LeaveEncashment : ರಜೆ ನಗದೀಕರಣದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ ! ಇಲ್ಲಿದೆ ಡಿಟೇಲ್ಸ್
ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ ಅವರಿಗೆ ಪ್ರಯೋಜನವಾಗಲಿದೆ. ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.
ಭಾರತದ ಕಾರ್ಮಿಕ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ವೇತನದಾರ ಉದ್ಯೋಗಿಯು ವಾರ್ಷಿಕವಾಗಿ ಕನಿಷ್ಠ ಪಾವತಿ ರಜೆಯನ್ನು ಪಡೆಯಲು ಅರ್ಹನಾಗಿದ್ದಾನೆ. ಅಲ್ಲದೆ ಈ ರಜೆಗಳನ್ನು ಪ್ರತಿ ವರ್ಷ ತೆಗೆದುಕೊಳ್ಳಲಾಗುವುದಿಲ್ಲ. ಇದು ಮುಂದಿನ ವರ್ಷದ ಪಾವತಿ ರಜೆಗಳ ಜತೆ ಸೇರ್ಪಡೆಯಾಗುತ್ತಾ ಹೋಗುತ್ತದೆ. ಇಂತಹ ರಜೆಗಳನ್ನು ನಿವೃತ್ತಿಯಾಗುವ ಸಂದರ್ಭದಲ್ಲಿ ನಗದೀಕರಣ ಮಾಡಿಕೊಳ್ಳಲು ಉದ್ಯೋಗಿಗೆ ಅವಕಾಶ ಇರುತ್ತದೆ. ಹೀಗೆ ರಜೆಯ ಬದಲಿಗೆ ಉದ್ಯೋಗಿಯು ನಗದನ್ನು ಪಡೆಯುವ ಪ್ರಕ್ರಿಯೆಯನ್ನು ರಜೆ ನಗದೀಕರಣ ಅಥವಾ ಲೀವ್ ಎನ್ಕ್ಯಾಶ್ಮೆಂಟ್ ಎಂದು ಕರೆಯಲಾಗುತ್ತದೆ.
ಸದ್ಯ ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ ಅವರಿಗೆ ನಿವೃತ್ತಿಯ ಸಂದರ್ಭದಲ್ಲಿ ಪ್ರಯೋಜನವಾಗಲಿದೆ. ಅವರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿದರೂ ಹಳೆಯ ತೆರಿಗೆ ಪದ್ಧತಿ ಆಯ್ದುಕೊಂಡರೂ ಅವರಿಗೆ ಈ ಪ್ರಯೋಜನ ದೊರೆಯಲಿದೆ ಎಂದು ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.
ರಜೆ ನಗದೀಕರಣವು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಉದ್ಯೋಗದ ಸಂದರ್ಭದಲ್ಲಿ ರಜೆ ನಗದೀಕರಣ ಮಾಡಿಸಿಕೊಂಡರೆ ಅದನ್ನು ವೇತನದಿಂದ ಗಳಿಸಿದ ಆದಾಯ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 89 ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಇದಕ್ಕಾಗಿ 10ಇ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ, ಇದೀಗ ಸರ್ಕಾರವು ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ವಿಸ್ತರಿಸುವುದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.
ಉದ್ಯೋಗಿಗಳು ನಿವೃತ್ತರಾದಾಗ ಸಿಗುವ ಗಳಿಕೆ ರಜೆ ನಗದೀಕರಣ ಸೌಲಭ್ಯದ ಮೇಲೆ ಈವರೆಗೆ 3 ಲಕ್ಷ ರೂ.ಗೆ ಮಾತ್ರ ತೆರಿಗೆ ವಿನಾಯಿತಿ ದೊರೆಯುತ್ತಿತ್ತು. ಸರ್ಕಾರೇತರ ಕ್ಷೇತ್ರದ ಉದ್ಯೋಗಿಗಳಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ವಿಸ್ತರಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಇದು 2023ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ. 22 ಲಕ್ಷ ರೂ. ವಿನಾಯಿತಿ ವಿಸ್ತರಣೆಯ ಪ್ರಮಾಣ ಶೇ 30ರಷ್ಟಾಗಲಿದ್ದು, ಉದ್ಯೋಗಿಗಳಿಗೆ ಒಟ್ಟಾರೆ ಅಂದಾಜು 7 ಲಕ್ಷ ರೂ.ನಷ್ಟು ಪ್ರಯೋಜನ ದೊರೆಯಲಿದೆ ಎಂದು ಆದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹೊಸ ಗಳಿಕೆ ರಜೆ ನಗದೀಕರಣ ನಿಯಮವು ಏಮ್ಸ್ ಸೇರಿದಂತೆ ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿರುವ ನೌಕರರಿಗೂ ಅನ್ವಯವಾಗಲಿದೆ ಎಂದು ಆದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.