Good News : ದೇಶದ ರೈತರೇ ನಿಮಗೊಂದು ಸಿಹಿ ಸುದ್ದಿ| ಪಿಎಂ ಕುಸುಮ್ ಯೋಜನೆಯ ಬಗ್ಗೆ ಬಂತು ನೋಡಿ ಬಿಗ್ ಅಪ್ಡೇಟ್
ಕೃಷಿ ಇಂದಿಗೂ ಭಾರತದ ಆರ್ಥಿಕತೆಯ ಪ್ರಮುಖ ಪ್ರೇರಕ ಶಕ್ತಿಯಾಗಿದೆ. ದೇಶವು ಕೃಷಿಯಿಂದ ಉದ್ಯಮದತ್ತ ಸಾಗಿದ್ದರೂ, ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ದೇಶದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಸರ್ಕಾರಿ ಯೋಜನೆಗಳನ್ನು ನಡೆಸುತ್ತಿದೆ. ಅವುಗಳಲ್ಲಿ ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ’ಯು ಕೂಡ ರೈತರಿಗೆ ಪ್ರಯೋಜನ ನೀಡುವ ಒಂದು ಯೋಜನೆಯಾಗಿದೆ. ಈ ಯೋಜನೆಯ ನೆರವಿನಿಂದ ಈಗಾಗಲೆ ರೈತರು ಅಪಾರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದೀಗ ಮೋದಿ ಸರ್ಕಾರವು ರೈತರಿಗೊಂದು ಗುಡ್ ನ್ಯೂಸ್ ನೀಡಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆ ಅವಧಿಯನ್ನು ಮಾರ್ಚ್ 2026 ರವರೆಗೆ ವಿಸ್ತರಿಸಲು ಸರ್ಕಾರವು ನಿರ್ಧರಿಸಿದೆ.
ದೇಶದ 39 ಜಲವಿದ್ಯುತ್ ಯೋಜನೆಗಳ ಪೈಕಿ 9 ಯೋಜನೆಗಳ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಯೋಜನೆಗಳನ್ನ ಪುನರಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಅವಧಿಯನ್ನ ಮಾರ್ಚ್ 2026 ರವರೆಗೆ ವಿಸ್ತರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಯೋಜನೆಯಡಿ ಯೋಜನೆಗಳ ಮರು ಆರಂಭಕ್ಕೆ ಅವಧಿಯನ್ನು ವಿಸ್ತರಿಸುವಂತೆ ರಾಜ್ಯಗಳು ಮತ್ತು ಅನುಷ್ಠಾನ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿದ ನಂತರ ಕೇಂದ್ರವು ಈ ನಿರ್ಧಾರವನ್ನ ತೆಗೆದುಕೊಂಡಿದೆ.
ಪ್ರಧಾನ ಮಂತ್ರಿ ಕುಸುಮ್ ಯೋಜನೆಯನ್ನು ಕೇಂದ್ರವು 2019ರಲ್ಲಿ ರೈತರಿಗೆ ಪರಿಚಯಿಸಿತು. 34,422 ಕೋಟಿ ರೂ.ಗಳಿಂದ ಸ್ಥಾಪನೆಯಾದ ಯೋಜನೆಯು 2022ರ ವೇಳೆಗೆ 30,800 ಮೆಗಾವ್ಯಾಟ್ ಹೆಚ್ಚುವರಿ ಸೌರ ಸಾಮರ್ಥ್ಯವನ್ನ ಹೊಂದುವ ಗುರಿಯೊಂದಿಗೆ ಯೋಜನೆಯ ಅವಧಿಯನ್ನ ಮತ್ತೊಮ್ಮೆ ವಿಸ್ತರಿಸುತ್ತಿದೆ ಎಂದು ಕೇಂದ್ರವು ಘೋಷಿಸಿದೆ. ಈ ಯೋಜನೆಯಡಿ, ಅರ್ಹ ರೈತರಿಗೆ ಸೋಲಾಪ್ ಪಂಪ್ಗಳ ಅಳವಡಿಕೆಗೆ ಸಬ್ಸಿಡಿ ನೀಡುವ ಮೂಲಕ ಸೌರ ಶಕ್ತಿಯನ್ನ ಹೆಚ್ಚಿಸಲು ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ನವೀಕರಿಸಬಹುದಾದ ಇಂಧನ ಸಚಿವ ಆರ್. ಕೆ. ಸಿಂಗ್ ಲೋಕಸಭೆಯಲ್ಲಿ ಈ ವಿಷಯವನ್ನ ಬಹಿರಂಗಪಡಿಸಿದ್ದಾರೆ.
