GOOD NEWS: ಅನ್ನದಾತರಿಗೆ ಭರ್ಜರಿ ಸಿಹಿ ಸುದ್ದಿ; ಜನವರಿ 31ಕ್ಕೆ ಉಚಿತ ಡೀಸೆಲ್ ನೀಡುವ ರೈತ ಶಕ್ತಿ ಯೋಜನೆಗೆ ಸಿ ಎಂ ಬಸವರಾಜ ಬೊಮ್ಮಾಯಿ ಚಾಲನೆ!!

ಕೃಷಿಕರಿಗೆ ಒಂದಲ್ಲಾ ಒಂದು ಸಮಸ್ಯೆ ತಲೆದೋರುತ್ತಲೇ ಇರುತ್ತದೆ. ಇತ್ತೀಚಿಗೆ ಸೂರ್ಯನ ತಾಪ ಹೆಚ್ಚುತ್ತಿದೆ. ಆದ್ದರಿಂದ ಕೃಷಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವ ಕಾರಣದಿಂದ ತೋಟಗಾರಿಕೆ ಇಲಾಖೆ ಕೃಷಿಕರಿಗೆ ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ರೈತರಿಗೆ ಉಚಿತ ಡೀಸೆಲ್ , ಇಂಧನ ವಿತರಿಸುವ ರೈತ ಶಕ್ತಿ ಯೋಜನೆಗೆ ಜನವರಿ 31 ರಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಹೌದು ರಾಜ್ಯ ಸರ್ಕಾರವು ರೈತಶಕ್ತಿ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250/- ರೂ.ನಂತೆ ಗರಿಷ್ಟ 5 ಎಕರೆಯವರೆಗೆ 1250/- ರೂ.ಗಳನ್ನು ಡಿಬಿಟಿ ಮೂಲಕ ಡೀಸೆಲ್ ಸಬ್ಸಿಡಿ ನೀಡುವ ರೈತಶಕ್ತಿ ಯೋಜನೆ ರೂಪಿಸಲಾಗಿದೆ.

ಯೋಜನೆ ನಿಯಮ ಪ್ರಕಾರ :

  • ಒಂದು ಎಕರೆವರೆಗೆ (<= 1.00ಎಕರೆ)ರೂ.250/-,
  • ಎರಡು ಎಕರೆವರೆಗೆ (>1.00ಎಕರೆ<=2ಎಕರೆ)ರೂ.500/-,
  • ಮೂರು ಎಕರೆವರೆಗೆ(>2.00ಎಕರೆ<=3ಎಕರೆ)ರೂ.750/-,
  • ನಾಲ್ಕುಎಕರೆವರೆಗೆ(>3.00ಎಕರೆ<=4ಎಕರೆ)ರೂ.1000/-,
  • ನಾಲ್ಕು ಎಕರೆ ಮೇಲ್ಪಟ್ಟು (>4.00ಎಕರೆ ) ರೂ.1250/- ಸಹಾಯಧನ ಸಿಗಲಿದೆ. ಸದ್ಯ ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಗರಿಷ್ಟ 5 ಎಕರೆಯವರೆಗೆ ಫ್ರೂಟ್ಸ್ ಪೋರ್ಟಲ್‍ನಲ್ಲಿ ನೋಂದಣಿ ಗುರುತಿನ (FID) ಸಂಖ್ಯೆಯಲ್ಲಿ ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನ ವರ್ಗಾವಣೆಯಾಗಲಿದೆ.

ಸದ್ಯ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನವೆಚ್ಚದ ಭಾರವನ್ನು ಕಡಿಮೆ ಮಾಡಲು ಈ ಮೇಲಿನ ಯೋಜನೆ ರೂಪಿಸಲಾಗಿದೆ.

Leave A Reply

Your email address will not be published.