ಮಾಡಲೂ ಸಾಧ್ಯವಾಗುವಂತಹ ಯೋಜನೆ ಇದಾಗಿದೆ. ಓರ್ವ ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಹಣಕಾಸು ಸುರಕ್ಷತೆಯನ್ನು ಈ ಯೋಜನೆ ನೀಡುತ್ತದೆ.
ಅಂದರೆ ಪಾಲಿಸಿದಾರರು ಮೆಚ್ಯೂರಿಟಿಗೂ ಮುನ್ನ ಸಾವನ್ನಪ್ಪಿದರೆ ಕುಟುಂಬಸ್ಥರಿಗೆ ಡೆತ್ ಬೆನಿಫಿಟ್ ಲಭ್ಯವಾಗಲಿದೆ. ಭರವಸೆ ನೀಡಿದ ಮೊತ್ತ ಮತ್ತು ಬೋನಸ್‌ಗಳು ಸೇರ್ಪಡೆಯಾಗಿ ಡೆತ್ ಬೆನಿಫಿಟ್ ನೀಡಲಾಗುತ್ತದೆ. ಪಾಲಿಸಿದಾರರ ಕುಟುಂಬವು, ಪಾಲಿಸಿದಾರರು ಜೀವಂತವಾಗಿಲ್ಲದ ಸಂದರ್ಭದಲ್ಲಿ ಆರ್ಥಿಕವಾಗಿ ಸುರಕ್ಷಿತರಾಗಿರಬೇಕೆಂಬುವುದು ಇದರ ಉದ್ದೇಶವಾಗಿದೆ.
ಸದ್ಯ ಈ ಮೇಲಿನ ಪಾಲಿಸಿ ಮಾಡ ಬಯಸುವವರು ತಮ್ಮ ಸಮೀಪದ ಎಲ್‌ಐಸಿ ಬ್ರಾಂಚ್‌ಗೆ ಭೇಟಿ ನೀಡಿ ಎಲ್‌ಐಸಿಯ ಈ ಜೀವನ ಸರಳ ಯೋಜನೆಯ ಚಂದಾದಾರಿಕೆಯನ್ನು ಮಾಡಿಕೊಳ್ಳಬಹುದು. ಎಲ್‌ಐಸಿ ಏಜೆಂಟ್‌ಗಳ ಮೂಲಕವು ಈ ಯೋಜನೆಯನ್ನು ನೀವು ಖರೀದಿ ಮಾಡಲು ಸಾಧ್ಯವಾಗಲಿದೆ. ಎಲ್‌ಐಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೂ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದೆ ಮತ್ತು ಪಾರದರ್ಶಕವಾಗಿದೆ. ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಪಾಲಿಸಿದಾರರು ತಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣಕಾಸು ಮಾಹಿತಿಯನ್ನು ನೀಡಬೇಕಾಗುತ್ತದೆ.
ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ಹೂಡಿಕೆ ಮಾಡಿದಲ್ಲಿ 182 ರೂ ಹೂಡಿಕೆ ಮಾಡಿ, 15.5 ಲಕ್ಷ ರೂ ರಿಟರ್ನ್ ಪಡೆಯಬಹುದು. ಅಂದರೆ ಎಲ್‌ಐಸಿ ಜೀವನ ಸರಳ ಯೋಜನೆ ಉದಾಹರಣೆ: 30 ವರ್ಷ ಪ್ರಾಯದ ರಾಮ ಎಂಬ ವ್ಯಕ್ತಿ ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಯೋಜನೆಯ ಮೊತ್ತ 10 ಲಕ್ಷ ರೂಪಾಯಿ ಆಗಿದ್ದು, ಪ್ರೀಮಿಯಂ ಪಾವತಿ ಅವಧಿ 15 ವರ್ಷವಾಗಿದೆ. ಪಾಲಿಸಿ ಅವಧಿ 20 ವರ್ಷ ಎಂದು ರಾಮ ಆಯ್ಕೆ ಮಾಡಿದ್ದಾರೆ. 15 ವರ್ಷದ ಬಳಿಕ ರಾಮನಿಗೆ ಮೆಚ್ಯೂರಿಟಿ ಮೊತ್ತ 15.5 ಲಕ್ಷ ರೂಪಾಯಿ ಲಭ್ಯವಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದ 10 ಲಕ್ಷ ಹಾಗೂ ಬೋನಸ್ ರೂಪದಲ್ಲಿ 5.5 ಲಕ್ಷ ರೂಪಾಯಿ ಸೇರಿದೆ. ಒಂದು ವೇಳೆ ರಾಮ ಮೆಚ್ಯೂರಿಟಿಗೂ ಮುನ್ನ ಸಾವನ್ನಪ್ಪಿದರೆ, ನಾಮಿನಿಗೆ 15.5 ಲಕ್ಷ ರೂಪಾಯಿ ಡೆತ್ ಬೆನಿಫಿಟ್ ಲಭ್ಯವಾಗಲಿದೆ.
