KPSC : ಕೆಪಿಎಸ್‌ಸಿ ಇಂದ ಡಾಟಾ ಎಂಟ್ರಿ ಆಪರೇಟರ್‌, ಸ್ಟೆನೋಗ್ರಾಫರ್, ಡ್ರೈವರ್, ಗ್ರೂಪ್‌ ಡಿ ಹುದ್ದೆಗಳ ನೇಮಕಾತಿ!

ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ  ಟೆಂಡರ್ ಕರೆಯಲಾಗಿದೆ.  ಬೆರಳಚ್ಚುಗಾರರು / ದತ್ತಾಂಶ ನಮೂದಕರು, ವಾಹನ ಚಾಲಕರು ಮತ್ತು ಗ್ರೂಪ್‌-ಡಿ ಸಿಬ್ಬಂದಿಗಳ ನೇಮಕಾತಿಗೆ ಸಂಕ್ಷಿಪ್ತ ಅಧಿಸೂಚನೆ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಹೊರಗುತ್ತಿಗೆ ಮೇಲೆ ಸಿಬ್ಬಂದಿಗಳನ್ನು ನೀಡಲು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಮೇಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಆಸಕ್ತರು ಟೆಂಡರ್‌ ಅರ್ಜಿ ಸಲ್ಲಿಸುವ ಮೂಲಕ ಸಿಬ್ಬಂದಿಗಳನ್ನು ನೀಡಬಹುದಾಗಿದೆ. ನೇರವಾಗಿ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದು. ಆದರೆ ಟೆಂಡರ್‌ ಮೂಲಕ ಸಿಬ್ಬಂದಿಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಕೆಪಿಎಸ್‌ಸಿ ಕಛೇರಿಯ ಬೆರಳಚ್ಚುಗಾರರು / ದತ್ತಾಂಶ ನಮೂದಕರು, ವಾಹನ ಚಾಲಕರು ಮತ್ತು ಗ್ರೂಪ್‌-ಡಿ ಸಿಬ್ಬಂದಿ ಹುದ್ದೆಗಳಿಗೆ ಕಾರ್ಯಾನುಭವ ಇರುವವರನ್ನು ನೇಮಿಸಲಾಗುತ್ತದೆ. ಕನಿಷ್ಠ ಅರ್ಹತೆಗಳ ಜೊತೆಗೆ ಹುದ್ದೆಗೆ ಅಗತ್ಯವಿರುವ ಕೌಶಲ್ಯ ಇರುವವರನ್ನು ನೇಮಿಸಲಾಗುತ್ತದೆ.  ಈ ಕುರಿತು ಅವಶ್ಯಕ ಮಾಹಿತಿಗಳನ್ನು  ಟೆಂಡರ್‌ ಅರ್ಜಿಯಲ್ಲಿ ನಮೂದಿಸಬೇಕಾಗಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗೆ ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯ ವೇಳೆಯಲ್ಲಿ ದೂರವಾಣಿ ಸಂಖ್ಯೆ 080-30565802 ಗೆ ಕರೆ ಮಾಡಿ ಯಾವುದೇ ರೀತಿಯ ಗೊಂದಲಗಳಿದ್ದರೆ ಬಗೆಹರಿಸಿಕೊಳ್ಳಬಹುದು.

ಟೆಂಡರ್‌ಗೆ ಸಂಬಂಧಿಸಿದ ದಾಖಲೆಗಳನ್ನು ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ https://eproc.karnataka.gov.in ನಿಂದ  ಸದರಿ  06-02-2023 ರಿಂದ 16-03-2023ರ ಸಂಜೆ 04-00 ಗಂಟೆಯೊಳಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಟೆಂಡರ್ ಸಂಖ್ಯೆ: PSC 147ADM/2022-23/674 ಆಗಿದ್ದು, ಇ-ಟೆಂಡರ್‌ ಅನ್ನು ಸಲ್ಲಿಸಲು 16-03-2023 ಕೊನೆಯ ದಿನವಾಗಿದ್ದು 05-00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.

Leave A Reply

Your email address will not be published.