ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ ಮಹಿಳೆಗೆ ದೊರಕಿದ್ದೇನು ಗೊತ್ತೇ?
ಮಹಿಳೆಯರಲ್ಲಿ ಮುಟ್ಟು ನೈಸರ್ಗಿಕ ಕ್ರಿಯೆಯಾಗಿದ್ದು, ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು ಗೊತ್ತಿರುವ ವಿಚಾರವೇ. ಮುಟ್ಟಿನ ನೋವಿಗಿಂತಲೂ ಆ ಸಮಯವನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ. ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್, ಕಪ್ ಅಥವಾ ಟ್ಯಾಂಪೂನ್‌ಗಳನ್ನು ಬಳಕೆ ಮಾಡೋದು ಸಹಜ.
ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಅತ್ಯಗತ್ಯವಾಗಿದ್ದು, ಆದರೆ ಹೆಚ್ಚಿನ ಸಂದರ್ಭದಲ್ಲಿ ಮಹಿಳೆಯರು ಸ್ಯಾನಿಟರ್ ನ್ಯಾಪ್ಕಿನ್ ಸ್ಟಾಕ್ ತಂದಿಡಲು ಮರೆತುಬಿಡುತ್ತಾರೆ. ಹೀಗಾಗಿ, ಪಿರಿಯಡ್ಸ್ ಸಮಯದಲ್ಲಿ ಅನಿವಾರ್ಯವಾಗಿ ಬೇಕಾದ ಸಂದರ್ಭದಲ್ಲಿ ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸಿದರೆ ಇನ್ನು ಕೆಲವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿಕೊಳ್ಳುತ್ತಾರೆ. ಇದೇ ರೀತಿ, ಮಹಿಳೆಯೊಬ್ಬರು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಪ್ಯಾಡ್ ಆರ್ಡರ್ ಮಾಡಿದ ಮಹಿಳೆ ಬಂದ ಆರ್ಡರ್ ನೋಡಿ ಶಾಕ್ ಆದ ಘಟನೆ ಬೆಳಕಿಗೆ ಬಂದಿದೆ. ಡೆಲಿವರಿ ಬ್ಯಾಗ್‌ನಲ್ಲಿ ಸ್ಯಾನಿಟರಿ ಪ್ಯಾಡ್ ಮಾತ್ರವಲ್ಲದೆ ಇನ್ನಿತರ ವಸ್ತುಗಳಿದ್ದವು ಎನ್ನಲಾಗಿದೆ.
ಮಹಿಳೆಯರಿಗೆ ಮುಟ್ಟಿನ ನೋವಿಗಿಂತಲೂ ಆ ಸಮಯವನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ. ರಕ್ತಸ್ರಾವದ ಜೊತೆಗೆ ಕಿರಿಕಿರಿಯ ಅನುಭವದಿಂದ ಬಹುತೇಕ ಮಹಿಳೆಯರು ಎಲ್ಲರೊಂದಿಗೆ ಗುಂಪಿನಲ್ಲಿ ಗುರುತಿಸಿಕೊಳ್ಳಲು ಹಿಂದೇಟು ಹಾಕುವಂತಾಗುತ್ತದೆ.
