DCC Bank Recruitment 2023: ಬ್ಯಾಂಕ್‌ ಉದ್ಯೋಗಾಕಾಂಕ್ಷಿಗಳೇ ನಿಮಗೊಂದು ಸುವರ್ಣವಕಾಶ | 96 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ವೇತನ ರೂ.78ಸಾವಿರ

ನೀವು ಬ್ಯಾಂಕ್‌ ಉದ್ಯೋಗಿಯಾಗಬೇಕೆಂದು ಆಸೆ ಪಡುತ್ತಿದ್ದೀರಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣವಕಾಶ. ಹೌದು. ಬೆಂಗಳೂರಿನ ಡಿಸಿಸಿ ಬ್ಯಾಂಕ್​ನಲ್ಲಿ(DCC Bank) ಅನೇಕ ಹುದ್ದೆಗಳು ಖಾಲಿ ಇದ್ದು, ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಫೆಬ್ರವರಿ 28, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್​(Online) ಮೂಲಕ ಅರ್ಜಿ ಹಾಕಿ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಸಂಸ್ಥೆ : ಬೆಂಗಳೂರು ಡಿಸಿಸಿ ಬ್ಯಾಂಕ್
ಹುದ್ದೆ : ಬ್ರಾಂಚ್ ಮ್ಯಾನೇಜರ್, ಸ್ಟೆನೋಗ್ರಾಫರ್, ಡ್ರೈವರ್
ಒಟ್ಟು ಹುದ್ದೆ : 96
ವಿದ್ಯಾರ್ಹತೆ : ಪದವಿ, ಡಿಪ್ಲೋಮಾ, 10ನೇ ತರಗತಿ, ಪಿಯುಸಿ
ವೇತನ : ಮಾಸಿಕ ₹ 40,900-78,200
ಉದ್ಯೋಗದ ಸ್ಥಳ :ಬೆಂಗಳೂರು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 28, 203

ಹುದ್ದೆಗಳ ವಿವರ : ಬ್ರಾಂಚ್ ಮ್ಯಾನೇಜರ್- 4
ಸೀನಿಯರ್ ಅಸಿಸ್ಟೆಂಟ್- 19
ಸ್ಟೆನೋಗ್ರಾಫರ್-1
ಜೂನಿಯರ್ ಅಸಿಸ್ಟೆಂಟ್ಸ್​- 43
ಕಂಪ್ಯೂಟರ್ ಆಪರೇಟರ್- 2
ಡ್ರೈವರ್- 4
ಗ್ರೂಪ್​​ ಡಿ-23
ಒಟ್ಟು : 96 ಹುದ್ದೆಗಳು

ವಿದ್ಯಾರ್ಹತೆ: ಬ್ರಾಂಚ್ ಮ್ಯಾನೇಜರ್, ಸೀನಿಯರ್ ಅಸಿಸ್ಟೆಂಟ್- ಯಾವುದೇ ಪದವಿ
ಸ್ಟೆನೋಗ್ರಾಫರ್- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್​ನಲ್ಲಿ ಡಿಪ್ಲೋಮಾ
ಜೂನಿಯರ್ ಅಸಿಸ್ಟೆಂಟ್ಸ್​- ಪಿಯುಸಿ
ಕಂಪ್ಯೂಟರ್ ಆಪರೇಟರ್- ಪಿಯುಸಿ, ಕಮರ್ಷಿಯಲ್ ಪ್ರಾಕ್ಟೀಸ್​ನಲ್ಲಿ ಡಿಪ್ಲೋಮಾ
ಡ್ರೈವರ್, ಗ್ರೂಪ್​​ ಡಿ-10 ನೇ ತರಗತಿ

ವಯೋಮಿತಿ: ಅಭ್ಯರ್ಥಿಗಳು ವಯಸ್ಸು ಫೆಬ್ರವರಿ 28, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಪ್ರವರ್ಗ-2ಎ/2ಬಿ/3ಎ & 3ಬಿ ಮತ್ತು ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ:ಜನರಲ್, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 1500 ರೂ.
SC/ST ಅಭ್ಯರ್ಥಿಗಳು- 750 ರೂ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಸಲ್ಲಿಸಲು ತಿಳಿಸಲಾಗಿದೆ.

ವೇತನ: ಬ್ರಾಂಚ್ ಮ್ಯಾನೇಜರ್- ಮಾಸಿಕ ₹ 40,900-78,200
ಸೀನಿಯರ್ ಅಸಿಸ್ಟೆಂಟ್- ಮಾಸಿಕ ₹ 37,900-70,850
ಸ್ಟೆನೋಗ್ರಾಫರ್- ಮಾಸಿಕ ₹ 37,900-70,850
ಜೂನಿಯರ್ ಅಸಿಸ್ಟೆಂಟ್ಸ್​- ಮಾಸಿಕ ₹ 30,350- 58,250
ಕಂಪ್ಯೂಟರ್ ಆಪರೇಟರ್- ಮಾಸಿಕ ₹ 30,350- 58,250
ಡ್ರೈವರ್- ಮಾಸಿಕ ₹ 27,650-52,650
ಗ್ರೂಪ್​​ ಡಿ- ಮಾಸಿಕ ₹ 23,500-47,650

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.