ಕಾಂತಾರ : ವರಹಾ ರೂಪಂ ಹಾಡಿನ ಟ್ಯೂನ್‌ ವಿವಾದ : ಕೇರಳ ಹೈಕೋರ್ಟ್‌ನಿಂದ ನಿರ್ಮಾಪಕರು ಹಾಗೂ ರಿಷಬ್‌ ಶೆಟ್ಟಿಗೆ ಬಿಗ್‌ ರಿಲೀಫ್‌!

ಕಾಂತಾರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡಿರುವ ವಿಷಯದ ಮಧ್ಯೆ ಈಗೊಂದು ಮಹತ್ವದ ಮಾಹಿತಿಯೊಂದು ಬಂದಿದೆ. ಈ ಸಿನಿಮಾದ ಹಾಡಿನ ಬಗ್ಗೆ ಬಹಳ ವಿವಾದವೊಂದು ಸೃಷ್ಟಿಯಾಗಿತ್ತು. ʼವರಾಹ ರೂಪಂʼ ಹಾಡಿನ ಟ್ಯೂನ್‌ ನಮ್ಮದು ಅದನ್ನು ಕದಿಯಲಾಗಿದೆ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​​’ನವರು ಆರೋಪ ಮಾಡಿದ್ದರು. ಈ ಪ್ರಕರಣ ಈಗಲೂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ವಿಷಯದಲ್ಲಿ ಈಗ ಹೊಂಬಾಳೆ ಫಿಲ್ಮ್ಸ್‌ ವಿಜಯ್‌ ಕಿರಗಂದೂರು ಹಾಗೂ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಕೇರಳ ಹೈಕೋರ್ಟ್​​ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ರಿಷಬ್ ಹಾಗೂ ವಿಜಯ್​ಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಜತೆಗೆ ಅರ್ಜಿದಾರರಿಗೆ ಷರತ್ತುಗಳನ್ನು ಹಾಕಿದ್ದಾರೆ. ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್​ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರೋವರೆಗೆ ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ..’ ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ’ ಎಂದು ಬದ್ರುದೀನ್ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತೈಕುಡಂ ಬ್ರಿಡ್ಜ್‌ನವರು ಕೋಯಿಕ್ಕೋಡ್‌ನ ಪೊಲೀಸ್‌ ಠಾಣೆಯಲ್ಲಿ ವರಾಹ ರೂಪಂ ಹಾಡಿನಲ್ಲಿ ಬಳಕೆಯಾದ ನವರಸಂ ಟ್ಯೂನ್‌ ಕದಿಯಲಾಗಿದೆ ಎಂಬ ಆರೋಪದ ಮೇರೆಗೆ ದೂರು ದಾಖಲು ಮಾಡಿದ್ದರು. ಈ ಪ್ರಕರಣ ಇನ್ನು ಕೂಡ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

Leave A Reply

Your email address will not be published.