ಅನೇಕ ಮಹಿಳೆಯರು (Woman) ತಮ್ಮ ಋತುಚಕ್ರದ ಸಮಯದಲ್ಲಿ ನೋವು ತಾಳಲಾಗದೆ ಒದ್ದಾಡುವುದು ಕೂಡ ಇದೆ. ಇದರ ಜೊತೆಗೆ ಮೂಡ್ ಬದಲಾಗುವ, ಹೆಚ್ಚೆಚ್ಚು ತಿನ್ನುವುದು ಕೂಡ ಕೆಲವರಿಗೆ ಕಂಡು ಬರುತ್ತದೆ. ಈ ರೀತಿ ಆಗುವುದನ್ನು ಅರಿತ ಇನ್‌ಸ್ಟಾಮಾರ್ಟ್ ಗ್ರಾಹಕರಿಗೆ (Customer) ಸ್ಯಾನಿಟರಿ ಪ್ಯಾಡ್ ಜೊತೆಗೆ ಚಾಕೋಲೇಟ್‌ಗಳನ್ನು ಕಳುಹಿಸಿಕೊಟ್ಟಿದೆ. ಇದನ್ನು ನೀವು ಕೇಳಿದಾಗ ಅಚ್ಚರಿಯಾಗೋದು ಪಕ್ಕಾ. ಆನ್‌ಲೈನ್‌ನಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದಾಗ ಆಶ್ಚರ್ಯವಾಯಿತು ಎಂದು ಮಹಿಳೆಯೊಬ್ಬರು ಟ್ವಿಟರ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಟ್ವಿಟರ್ ಬಳಕೆದಾರ ಸಮೀರಾ ಇನ್‌ಸ್ಟಾಮಾರ್ಟ್‌ನಲ್ಲಿ ತಾನು ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ್ದು ಆರ್ಡರ್ ಜೊತೆಗೆ ಚಾಕೊಲೇಟ್ ಕುಕೀಗಳು ಕೂಡ ಇತ್ತು ಎಂದು ತಿಳಿಸಿದ್ದಾರೆ. ‘ನಾನು @SwiggyInstamart ನಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದ್ದಾರೆ. ಬ್ಯಾಗ್‌ನ ಕೆಳಭಾಗದಲ್ಲಿ ಚಾಕೊಲೇಟ್ ಕುಕೀಗಳನ್ನು ನೋಡಿದ್ದು, ಇದನ್ನು ಕಂಡು ಬಹಳ ಅರ್ಥಪೂರ್ಣವಾಗಿದೆ ಎಂದು ಬರೆದುಕೊಂಡಿದ್ದಾರೆ. ಸ್ವಿಗ್ಗಿ ಅಥವಾ ಅಂಗಡಿಯವರು ಇದನ್ನು ಮಾಡಿದ್ದಾರಾ ಎಂದು ನನಗೆ ತಿಳಿದಿಲ್ಲ’ ಎಂದು ಸಮೀರಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ತರಹೇವಾರಿ ಕಾಮೆಂಟ್ ಗಳು ಬರುತ್ತಿದ್ದು, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 1,700 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಕುರಿತಾಗಿ ಬಳಕೆದಾರರೊಬ್ಬರು, ”ಗ್ರಾಹಕರನ್ನು ಖುಷಿ ಪಡಿಸಲು ಹಾಗೂ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇತರೆ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಇರಿಸುತ್ತಾರೆ. ನಮ್ಮ ಆರ್ಡರ್‌ನೊಂದಿಗೆ ಹಲವಾರು ಬಾರಿ ಬಿಸ್ಕತ್ತುಗಳು, ಚಾಕೊಲೇಟ್‌ಗಳು, ವೇಫರ್‌ಗಳು ಸಿಕ್ಕಿವೆ’ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಬ್ಬರು, ‘Instamart ತನ್ನದೇ ಆದ ಡಾರ್ಕ್ ಸ್ಟೋರ್‌ಗಳಿಂದ ಸರಬರಾಜು ಮಾಡುತ್ತದೆ. ಹೀಗಾಗಿ, ಇದು SOP ನ ಭಾಗವಾಗಿದೆ ಎಂದು ಹೇಳಿದ್ದು, ಈ ನಿಟ್ಟಿನಲ್ಲಿ ನೀವು swiggy ಗೆ ಧನ್ಯವಾದ ಹೇಳಬಹುದು’ ಎಂದಿದ್ದಾರೆ. ಅನೇಕ ನೆಟಿಜನ್‌ಗಳು ಇದು ಉತ್ಪನ್ನದ ಪ್ರಚಾರ ಅಭಿಯಾನವಾಗಿರಬಹುದು ಎಂದು ತಮ್ಮ ಅನಿಸಿಕೆ ಹೊರ ಹಾಕುತ್ತಿದ್ದಾರೆ.