Free Cylinder : ಉಜ್ವಲಾ ಯೋಜನೆಯಲ್ಲಿ ಬಡವರಿಗೆ ದೊರೆಯಲಿದೆ ಉಚಿತ ಸಿಲಿಂಡರ್ ! ಸರಕಾರದ ಚಿಂತನೆ
ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡು ಸಾಮಾನ್ಯ ಜನರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿ ಲಭ್ಯವಾಗುವ ಲಕ್ಷಣ ಗಳು ದಟ್ಟವಾಗಿವೆ. ಎಲ್ಲ ವಸ್ತುಗಳ ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆ 1000 ರೂ.ಗೂ ಏರಿಕೆ ಕಂಡಿದ್ದು, ಹೀಗಿರುವಾಗ ಈ ಬಾರಿಯ ಬಜೆಟ್ ನಲ್ಲಿ ಗೃಹಿಣಿಯರ ಪಾಲಿಗೆ ಕೊಂಚ ರಿಲೀಫ್ ಆಗಬಹುದು ಎನ್ನುವ ನಿರೀಕ್ಷೆಯಿದೆ. ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಣೆ ಮಾಡುತ್ತಿದೆ.
ಉಜ್ವಲಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಉಚಿತ ಸಿಲಿಂಡರ್ ನೀಡುತ್ತಿದ್ದು, ಸರ್ಕಾರವು 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಆರಂಭಿಸಿದ್ದು, ಸರ್ಕಾರ ಈ ಯೋಜನೆಯ ಮೂಲಕ ವಂಚಿತ ಕುಟುಂಬಗಳಿಗೂ ಗ್ಯಾಸ್ ಸಿಲಿಂಡರ್ಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ LPG ಗ್ಯಾಸ್ ಸಂಪರ್ಕಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಅವರಿಗೆ 1,600 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಇದಲ್ಲದೇ ಉಚಿತ ರೀಫಿಲ್ ಮತ್ತು ಸ್ಟೌ ಕೂಡ ಒದಗಿಸಲಾಗುತ್ತದೆ.
ಸದ್ಯ ಈ ಬಾರಿಯ ಬಜೆಟ್ ಸಂದರ್ಭದಲ್ಲಿ ಕೂಡ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರೆಸುವ ಸಂಭವ ಹೆಚ್ಚಿದೆ ಎನ್ನಲಾಗಿದೆ. ಇದಷ್ಟೇ ಅಲ್ಲದೇ, ಸಿಲಿಂಡರ್ ಮೇಲಿನ ಸಬ್ಸಿಡಿ ಕೂಡ ಏರಿಕೆ ಕಾಣುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಈ ಯೋಜನೆಗಾಗಿ ಸರ್ಕಾರವು ಸುಮಾರು 5812 ಕೋಟಿಗಳ ಬಜೆಟ್ ಅನ್ನು ಮೀಸಲಿಟ್ಟಿದೆ ಎನ್ನಲಾಗಿದೆ. ಇದಲ್ಲದೆ, ಈ ಯೋಜನೆಯಡಿಯಲ್ಲಿ ವರ್ಷದ 12 ಸಿಲಿಂಡರ್‌ಗಳ ಮೇಲೆ 200 ರೂ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಈ ಅನುದಾನವನ್ನು ಇನ್ನಷ್ಟು ಮುಂದುವರಿಸುವ ನಿರೀಕ್ಷೆ ಇದೆ.ಈ ಯೋಜನೆಯಿಂದ 9 ಕೋಟಿಗೂ ಹೆಚ್ಚು ಜನರು ಅನುಕೂಲ ಪಡೆಯುತ್ತಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ಈ ಯೋಜನೆಗಾಗಿ 5812 ಕೋಟಿ ರೂ.ಮೀಸಲಿರಿಸಿದೆ ಎನ್ನಲಾಗಿದೆ.
ಕಳೆದ ಕೆಲ ವರ್ಷಗಳಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಏರಿಕೆ ಕಾಣುತ್ತಲೇ ಬರುತ್ತಿದೆ. ಈ ನಡುವೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 2021 ರಲ್ಲಿ 200 ರೂಪಾಯಿಗಳ ಸಬ್ಸಿಡಿಯನ್ನು ಘೋಷಿಸಿದ್ದು, ಹೀಗಾಗಿ ಬಡವರ ಪಾಲಿನ ದೊಡ್ಡ ಮಟ್ಟದ ಹೊರೆ ಕೊಂಚ ಮಟ್ಟಿಗೆ ಇಳಿದಿದೆ. ಇದಲ್ಲದೆ, ಈ ಯೋಜನೆಯು ಆರ್ಥಿಕ ವರ್ಷದಲ್ಲಿ ಕೇವಲ 12 ಸಿಲಿಂಡರ್‌ಗಳಿಗೆ ಅಷ್ಟೇ ಸೀಮಿತ ಎಂಬುದನ್ನು ಗಮನಿಸಬೇಕು. ಹಣಕಾಸು ಸಚಿವಾಲಯವು ಈ ಯೋಜನೆಯನ್ನು ಈ ವರ್ಷ ಕೂಡ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ. ಉಜ್ವಲ ಯೋಜನೆಯಡಿ ಲಭ್ಯವಿರುವ 12 ಗ್ಯಾಸ್ ಸಿಲಿಂಡರ್‌ಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುವುದು ಗೊತ್ತಿರುವ ವಿಚಾರವೇ!!! ಸಬ್ಸಿಡಿ ಅಡಿಯಲ್ಲಿ ಜನರಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ. ನೀಡಲಾಗುತ್ತಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ, ಶೇ.100 ರಷ್ಟು ಜನರನ್ನು ತಲುಪುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಮುಂದುವರೆಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.