DA Hike Update: ಸರ್ಕಾರಿ ನೌಕರರೇ ನಿಮಗೊಂದು ಮಹತ್ವದ ಮಾಹಿತಿ! ಹೊಸ ವರ್ಷದಿಂದ ಎಷ್ಟು ಡಿಎ ಸಿಗಲಿದೆ ಗೊತ್ತಾ?
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು. ಕೇಂದ್ರದ ಈ ಪ್ರವೃತ್ತಿಯನ್ನು ಗಮನಿಸಿದರೆ, ಕೇಂದ್ರ ಸರಕಾರಿ ನೌಕರರು ತಮ್ಮ ಮುಂದಿನ ಡಿಎ ಹೆಚ್ಚಳವನ್ನು ಮಾರ್ಚ್ 2023 ರಲ್ಲಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಬಹುದು.
ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು, ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿ-ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಸೂಚ್ಯಂಕವನ್ನು 88 ಕೇಂದ್ರಗಳ ಜೊತೆಗೆ ಇಡೀ ದೇಶಕ್ಕಾಗಿ ಸಿದ್ಧಪಡಿಸಲಾಗುತ್ತದೆ. ಜುಲೈ ತಿಂಗಳ ಡಿಎಯನ್ನು ಶೇ 4ರಷ್ಟು ಹೆಚ್ಚಿಸಿದ ನಂತರ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ 38ಕ್ಕೆ ಏರಿಕೆಯಾಗಿದ್ದು ಗೊತ್ತಿರುವ ವಿಚಾರವೇ. ಇದೀಗ ಅದರಲ್ಲಿ ಶೇ.3ರಷ್ಟು ಏರಿಕೆಯಾದರೆ ಅದು ಶೇ.41ಕ್ಕೆ ತಲುಪಲಿದೆ.
ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರ ಡಿಎ (ಡಿಎ ಹೆಚ್ಚಳ) ವರ್ಷಕ್ಕೆ ಎರಡು ಬಾರಿ ಹೆಚ್ಚಾಗುತ್ತದೆ. ಜನವರಿ 2022 ಮತ್ತು ಜುಲೈ 2022 ರ ಡಿಎ ಘೋಷಿಸಲಾಗಿದೆ. ಇದೀಗ ಜನವರಿ 2023 ರ ಡಿಎ ಘೋಷಣೆ ಬಾಕಿ ಉಳಿದಿದೆ. 65 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 48 ಲಕ್ಷ ಪಿಂಚಣಿದಾರರ ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಕುರಿತು ಮಾರ್ಚ್ ಮೊದಲ ವಾರದಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್‌ನಲ್ಲಿ ಡಿಎ ಹೆಚ್ಚಳದ ತೀರ್ಮಾನದ ಮೊದಲೇ ಕೇಂದ್ರ ನೌಕರರ ಪಾಲಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಲಕ್ಷಾಂತರ ಕೇಂದ್ರ ನೌಕರರಿಗೆ ನಿರಾಶೆ ಮೂಡಿಸಿದರು ಅಚ್ಚರಿಯಿಲ್ಲ.
ಹೌದು, ನವೆಂಬರ್ ತಿಂಗಳ ಹೋಲಿಕೆಯಲ್ಲಿ ಡಿಸೆಂಬರ್‌ನಲ್ಲಿ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಎಐಸಿಪಿಐ ಸೂಚ್ಯಂಕದ ಅಂಕಿ ಅಂಶಗಳಲ್ಲಿ ಕುಸಿತ ಕಂಡುಬಂದಿದ್ದು, ಈ ಅಂಕಿ ಅಂಶದ ಕುಸಿತದ ನಂತರ, ಇದೀಗ ಡಿಎ ಹೆಚ್ಚಳವು ಅಂದಾಜು ಮಾಡಿದ ಮೊತ್ತಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎನ್ನಲಾಗಿದೆ. ಜುಲೈನಿಂದ ನವೆಂಬರ್ ವರೆಗೆ, ಎಐಸಿಪಿಐ ಸೂಚ್ಯಂಕವು ನಿರಂತರವಾಗಿ ಏರಿಕೆ ಕಂಡರು ಕೂಡ ಡಿಸೆಂಬರ್‌ನಲ್ಲಿ ಬಾರಿ ಕುಸಿತ ದಾಖಲಾಗಿದೆ. ಜನವರಿ 1 ರಿಂದ ತುಟ್ಟಿಭತ್ಯೆ ಹೆಚ್ಚಳ ಈ ಸೂಚ್ಯಂಕದ ಆಧಾರದ ಮೇಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೂ ಕೂಡ, ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್ ಅಂಕಿ ಅಂಶವು 132.3 ಅಂಕಗಳಿಗೆ ಕುಸಿದಿದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಈ ಅಂಕಿ ಅಂಶವು 132.5 ಪಾಯಿಂಟ್‌ಗಳಷ್ಟಿತ್ತು. ಇದು ಸೆಪ್ಟೆಂಬರ್‌ನಲ್ಲಿ 131.3, ಆಗಸ್ಟ್‌ನಲ್ಲಿ 130.2 ಮತ್ತು ಜುಲೈನಲ್ಲಿ 129.9 ರಷ್ಟಿತ್ತು.
ಜನವರಿ 31 ರಂದು, ಕಾರ್ಮಿಕ ಸಚಿವಾಲಯವು ಡಿಸೆಂಬರ್‌ನ ಎಐಸಿಪಿಐ ಸೂಚ್ಯಂಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಅನುಸಾರ, ಜನವರಿ 1 ರಿಂದ ಉದ್ಯೋಗಿಗಳ ಡಿಎ ಹೆಚ್ಚಳವು ಶೇಕಡಾ 4 ರ ಬದಲು ಶೇಕಡಾ 3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಅಂಕಿಗಳಲ್ಲಿ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಉದ್ಯೋಗಿಗಳಿಗೆ ನೇರವಾಗಿ ಶೇಕಡಾ ಒಂದರಷ್ಟು ನಷ್ಟವಾಗುವ ಸಂಭವವಿದೆ. ಈ ಹೆಚ್ಚಳವನ್ನು ಸರ್ಕಾರ ಮಾರ್ಚ್‌ನಲ್ಲಿ ಪ್ರಕಟಿಸಲಿದೆ.