ಭಾರತದಲ್ಲಿರುವ ಪವರ್ ಫುಲ್ ಕಾರುಗಳು | ಕಮ್ಮಿ ಬೆಲೆಯಲ್ಲಿ ಅದ್ಭುತ ಫೀಚರ್ಸ್ ಹೊಂದಿರೋ ಕಾರುಗಳು ಇವು!
ಮಾರುಕಟ್ಟೆಗೆ ಹೊಚ್ಚ ಹೊಸ ಕಾರುಗಳು ಎಂಟ್ರಿ ನೀಡುತ್ತಲೇ ಇವೆ. ಅದರಲ್ಲಿ ಕೆಲವೊಂದು ಆಫರ್ ಮೇಲೆ ಲಭ್ಯವಾಗುತ್ತವೆ. ಒಟ್ಟಾರೆ ಜನರನ್ನು ಸೆಳೆಯಲು ಕಾರುಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿವೆ. ಈ ಪೈಪೋಟಿಯಲ್ಲಿ ಗೆದ್ದು, ಅತ್ಯುತ್ತಮ ಎನಿಸಿರುವ ಕಾರುಗಳ ಪಟ್ಟಿ ಇಲ್ಲಿದೆ. ಇವುಗಳು ಭಾರತದಲ್ಲಿನ ಹೆಚ್ಚು ಪವರ್ಫುಲ್ ಎನಿಸಿಕೊಂಡಿರುವ ಕಡಿಮೆ ಬೆಲೆಯ ಕಾರುಗಳು. ಪವರ್ಫುಲ್ ಟರ್ಬೊ ಪೆಟ್ರೋಲ್ ಎಂಜಿನ್ನೊಂದಿಗೆ ದೊರೆಯುವ ಬೆಸ್ಟ್ ಕಾರುಗಳ ವಿವರ ಇಲ್ಲಿದೆ.
ಟಾಟಾ ನೆಕ್ಸಾನ್ :
ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ನ ನೆಕ್ಸಾನ್ ಕಾರುಗಳು ಭಾರೀ ಬೇಡಿಕೆಯಲ್ಲಿವೆ. ಉತ್ತಮ ವಾಹನ ಎನಿಸಿಕೊಂಡಿರುವ ಕಾರುಗಳು ಪೈಕಿ ಇದೂ ಒಂದು. ಈ ಕಾರು ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದು, ರೂ.7.80 ಲಕ್ಷದಿಂದ ರೂ.14.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಈ ಕಾರು ಎಂಟು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಈ ಕಾರು 1.2-ಲೀಟರ್ 3-ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಇದು 120 PS ಪವರ್ ಹಾಗೂ 170 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5-ಲೀಟರ್ 4-ಸಿಲಿಂಡರ್, ಟರ್ಬೊ ಡೀಸೆಲ್ ಎಂಜಿನ್ ಪಡೆದಿದೆ. ಇದು 110 PS ಗರಿಷ್ಠ ಪವರ್ ಹಾಗೂ 260 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, ಈ ಕಾರು ಏರ್ ಬ್ಯಾಗ್ ಸೇರಿದಂತೆ ಇನ್ನು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಉತ್ತಮ ವಿನ್ಯಾಸದೊಂದಿಗೆ, ಅತ್ಯುತ್ತಮ ಕಾರು ಎಂದು ಪ್ರಸಿದ್ಧಿ ಪಡೆದಿದೆ.
