ನಿಮ್ಮವರನ್ನು ಖುಷಿ ಪಡಿಸಲು ಸುವರ್ಣ ಅವಕಾಶ | ಫ್ಲಿಪ್​ಕಾರ್ಟ್​ನಲ್ಲಿ ವಾಲೆಂಟೈನ್ಸ್​ ಡೇ ವಿಶೇಷ ಸೇಲ್

ಪ್ರೀತಿಗಾಗಿ, ಪ್ರೀತಿಸುವವರಿಗಾಗಿ, ಪ್ರೇಮಿಗಳಿಗಾಗಿ, ತಮ್ಮ ಸಂಗಾತಿಗಾಗಿ ಫ್ಲಿಪ್‌ಕಾರ್ಟ್ ಸಿಹಿ ಸುದ್ದಿ ನೀಡಿದೆ. ಹೌದು ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ದರೆ, ನಿಮಗಾಗಿ ಭರ್ಜರಿ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ.

ಹೌದು ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ‘ಫ್ಲಿಪ್ ಹಾರ್ಟ್ ಡೇಸ್’ (Flip Heart Days) ಎಂಬ ವಿಶೇಷ ಮೇಳವನ್ನ ಶುರು ಮಾಡಿದೆ. ಈಗಾಗಲೇ ಲೈವ್ ಆಗಿರುವ ಈ ಸೇಲ್ ಫೆಬ್ರವರಿ 12 ರ ವರೆಗೆ ನಡೆಯಲಿದೆ.

ವಿಶೇಷವೆಂದರೆ ಫ್ಲಿಪ್​ಕಾರ್ಟ್​ನಲ್ಲಿ ವಾಲೆಂಟೈನ್ಸ್​ ಡೇ ಸೇಲ್ ಶುರುವಾಗಿದೆ. ಈಗಾಗಲೇ ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಂದರ್ಭ ನೀವು ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ವಿಶೇಷ ಉಡುಗೊರೆಯನ್ನೂ ನೀಡಿದರೆ ನಿಮ್ಮನ್ನು ಪ್ರೀತಿಸುವವರು ಮತ್ತಷ್ಟು ಖುಷಿ ಪಡಿಸಬಹುದು.

‘ಫ್ಲಿಪ್ ಹಾರ್ಟ್ ಡೇಸ್’ ಎಂಬ ಫೆಬ್ರವರಿ 12 ರ ವರೆಗೆ ನಡೆಯಲಿದ್ದು ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಮುಖ್ಯವಾಗಿ ಒನ್​ಪ್ಲಸ್, ಶವೋಮಿ, ರಿಯಲ್ ಮಿ, ಸ್ಯಾಮ್​ಸಂಗ್ ಕಂಪನಿಯ ಫೋನುಗಳು ಮಾತ್ರವಲ್ಲದೆ ದುಬಾರಿ ಬೆಲೆಯ ಐಫೋನ್​ಗಳನ್ನು ಕೂಡ ಕಡಿಮೆ ದರಕ್ಕೆ ಖರೀದಿಸಬಹುದು. ಹಾಗಾದರೆ ಫ್ಲಿಪ್ ಹಾರ್ಟ್ ಡೇಸ್ ಸೇಲ್​ನಲ್ಲಿ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿರುವ ಪ್ರಸಿದ್ಧ ಸ್ಮಾರ್ಟ್​ಫೋನ್​ಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

  • ರಿಯಲ್ ಮಿ GT ನಿಯೋ 3T:

34,999 ರೂ. ಮೂಲಬೆಲೆ ಹೊಂದಿರುವ ಈ ಸ್ಮಾರ್ಟ್​ಫೋನ್ ಈಗ ಕೇವಲ 24,999 ರೂ. ಗೆ ಸೇಲ್ ಆಗುತ್ತಿದೆ. ರಿಯಲ್ ಮಿ GT ನಿಯೋ 3T ಫೋನ್ ಮೇಲೆ ಶೇ. 28 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ 64 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ನೀಡಲಾಗಿದೆ.

  • ಗ್ಯಾಲಕ್ಸಿ A23:

ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ A23 ಸ್ಮಾರ್ಟ್​ಫೋನನ್ನು ಈಗ 19,499 ರೂ. ಗೆ ಖರೀದಿಸಬಹುದು. ಇದು ಶೇ. 18 ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. 18.500 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ. ಈ ಫೋನ್ 50 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ರಿಯರ್ ಕ್ಯಾಮೆರಾ ಹೊಂದಿದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಅಳವಡಿಸಲಾಗಿದೆ.

  • ಆ್ಯಪಲ್ ಐಫೋನ್ 14: ಕಳೆದ ವರ್ಷ ಬಿಡುಗಡೆ ಆಗಿ ಭರ್ಜರಿ ಸೇಲ್ ಕಂಡ ಆ್ಯಪಲ್ ಕಂಪನಿಯ ಐಫೋನ್ 14 ಅನ್ನು ನೀವು ಕೇವಲ 66,999 ರೂ. ಗೆ ಖರೀದಿಸಬಹುದು. ಇದರ ಮೇಲೆ ಶೇ. 16 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಜೊತೆಗೆ 20,000 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ.
  • ಮೋಟೋರೊಲಾ G52:

ಶೇ. 35 ರಷ್ಟು ರಿಯಾಯಿತಿ ಪಡೆದುಕೊಂಡಿರುವ ಮೋಟೋ G52 ಸ್ಮಾರ್ಟ್​ಫೋನನ್ನು ನೀವು ಈಗ 12,999 ರೂ. ಗೆ ಖರೀದಿಸಬಹುದು. ಇದರಲ್ಲಿ 50 ಮೆಗಾಫಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ನೀಡಲಾಗಿದೆ.

  • ಐಫೋನ್ 13: ಈ ಫೋನ್ ಮೇಲೆ ಶೇ. 11 ರಷ್ಟು ರಿಯಾಯಿತಿ ನೀಡಲಾಗಿದ್ದು 62,049 ರೂ. ಗೆ ಸೇಲ್ ಕಾಣುತ್ತಿದೆ. 23,000 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ಇದೆ. ಇದರ ಜೊತೆಗೆ ಫ್ಲಿಪ್​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಡಿಸ್ಕೌಂಟ್ ಸಿಗುತ್ತದೆ. ಹೆಚ್​ಡಿಎಫ್​ಸಿ ಕಾರ್ಡ್ ದಾರರಿಗೆ 2000 ರೂ. ಗಳ ರಿಯಾಯಿತಿ ಇದೆ.

ಸದ್ಯ ನೀವು ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ವಿಶೇಷ ಉಡುಗೊರೆಯನ್ನೂ ನೀಡಿದರೆ ನಿಮ್ಮನ್ನು ಪ್ರೀತಿಸುವವರು ಮತ್ತಷ್ಟು ಖುಷಿ ಪಡಿಸಬಹುದು ಅದಕ್ಕಾಗಿ ಫ್ಲಿಪ್​ಕಾರ್ಟ್ ಸುವರ್ಣ ಅವಕಾಶ ಒದಗಿಸಿ ಕೊಟ್ಟಿದೆ.

Leave A Reply

Your email address will not be published.