LPG Cylinder : ಇನ್ನು ಇಲ್ಲಿ ಕೂಡಾ ಅತೀ ಕಡಿಮೆ ಬೆಲೆಗೆ ಸಿಲಿಂಡರ್ ಲಭ್ಯ !
ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಓಲೈಕೆಗೆ ಸರ್ಕಾರ ನಾನಾ ಕಸರತ್ತನ್ನು ಮಾಡೋದು ಸಹಜ. ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನರನ್ನು ಹೈರಾಣಾಗಿ ಹೋಗುವಂತೆ ಮಾಡುತ್ತಿರುವ ನಡುವೆ ಕೆಲ ಪ್ರದೇಶದ ಜನರಿಗೆ ಸಿಹಿ ಸುದ್ದಿ ಲಭ್ಯವಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 500 ರೂ.ಗೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ನೀಡುವ ಕುರಿತಾಗಿ ಹೇಳಿಕೊಂಡಿದ್ದರು. ಇದೀಗ, ರಾಜಸ್ಥಾನದ ಬಳಿಕ ಗೋವಾದಲ್ಲಿಯೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯು ಕೂಡ ಮಾತುಗಳು ಕೇಳಿ ಬರುತ್ತಿವೆ. ಅಷ್ಟೆ ಅಲ್ಲದೇ, 500 ರೂ.ಗೆ ಗ್ಯಾಸ್ ಸಿಲಿಂಡರ್ ಲಭ್ಯವಾಗುವಂತೆ ಮಾಡುವುದಾಗಿ ಈ ಪತ್ರಗಳಲ್ಲಿ ಹೇಳಲಾಗಿದೆ ಎನ್ನಲಾಗಿದೆ.
ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ದರ ಗಗನಮುಖಿಯಾಗಿರುವ ಕುರಿತು ಪಾಟ್ಕರ್ ಅವರು ಹೇಳಿದ್ದಾರೆ ಎನ್ನಲಾಗಿದೆ. 500 ರೂಪಾಯಿಗೆ ಸಿಲಿಂಡರ್ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದು, ರಾಹುಲ್ ಗಾಂಧಿ ಬರೆದ ಪತ್ರವನ್ನು ಪ್ರತಿ ಮನೆಗೂ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.
ರಾಜಸ್ಥಾನದ ಬಳಿಕ ಗೋವಾದಲ್ಲಿಯೂ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಬಗ್ಗೆ ಇದೀಗ ಕಾಂಗ್ರೆಸ್ ಪಕ್ಷ ದಲ್ಲಿಯೂ ಕೂಡ ಚರ್ಚೆ ನಡೆಯುತ್ತಿದೆ. ಈ ಕುರಿತಾಗಿ ರಾಹುಲ್ ಗಾಂಧಿ ಬರೆದ ಪತ್ರಗಳನ್ನು ಗೋವಾ ಕಾಂಗ್ರೆಸ್ ಪಕ್ಷದ ಪರವಾಗಿ ರಾಜ್ಯದಲ್ಲಿ ಹಂಚಲಾಗುತ್ತಿದೆ. 2024ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 500 ರೂ.ಗೆ ಗ್ಯಾಸ್ ಸಿಲಿಂಡರ್ ಲಭ್ಯವಾಗುವಂತೆ ಮಾಡುವುದಾಗಿ ಈ ಪತ್ರಗಳಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ರಾಜಧಾನಿ ಪಣಜಿಯಲ್ಲಿ ಕಾಂಗ್ರೆಸ್ ನಿಂದ ಹಾತ್ ಸೇ ಹಾತ್ ಜೋಡೋ ಕಾರ್ಯಕ್ರಮ ಶುರುವಾಗಿದ್ದು, ಇದು ಭಾರತ್ ಜೋಡೋ ಯಾತ್ರೆಯ ಫಾಲೋ ಅಪ್ ಎನ್ನಲಾಗುತ್ತಿದೆ. ಮುಂದಿನ ಎರಡು ತಿಂಗಳ ಕಾಲ ಈ ಕಾರ್ಯಕ್ರಮವನ್ನು ಮುಂದುವರೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ಮಾತನಾಡಿ, ‘ಹಾತ್ ಸೇ ಹಾತ್ ಜೋಡೋ ‘ ಕಾರ್ಯಕ್ರಮದ ರಾಹುಲ್ ಗಾಂಧಿಯವರ ಪತ್ರ ಹಂಚುವುದೇ ಮುಖ್ಯ ಉದ್ದೇಶ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಒಟ್ಟಿನಲ್ಲಿ ಇದೊಂದು ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯ್ರಮವಿರಬಹುದೇನೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದರು ಅಚ್ಚರಿಯಿಲ್ಲ.