ATM Card Benefits : ಎಟಿಎಂ ಕಾರ್ಡ್ ನ ಹಲವು ಹತ್ತು ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಿದೆ ಮಾಹಿತಿ!

ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿಬಿಟ್ಟಿದೆ. ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ.ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಆದರೆ, ನಾವು ಹೆಚ್ಚಿನ ಸಂದರ್ಭದಲ್ಲಿ ಬಳಕೆ ಮಾಡುವ ಎಟಿಎಂ ನ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು??

 

ATM Card Benefits: ಎಟಿಎಂ ಕಾರ್ಡ್ ಮೂಲಕ ಹಣ ಪಡೆಯಲು, ಠೇವಣಿ ಮಾಡುವ ಸೌಲಭ್ಯದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ!! ಇದನ್ನು ಹೊರತುಪಡಿಸಿ ಎಟಿಎಂ ಕಾರ್ಡ್ ಮೂಲಕ ಇನ್ನೆನೆಲ್ಲಾ ಪ್ರಯೋಜನ ಪಡೆಯಬಹುದು ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ರೆ, ಎಟಿಎಂ ಕಾರ್ಡ್ ನಿಂದ ಆಗುವ ಅನುಕೂಲಗಳು ಯಾವುವು?? ಎಂಬ ಮಾಹಿತಿ ನಿಮಗಾಗಿ.

 

ಇಂದಿನ ಕಾಲದಲ್ಲಿ ನಾವು ಎಷ್ಟೇ ಡಿಜಿಟಲ್ ಮೂಲಕ ಪೇಮೆಂಟ್ ಮಾಡಿದರು ಕೂಡ ಕೆಲವೊಮ್ಮೆ ಸಣ್ಣ ಪುಟ್ಟ ಅಂಗಡಿಗೆ ಹೋದಾಗ ಇಲ್ಲವೇ ಬಸ್ಗಳಲ್ಲಿ ಪ್ರಯಾಣಿಸುವಾಗ ಹೀಗೆ ಹಣದ ಅವಶ್ಯಕತೆ ಎದುರಾಗುತ್ತದೆ. ಹೀಗಾಗಿ, ಎಟಿಎಂ ಎಂಬ ಸಾಧನದ ಮೂಲಕ ಹಣ ವಿತ್ ಡ್ರಾ ಮಾಡೋದು ಕಾಮನ್. ನಾವು ಬ್ಯಾಂಕಿನಲ್ಲಿ ಖಾತೆ ತೆರೆದ ಸಂದರ್ಭದಲ್ಲಿ ಆ ಖಾತೆಗೆ ಡೆಬಿಟ್ ಕಾರ್ಡ್ ಕೂಡ ದೊರೆಯುತ್ತದೆ. ಇದರಿಂದ, ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವಾಗ ಪೇಮೆಂಟ್ ಮಾಡುವ ಜೊತೆಗೆ ನಗದು ಹಿಂಪಡೆಯಲು ಕೂಡ ನೆರವಾಗುತ್ತದೆ. ಇದಲ್ಲದೆ, ಎಟಿಎಂ ಕಾರ್ಡ್ನ ನೆರವಿನಿಂದ ವಿಮೆಗೆ ಸಂಬಂಧಿಸಿದ ಪ್ರಯೋಜನಗಳು ಕೂಡ ಇವೆ. ಎಟಿಎಂ ಕಾರ್ಡಿನ ಮೂಲಕ ಗ್ರಾಹಕರು ರೂ. 25 ಸಾವಿರದಿಂದ ರೂ. 5 ಲಕ್ಷಗಳ ವಿಮಾ ಪ್ರಯೋಜನ ಪಡೆಯಬಹುದಾಗಿದ್ದು, ಆದರೆ, ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ, ಎಷ್ಟೋ ಮಂದಿ ಈ ಪ್ರಯೋಜನದಿಂದ ವಂಚಿತರಾಗುತ್ತಿದ್ದಾರೆ.

