Team India: ಹಣೆಗೆ ಕುಂಕುಮ ಇಡಲು ಆಕ್ಷೇಪಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರರು ! ಕಾರಣ ಇಷ್ಟೇ !
ಭಾರತದಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳಿಗೆ ಹೆಚ್ಚು ಮಹತ್ವ ನೀಡುವುದು ನಮಗೆ ತಿಳಿದೇ ಇದೆ. ಸದ್ಯ ಭಾರತೀಯ ಹಿಂದೂ ಧರ್ಮ ಸಂಪ್ರದಾಯದಲ್ಲಿ ಹಣೆಗೆ ಇರಿಸುವ ಕುಂಕುಮದ ಬಗ್ಗೆ ವಿವಾದ ಹುಟ್ಟಿಕೊಂಡಿದೆ.
ಹೌದು ಭಾರತೀಯ ತಂಡವು ಹೋಟೆಲ್‌ಗೆ ಭೇಟಿ ನೀಡುತ್ತಿರುವ ವೀಡಿಯೊ ವೈರಲ್ ಆಗಿದ್ದು ಈ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಇನ್ನಿಬ್ಬರು ಆಟಗಾರರು ತಮ್ಮ ಹಣೆಯ ಮೇಲೆ ತಿಲಕವನ್ನು ಹಾಕದಂತೆ ಹೋಟೆಲ್ ಸಿಬ್ಬಂದಿಗೆ ವಿನಂತಿಸುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ಸದ್ಯ ತಿಲಕ ಇಡುವುದನ್ನು ನಿರಾಕರಿಸಿದ ಕುರಿತಂತೆ ಕ್ರಿಕೆಟ್ ಅಭಿಮಾನಿಗಳ ಗುಂಪು ವಿಂಗಡಣೆಯಾಗಿ ತಪ್ಪು ಮತ್ತು ಸರಿ ಎಂಬ ಅಭಿಪ್ರಾಯ ಹೊರಬಿದ್ದಿದೆ.
ಅಂತರ್ಜಾಲದಲ್ಲಿ ವೈರಲ್ ಆದ ವೀಡಿಯೋ ನೋಡಿದ ಅಭಿಮಾನಿಗಳು “ ತಿಲಕ ಭಾರತದಲ್ಲಿ ಹಿಂದೂ ಸಂಪ್ರದಾಯದ ಒಂದು ಭಾಗವಾಗಿದೆ. ಅತಿಥಿಗಳನ್ನು ಸ್ವಾಗತಿಸಲು ಹಚ್ಚಲಾಗುತ್ತದೆ ಆದ್ದರಿಂದ ತಿಲಕವನ್ನು ತಿರಸ್ಕಾರ ಮಾಡುವುದು ಎಷ್ಟು ಸರಿ ” ಎಂದು ಪ್ರಶ್ನೆ ಮಾಡಿದ್ದಾರೆ.
https://twitter.com/hashtag/TeamIndia?src=hash&ref_src=twsrc%5Etfw
ಆದರೆ ಇನ್ನೊಂದು ಗುಂಪು ಅವರು ಮಾಡಿದ್ದು ಸರಿ, ತಮ್ಮ ಧರ್ಮದ ಅನುಸಾರವಾಗಿ ನಡೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಸಹಾಯಕ ಸಿಬ್ಬಂದಿ ಸಹ ತಿಲಕ ಇಡುವುದನ್ನು ಏಕೆ ನಿರಾಕರಿಸಿದ್ದಾರೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಇದು ಹಳೆಯ ವೀಡಿಯೊದಂತೆ ಕಾಣಿಸುತ್ತಿದೆ. ಏಕೆಂದರೆ ಉಮ್ರಾನ್ ಮಲಿಕ್ ಆಸ್ಟ್ರೇಲಿಯಾ ಸರಣಿಗೆ ಟೆಸ್ಟ್ ತಂಡದ ಭಾಗವಾಗಿಲ್ಲ. ಇದು ಇತ್ತೀಚೆಗೆ ತವರಿನಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವೈಟ್-ಬಾಲ್ ಪಂದ್ಯಗಳ ಸಂದರ್ಭದ್ದಾಗಿರಬಹುದು ಎನ್ನಲಾಗಿದೆ.
ಸದ್ಯ ಇಂತಹ ಸಣ್ಣ ಪುಟ್ಟ ವಿಚಾರಗಳಿಗೆ ಹುಟ್ಟಿಕೊಳ್ಳುವ ವಿವಾದಗಳು ನಮ್ಮ ದೇಶಕ್ಕೆ ಕಳಂಕ ತರುವುದರಲ್ಲಿ ಇನ್ನೊಂದು ಮಾತಿಲ್ಲ.