ಪ್ರಧಾನಮಂತ್ರಿ ಕುಸುಮ್ ಯೋಜನೆ ಮೂಲಕ ಸೋಲಾರ್ ಪಂಪ್ ವ್ಯವಸ್ಥೆಯಿಂದ ಸೋಲಾರ್ ಪಂಪ್ ಸಿಸ್ಟಮ್ಗಳನ್ನ ಅಳವಡಿಸಿ, ರೈತರು ತಮ್ಮ ಹೊಲಗಳಿಗೆ ಉಚಿತವಾಗಿ ನೀರಾವರಿ ಮಾಡಬಹುದು. ಸೋಲಾರ್ ಸಿಸ್ಟಮ್’ನ್ನ ಸ್ಥಾಪಿಸುವುದರಿಂದ ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಹಾಗೆಯೇ ವಿದ್ಯುತ್ ಕೂಡಾ ಉತ್ಪಾದಿಸಬಹುದು. ನಿಮ್ಮ ಬಳಕೆಗೆ ಹೆಚ್ಚುವರಿಯಾಗಿ ನೀವು ವಿದ್ಯುತ್ ಉತ್ಪಾದಿಸಿದರೆ ಅದನ್ನು ವಿದ್ಯುತ್ ವಿತರಣಾ ನಿಗಮಕ್ಕೆ ಮಾರಾಟ ಮಾಡುವ ಮೂಲಕ ನೀವು ಹಣವನ್ನು ಗಳಿಸಬಹುದು. ಇದಲ್ಲದೇ, ನಿಮ್ಮ ಬಳಿ ಕೃಷಿಗೆ ಯೋಗ್ಯವಿಲ್ಲದ ಖಾಲಿ ಭೂಮಿ ಇದ್ದರೆ ಅದನ್ನು ಸರ್ಕಾರಕ್ಕೆ ಗುತ್ತಿಗೆ ನೀಡುವುದರಿಂದ ಜಮೀನಿನಲ್ಲಿ ಸೋಲಾರ್ ಸಿಸ್ಟಂ ಅಳವಡಿಸಲು ಸರ್ಕಾರವು ನಿಮಗೆ ಬಾಡಿಗೆ ನೀಡುತ್ತದೆ.
ರೈತರಿಗೆ ವಿವಿಧ ಸವಲತ್ತು ಒದಗಿಸುವುದು ಮುಖ್ಯ ಉದ್ದೇಶ ಹೊತ್ತ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ್ ಮಹಾ ಅಭಿಯಾನ ಅಥವಾ ಕುಸುಮ್ ಯೋಜನೆಯಡಿ ಕೇಂದ್ರ ಸರ್ಕಾರವು ರೈತರಿಗೆ ನೀರಾವರಿಗಾಗಿ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಒದಗಿಸುತ್ತದೆ. ಸೋಲಾರ್ ಪಂಪ್‌ಗಳ ಬಳಕೆಯಿಂದ ದೇಶದಲ್ಲಿ ಕೃಷಿ ಅಭಿವೃದ್ಧಿಯೊಂದಿಗೆ ರೈತರ ಆರ್ಥಿಕ ಸ್ಥಿತಿಯು ಸಮೃದ್ಧವಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್ಗಳನ್ನ ಸ್ಥಾಪಿಸಲು 60% ವರೆಗೆ ಸಹಾಯಧನವನ್ನ ಪಡೆಯಬಹುದು. ಇದರಲ್ಲಿ ಶೇ.30ರಷ್ಟು ಕೇಂದ್ರ ಹಾಗೂ ಶೇ.30ರಷ್ಟು ರಾಜ್ಯ ಸರಕಾರ ನೀಡುತ್ತಿದೆ. 30ರಷ್ಟು ಸಾಲವನ್ನ ಬ್ಯಾಂಕ್ನಿಂದ ಪಡೆದು ಉಳಿದ ಶೇ.10ರಷ್ಟು ರೈತರಿಗೆ ನೀಡಲಾಗುವುದು.
ventolin no prescription: Buy Albuterol for nebulizer online – ventolin order online without prescription
buy ventolin over the counter australia
prednisone 20mg: buy prednisone online paypal – can i buy prednisone online without prescription
lasix 40mg: cheap lasix – generic lasix
neurontin capsules 100mg: neurontin mexico – how much is neurontin pills
canadian drug pharmacy: Cheapest online pharmacy – my canadian pharmacy