BSF Jobs 2023 Notification : ಬಿಎಸ್‌ಎಫ್‌ ನಿಂದ ಎಸ್‌ಐ, ಕಾನ್ಸ್‌ಟೇಬಲ್‌ ನೇಮಕಾತಿ | ಆಸಕ್ತರು ಅರ್ಜಿ ಸಲ್ಲಿಸಿ

BSF Jobs 2023 Notification : ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ ಹುದ್ದೆಯ ಬಗ್ಗೆ ಬಿಎಸ್‌ಎಫ್‌ ಶಾರ್ಟ್‌ ನೋಟಿಫಿಕೇಶನ್‌ನನ್ನು ನೀಡಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಹುದ್ದೆಗಳ ವಿವರ :
ಸಬ್‌ ಇನ್ಸ್‌ಪೆಕ್ಟರ್ (ಟೆಕ್ನಿಕಲ್) (ಗ್ರೂಪ್‌ ಬಿ ಪೋಸ್ಟ್‌) : 09
ಕಾನ್ಸ್‌ಟೇಬಲ್ (ಟೆಕ್ನಿಕಲ್) (ಗ್ರೂಪ್‌ ಸಿ ಪೋಸ್ಟ್‌): 21

ವೇತನ : ಸಬ್‌ ಇನ್ಸ್‌ಪೆಕ್ಟರ್ (ಟೆಕ್ನಿಕಲ್) (ಗ್ರೂಪ್‌ ಬಿ ಪೋಸ್ಟ್‌) : Rs.35,400-1,12,400.
ಕಾನ್ಸ್‌ಟೇಬಲ್ (ಟೆಕ್ನಿಕಲ್) (ಗ್ರೂಪ್‌ ಸಿ ಪೋಸ್ಟ್‌): Rs.21,700-69,100.
7ನೇ ವೇತನ ಆಯೋಗದ ಪ್ರಕಾರ ವೇತನ ನೀಡಲಾಗುತ್ತದೆ.

ಹುದ್ದೆವಾರು ವಿದ್ಯಾರ್ಹತೆ : ಈ ಹುದ್ದೆಗಳಿಗೆ ಸಬ್‌ ಇನ್ಸ್‌ಪೆಕ್ಟರ್ (ಟೆಕ್ನಿಕಲ್) (ಗ್ರೂಪ್‌ ಬಿ ಪೋಸ್ಟ್‌) : ಆಟೋಮೊಬೈಲ್ / ಮೆಕ್ಯಾನಿಕಲ್ / ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕಾನ್ಸ್‌ಟೇಬಲ್ (ಟೆಕ್ನಿಕಲ್) (ಗ್ರೂಪ್‌ ಸಿ ಪೋಸ್ಟ್‌): 10th ಪಾಸ್ ಜತೆಗೆ ಐಟಿಐ ಅನ್ನು ವಿವಿಧ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿರುವವರು ಇದರ ಜತೆಗೆ 3 ವರ್ಷಗಳ ಕಾರ್ಯಾನುಭವ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ : ಸಬ್‌ ಇನ್ಸ್‌ಪೆಕ್ಟರ್ (ಟೆಕ್ನಿಕಲ್) (ಗ್ರೂಪ್‌ ಬಿ ಪೋಸ್ಟ್‌) : ಗರಿಷ್ಠ 30 ವರ್ಷ ಮೀರಿರಬಾರದು.
ಕಾನ್ಸ್‌ಟೇಬಲ್ (ಟೆಕ್ನಿಕಲ್) (ಗ್ರೂಪ್‌ ಸಿ ಪೋಸ್ಟ್‌): ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.

ಇತರೆ ಹೆಚ್ಚಿನ ಮಾಹಿತಿಗಳಿಗೆ ಗಡಿ ಭದ್ರತಾ ಪಡೆಯ ಅಧಿಕೃತ ವೆಬ್‌ಸೈಟ್‌ ವಿಳಾಸ https://bsf.gov.in/ ಕ್ಕೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಹಾಗೂ ಇತರೆ ಮಾಹಿತಿಗೆ ಬಿಎಸ್‌ಎಫ್‌ ನೇಮಕಾತಿ ವೆಬ್‌ಸೈಟ್‌ ವಿಳಾಸ : https://rectt.bsf.gov.in

ಎಂಪ್ಲಾಯ್‌ಮೆಂಟ್‌ ನ್ಯೂಸ್ ಹಾಗೂ ರೋಜ್‌ಗಾರ್ ಸಮಾಚಾರ್‌ ನಲ್ಲಿ ಅಧಿಸೂಚನೆ ಪ್ರಕಟಿಸಿದ ನಂತರದಲ್ಲಿ ಬಿಎಸ್‌ಎಫ್‌ ವೆಬ್‌ಸೈಟ್‌ನಲ್ಲಿ ನೋಟಿಫಿಕೇಶನ್‌ ಅಪ್‌ಲೋಡ್‌ ಆಗುತ್ತದೆ. ಅನಂತರ ಅರ್ಜಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

Leave A Reply

Your email address will not be published.