 

ಪ್ರಧಾನ ಮಂತ್ರಿ ಜನ್ ಧನ್ ಖಾತೆಗಳಲ್ಲಿ ಲಭ್ಯವಿರುವ ರುಪೇ ಕಾರ್ಡ್ ಮೂಲಕ ಗ್ರಾಹಕರು ರೂ. 1 ರಿಂದ 2 ಲಕ್ಷದವರೆಗೆ ವಿಮಾ ಸುರಕ್ಷತೆಯ ಪ್ರಯೋಜನ ಪಡೆಯಬಹುದಾಗಿದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಅಪಘಾತದಲ್ಲಿ ಮರಣಹೊಂದಿದ ಸಂದರ್ಭದಲ್ಲಿ ಅವನ ಕುಟುಂಬದವರು 5 ಲಕ್ಷದವರೆಗೆ ವಿಮೆಯ ಅನುಕೂಲವನ್ನು ಪಡೆಯಬಹುದಾಗಿದೆ.ಎಟಿಎಂ ಕಾರ್ಡ್ದಾರರು ಅಪಘಾತದಲ್ಲಿ ಮೃತಪಟ್ಟ ವೇಳೆ, ಈ ವಿಮೆಯ ಅನುಕೂಲವನ್ನು ಪಡೆದುಕೊಳ್ಳಲು, ಕಾರ್ಡ್ ದಾರರು ನಾಮಿನಿಯು ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪರಿಹಾರ ನಿಮ್ಮದಾಗಿಸಿಕೊಳ್ಳಲು ಬ್ಯಾಂಕಿಗೆ ಅವಶ್ಯಕವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆ ಬಳಿಕ ನಾಮಿನಿ ವಿಮಾ ಹಕ್ಕು ಪಡೆಯಲು ಅರ್ಹರಾಗುತ್ತಾರೆ.

 

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ, ಎಟಿಎಂ ಕಾರ್ಡ್ ಅನ್ನು ಕನಿಷ್ಠ 45 ದಿನಗಳವರೆಗೆ ಉಪಯೋಗಿಸುವವರು ಮಾತ್ರ ಎಟಿಎಂ ಕಾರ್ಡ್ ವಿಮೆಯ ಅನುಕೂಲವನ್ನು ಪಡೆದುಕೊಳ್ಳಲು ಅರ್ಹರಾಗುತ್ತಾರೆ. ಇದರ ಜೊತೆಗೆ ಯಾವುದೇ ಸರ್ಕಾರಿ ಇಲ್ಲವೇ ಸರ್ಕಾರೇತರ ಬ್ಯಾಂಕಿನ ಎಟಿಎಂ ಕಾರ್ಡ್ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು. ಇದನ್ನು ಹೊರತು ಪಡಿಸಿ, ವಿಮಾ ಪ್ರಯೋಜನವು ನಿಮ್ಮ ATM ಕಾರ್ಡ್ ವರ್ಗವನ್ನು ಅವಲಂಬಿತವಾಗಿರುತ್ತದೆ. ಹೆಚ್ಚು ಮುಖ್ಯವಾಗಿ ಬ್ಯಾಂಕಿನ ATM ಕಾರ್ಡ್ ಬಳಸಿದ 45 ದಿನಗಳಲ್ಲಿ ಸಾವು ಇಲ್ಲವೇ ಅಪಘಾತ ಸಂಭವಿಸಿದರೆ ಅವಲಂಬಿತರು ವಿಮಾ ಪಾಲಿಸಿಯ ಅಡಿಯಲ್ಲಿ ಪರಿಹಾರ ಪಡೆಯಬಹುದಾಗಿದೆ.

 

ಇದರ ಜೊತೆಗೆ ವಿಮೆಯ ಮೊತ್ತವು ಎಟಿಎಂ ಕಾರ್ಡ್ ವರ್ಗದ ಮೂಲಕ ನಿರ್ಣಯ ಮಾಡಲಾಗುತ್ತದೆ. ಕ್ಲಾಸಿಕ್ ಕಾರ್ಡ್ ಮೂಲಕ ರೂ.1 ಲಕ್ಷ, ಪ್ಲಾಟಿನಂ ಕಾರ್ಡ್ನಲ್ಲಿ ರೂ.2 ಲಕ್ಷ, ಸಾಮಾನ್ಯ ಮಾಸ್ಟರ್ ಕಾರ್ಡ್ನಲ್ಲಿ ರೂ.50 ಸಾವಿರ, ಪ್ಲಾಟಿನಂ ಮಾಸ್ಟರ್ ಕಾರ್ಡ್ನಲ್ಲಿ ರೂ.5 ಲಕ್ಷ, ವೀಸಾ ಕಾರ್ಡ್ನಲ್ಲಿ ರೂ.1.5 ರಿಂದ 2 ಲಕ್ಷ ವಿಮಾ ಪ್ರಯೋಜನ ಪಡೆದುಕೊಳ್ಳಬಹುದು.

Leave A Reply

Your email address will not be published.