ಯೋಜನೆಯ ಪ್ರಯೋಜನಗಳು:
- ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ನಾವು ಡೆತ್ ಬೆನಿಫಿಟ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
- ಪ್ರೀಮಿಯಂ ಪಾವತಿ ಅವಧಿಯಲ್ಲಿ ಬೇರೆ ಬೇರೆ ಆಯ್ಕೆಗಳು ನಮಗೆ ಲಭ್ಯವಿದೆ. ಪ್ರೀಮಿಯಂ ಪಾವತಿಯನ್ನು ವಾರ್ಷಿಕವಾಗಿ, ಅರ್ಧವಾರ್ಷಿಕವಾಗಿ, ತ್ರೈಮಾಸಿಕವಾಗಿ, ಮಾಸಿಕವಾಗಿ ಪಾವತಿ ಮಾಡುವ ಆಯ್ಕೆಯಲ್ಲಿ ಪಾಲಿಸಿದಾರರೇ ಬೇಕಾದ ಆಯ್ಕೆಯನ್ನು ಮಾಡಬಹುದು.
- ಹಾಗೆಯೇ ಎಲೆಕ್ಟ್ರಾನಿಕ್ ವಿಧಾನದಲ್ಲಿ ಪ್ರೀಮಿಯಂ ಪಾವತಿ ಅವಕಾಶವಿದೆ. ಅಂದರೆ ಇ-ವಹಿವಾಟಾಗಿದೆ. ಪ್ರೀಮಿಯಂ ಪಾವತಿ ಸರಳಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
- ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ನೀವು ಜೀವ ವಿಮೆ ಸುರಕ್ಷತೆಯನ್ನು ಪಡೆದುಕೊಳ್ಳುವುದರೊಂದಿಗೆ ಉಳಿತಾಯವನ್ನು ಕೂಡಾ ಮಾಡಲು ಸಾಧ್ಯವಾಗುತ್ತದೆ.
- ಎರಡೂ ಆಯ್ಕೆಯನ್ನು ನೀಡುವ ಎಲ್‌ಐಸಿ ಜನಪ್ರಿಯ ಯೋಜನೆಗಳಲ್ಲಿ ಇದು ಒಂದಾಗಿದೆ. ಯಾರು ಜೀವ ವಿಮೆಯೊಂದಿಗೆ ದೀರ್ಘಾವಧಿ ಹೂಡಿಕೆ ಆಯ್ಕೆಯನ್ನು ಮಾಡಲು ಬಯಸುತ್ತಾರೋ ಅವರಿಗೆ ಈ ಎಲ್‌ಐಸಿ ಸರಳ ಯೋಜನೆ ಉತ್ತಮ ಆಯ್ಕೆಯಾಗಿದೆ.
- ಹಾಗೆಯೇ ಪ್ರೀಮಿಯಂ ಪಾವತಿ ಅವಧಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆ ಇದಾಗಿದೆ.
ಈ ಮೇಲಿನಂತೆ ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ಹಲವು ಪ್ರಯೋಜನದ ಜೊತೆಗೆ, ಹೂಡಿಕೆ ಮಾಡಲು ಸುರಕ್ಷಿತವಾಗಿದೆ, ಹಾಗೆಯೇ ಅಧಿಕ ರಿಟರ್ನ್ ಪಡೆಯಲು ಸೂಕ್ತವಾದ ಒಂದು ಯೋಜನೆ ಆಗಿದೆ.