Job opportunity: ಅಸಿಸ್ಟೆಂಟ್ ಸಬ್​ ಇನ್ಸ್​​ಪೆಕ್ಟರ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ !!

ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಕಲ್ಪಿಸಲಾಗಿದೆ.ಗಡಿ ಭದ್ರತಾ ಪಡೆ(Border Security Force) ಖಾಲಿ ಇರುವ ಹುದ್ದೆಗಳಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಒಟ್ಟು 5 ಎಎಸ್​​ಐ, ಎಚ್​ಸಿ(ASI, HC) ​ ಹುದ್ದೆಗಳು ಖಾಲಿ ಇದ್ದು ಆಸಕ್ತರು ಫೆಬ್ರವರಿ 19, 2023 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ಕುರಿತು ಮಾಹಿತಿ ತಿಳಿದಿರುವುದು ಒಳ್ಳೆಯದು.

ಈ ಕುರಿತ ಮಾಹಿತಿ ಇಲ್ಲಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಹುದ್ದೆಯ ಮಾಹಿತಿ:

ಎಎಸ್​ಐ(ಕಂಪೋಸಿಟರ್ & ಮೆಷಿನ್​ಮ್ಯಾನ್)- 3

ಹೆಚ್​ಸಿ (ಇಂಕರ್​ & ವೇರ್ ಹೌಸ್​ಮ್ಯಾನ್​)-2

ಗಡಿ ಭದ್ರತಾ ಪಡೆಯಲ್ಲಿ ಎಎಸ್​​ಐ, ಎಚ್​ಸಿ ಹುದ್ದೆಗೆ ಒಟ್ಟು 5 ಹುದ್ದೆ ಖಾಲಿ ಇದ್ದು, ಈ ಉದ್ಯೋಗಕ್ಕಾಗಿ ಪಿಯುಸಿ ವಿದ್ಯಾರ್ಹತೆ ಬೇಕಾಗುತ್ತದೆ. ಮಾಸಿಕ ವೇತನ – 29,200-92,300 ಆಗಿದ್ದು, ಅರ್ಹ ಅಭ್ಯರ್ಥಿಗಳುಫೆಬ್ರವರಿ 9, 2023 ಒಳಗಾಗಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು: ಭಾರತದಲ್ಲಿ ಕಾರ್ಯ ನಿವರ್ಹಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಪ್ರಯೋಜನ ಪಡೆಯಬಹುದು. ಜನವರಿ 20, 2023ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 19, 2023 ಕೊನೆಯ ದಿನವಾಗಿದೆ.

ವಯೋಮಿತಿ:ಎಎಸ್​ಐ(ಕಂಪೋಸಿಟರ್ & ಮೆಷಿನ್​ಮ್ಯಾನ್)- 18 ರಿಂದ 28 ವರ್ಷ

ಹೆಚ್​ಸಿ (ಇಂಕರ್​ & ವೇರ್ ಹೌಸ್​ಮ್ಯಾನ್​)- 18 ರಿಂದ 27 ವರ್ಷ

ವಿದ್ಯಾರ್ಹತೆ:

ಎಎಸ್​ಐ(ಕಂಪೋಸಿಟರ್ & ಮೆಷಿನ್​ಮ್ಯಾನ್)- ಪಿಯುಸಿ, ಪ್ರಿಂಟಿಂಗ್​ನಲ್ಲಿ ಡಿಪ್ಲೋಮಾ

ಹೆಚ್​ಸಿ (ಇಂಕರ್​ & ವೇರ್ ಹೌಸ್​ಮ್ಯಾನ್​)- ಪಿಯುಸಿ

ವೇತನ:

ಎಎಸ್​ಐ(ಕಂಪೋಸಿಟರ್ & ಮೆಷಿನ್​ಮ್ಯಾನ್)- ಮಾಸಿಕ ₹ 29,200-92,300

ಹೆಚ್​ಸಿ (ಇಂಕರ್​ & ವೇರ್ ಹೌಸ್​ಮ್ಯಾನ್​)- ಮಾಸಿಕ ₹25,500-81,100

ಆಯ್ಕೆ ಪ್ರಕ್ರಿಯೆ:

ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್​, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲೇ ಅರ್ಜಿ ಸಲ್ಲಿಸಬೇಕಾಗಿದ್ದು, ಯಾವುದೇ ಅರ್ಜಿ ಶುಲ್ಕವಿಲ್ಲ ಎಂಬುದನ್ನು ಗಮನಿಸಬೇಕು.

Leave A Reply

Your email address will not be published.