ಮಹೀಂದ್ರಾ XUV300 :
ಮಹೀಂದ್ರಾ ಕಂಪನಿಯ ಕಾರುಗಳು ಹೆಚ್ಚು ಬೇಡಿಕೆಯಲ್ಲಿರುವ ಕಾರಾಗಿದ್ದು, ಕಡಿಮೆ ಬೆಲೆಗೆ ಲಭ್ಯವಾಗುತ್ತದೆ. ಇತ್ತಿಚೆಗೆ ಕಂಪನಿಯು ತನ್ನ ಐದು ಕಾರುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ದೇಶದ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ತನ್ನ ಕಾರುಗಳನ್ನು ಭಾರೀ ಅಗ್ಗದ ಬೆಲೆಗೆ ಮಾರಾಟ ಮಾಡುತ್ತವೆ. ಮಹೀಂದ್ರಾ XUV300 ಉತ್ತಮ ಕಾರೇನಿಸಿದ್ದು, ಇದು 8.41 ಲಕ್ಷದಿಂದ ರೂ.14.07 ಲಕ್ಷ ಬೆಲೆಗೆ ಲಭ್ಯವಾಗಲಿದೆ. ಈ ಕಾರು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್, 1.5-ಲೀಟರ್ ಡೀಸೆಲ್ ಎಂಜಿನ್ ಹಾಗೂ 1.2-ಲೀಟರ್ TGDI ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಸುರಕ್ಷತೆಗಾಗಿ 7 ಏರ್ಬ್ಯಾಗ್ಸ್, ಎಬಿಎಸ್ ಜೊತೆಗೆ ಇಬಿಡಿಯನ್ನು ಸಹ ಪಡೆದಿದೆ.
ಸಿಟ್ರಸ್ C3 :
ಫ್ರೆಂಚ್ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾದ ಸಿಟ್ರಸ್ ತನ್ನ C3 ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಈ ಕಾರು ಸುಮಾರು ರೂ.5.98 ಲಕ್ಷದಿಂದ ರೂ.8.25 ಬೆಲೆಗೆ ಲಭ್ಯವಾಗುತ್ತದೆ. ಸಿಟ್ರಸ್ C3, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 82 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಹಾಗೂ 1.2-ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಪಡೆದಿದ್ದು, ಇದು 110 PS ಪವರ್ ಹಾಗೂ 190 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಈ ಕಾರು 19.8 kmpl ಇಂಧನ ದಕ್ಷತೆ ಪಡೆದಿದೆ. ಅಲ್ಲದೆ, 10-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹಾಗೂ ಸುರಕ್ಷತೆಗಾಗಿ ಫ್ರಂಟ್ ಡ್ಯುಯಲ್ ಏರ್ಬ್ಯಾಗ್ಸ್, ಆಂಟಿ ಬ್ರೇಕಿಂಗ್ ಸಿಸ್ಟಮ್ ನಂತಹ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.
ಹುಂಡೈ i20 N ಲೈನ್ :
ದೇಶದಲ್ಲಿ ಹುಂಡೈ i20 N ಲೈನ್ ಕಾರು ರೂ.10.16 ಲಕ್ಷದಿಂದ ರೂ.12.27 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದ್ದು, ಇದು 1 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. 120 PS ಪವರ್ ಹಾಗೂ 172 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 10.25- ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸನ್ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಕಾರುಗಳಲ್ಲಿ ಹುಂಡೈ i20 N ಲೈನ್ ಸ್ಥಾನ ಪಡೆದಿದೆ.
ಟಾಟಾ ಆಲ್ಟ್ರೋಜ್ XZ ಟರ್ಬೊ :
ಟಾಟಾ ಆಲ್ಟ್ರೋಜ್ XZ ಟರ್ಬೊ ಉತ್ತಮ ಹಾಗೂ ಅಗ್ಗದ ಕಾರುಗಳಲ್ಲಿ ಇದೂ ಒಂದು. ಅಲ್ಲದೆ, ಈ ಕಾರು ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿದೆ. ಟಾಟಾ ರೂ.8.95 ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದು 1199 ಸಿಸಿ ಎಂಜಿನ್ ಹೊಂದಿದ್ದು, 5500 rpmನಲ್ಲಿ 108.50 bhp ಪವರ್ ಹಾಗೂ 5500 rpmನಲ್ಲಿ 140 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದು ,18.13 kmpl ಇಂಧನ ದಕ್ಷತೆಯನ್ನು ಹೊಂದಿದೆ. ಹಾಗೇ ಈ ಕಾರು ಮ್ಯಾನುಯಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ದೊರೆಯಲಿದೆ.