ನಿಮಗೇನಾದರೂ ಡಬಲ್ ಚಿನ್ ಸಮಸ್ಯೆ ಇದೆಯೇ ? ಹಾಗಾದರೆ ಈ ಆಹಾರ ಇಂದೇ ಬಿಟ್ಟರೆ ಉತ್ತಮ
ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್ ಫುಡ್ ತಿನ್ನದೆ ಇದ್ದರೆ ಮನಸ್ಸಿಗೆ ಸಮಾಧಾನವೇ ಇರದು. ಇಂದಿನ ಜೀವನಶೈಲಿಯಲ್ಲಿ ಹೆಚ್ಚಿನವರು ಫಾಸ್ಟ್ ಫುಡ್ ಗೆ ಒಗ್ಗಿಕೊಂಡಿದ್ದು ಆಹಾರಕ್ರಮ, ಕೆಲಸದ ಒತ್ತಡ, ನಿದ್ರಾ ಹೀನತೆ ಹೀಗೆ ನಾನಾ ಕಾರಣಗಳಿಂದ ಅನೇಕ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತಿದೆ.
ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳ ಜೊತೆಗೆ ಆನುವಂಶಿಕ ಅಂಶಗಳು ಮುಖದ ಮೇಲೆ ಕೊಬ್ಬು ಶೇಖರಣೆಗೆ ಕಾರಣವಾಗುತ್ತದೆ. ಇದನ್ನು ಡಬಲ್ ಚಿನ್ ಎಂದು ಕೂಡ ಕರೆಯಲಾಗುತ್ತದೆ. ಜಂಕ್ ಫುಡ್ಸ್, ಚಾಟ್ಸ್ ಎಂದರೆ ಸಾಕು ಅದರ ಎದುರು ಉಳಿದೆಲ್ಲವೂ ಸಪ್ಪೆ ಎನ್ನುವ ಮಟ್ಟಿಗೆ ಹೆಚ್ಚಿನವರು ಫಾಸ್ಟ್ ಫುಡ್ ನ ಕಡೆಗೆ ವಾಲಿ ಬಿಟ್ಟಿದ್ದಾರೆ. ಆದರೆ, ಇವು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸಲು ಕಾರಣವಾಗುತ್ತದೆ. ಕ್ರಮೇಣ ಈ ಆಹಾರ ಕ್ರಮಗಳಿಂದ ಡಬಲ್ ಚಿನ್ ಸಮಸ್ಯೆ ಉಂಟಾಗಲು ಕಾರಣವಾದರೂ ಅಚ್ಚರಿಯಿಲ್ಲ.
ದೇಹವೆಂಬ ಈ ಸುಂದರ ಶರೀರದ ಕಾಳಜಿ ಮಾಡೋದು ಪ್ರತಿಯೊಬ್ಬರಿಗೂ ಅನಿವಾರ್ಯ. ಹೀಗಾಗಿ, ಆರೋಗ್ಯವೇ ಭಾಗ್ಯ ಎಂಬಂತೆ ಡಬಲ್ ಚಿನ್ ಎದುರಾಗದಂತೆ ತಡೆಯಲು ನೀವು ಕೆಲ ಸರಳ ವಿಧಾನ ಅನುಸರಿಸಬೇಕಾಗುತ್ತದೆ.ಎಣ್ಣೆಯ ಮಹಿಮೆ ಅರಿಯದವರು ಇರಲು ಸಾಧ್ಯವೇ ಇಲ್ಲ. ಮದ್ಯ ಪ್ರಿಯರಿಗೆ ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ದಿನವೇ ಅಪೂರ್ತಿಯದ ಅನುಭವ ಉಂಟಾಗುತ್ತದೆ. ನೀವು ಕೂಡಾ ಎಣ್ಣೆ ಪ್ರಿಯರಾಗಿದ್ದರೆ, ಈ ಮಾಹಿತಿ ತಿಳಿದುಕೊಳ್ಳೋದು ಉತ್ತಮ. ಆಲ್ಕೋಹಾಲ್ ಬಹಳಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹೀಗಾಗಿ, ಆಲ್ಕೋಹಾಲ್ ಸೇವನೆಯಿಂದ ತೂಕ ಹೆಚ್ಚಾಗುವುದಲ್ಲದೆ ಮುಖದ ಮೇಲೆ ಕೊಬ್ಬು ಕೂಡ ಹೆಚ್ಚಾಗುತ್ತದೆ. ಇದರಿಂದ ಅನಗತ್ಯ ತೂಕ ಹೆಚ್ಚಳ ದ ಸಮಸ್ಯೆ ಉಂಟಾಗುತ್ತದೆ.
ಸೋಯಾದಲ್ಲಿ ಸೋಡಿಯಂ ಅಧಿಕವಾಗಿರುವುದರಿಂದ, ಇದಲ್ಲದೆ ಹೆಚ್ಚು ಉಪ್ಪನ್ನು ಸೇವನೆ ಮಾಡುವುದು ಗಲ್ಲದಲ್ಲಿ ಕೊಬ್ಬು ಶೇಖರಣೆಯಾವುದಕ್ಕೆ ಆಸ್ಪದ ಕೊಟ್ಟಂತೆ ಆಗುತ್ತದೆ. ಸೋಯಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದರೂ ಕೂಡ ಇದರಿಂದ ರಕ್ತದೊತ್ತಡ ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಅದನ್ನು ತಪ್ಪಿಸುವುದು ಒಳ್ಳೆಯದು. ಮನೆಯಲ್ಲಿ ಒಬ್ಬಂಟಿಯಾಗಿ ಇದ್ದಾಗ ಅಡುಗೆ ಮಾಡುವುದೆಂದರೆ ಸಾಕು ಆಲಸ್ಯ ಕಾಡುತ್ತದೆ. ಹೀಗಾಗಿ, ಎಷ್ಟೋ ಸಲ ಮ್ಯಾಗಿ ಇಲ್ಲವೇ ಬ್ರೆಡ್ ಸ್ಯಾಂಡ್ ವಿಚ್ ತಿನ್ನುವ ಅಭ್ಯಾಸ ಸಹಜವಾಗಿ ರೂಡಿಸಿಕೊಳ್ಳುತ್ತಾರೆ. ಆದರೆ, ಜಂಕ್ ಫುಡ್ಗಳು ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಸೋಡಿಯಂ ಅಧಿಕವಾಗಿರುವ ಹಿನ್ನೆಲೆ ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ, ಇದರ ಸೇವನೆ ಮಾಡದಿರುವುದು ಒಳ್ಳೆಯದು.
ಕೆಲವು ಆಹಾರಗಳಲ್ಲಿ ರುಚಿ ಹೆಚ್ಚಿಸುವ ಸಲುವಾಗಿ ಸೋಯಾಸಾಸ್ ಅನ್ನು ಬಳಕೆ ಮಾಡಲಾಗುತ್ತದೆ. ಆದರೆ, ಇದು ದೇಹದ ಕೊಬ್ಬನ್ನು ಹೆಚ್ಚಿಸುವ ಜೊತೆಗೆ ಮುಖದಲ್ಲಿ ಡಬಲ್ ಚಿನ್ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ.ನಾನ್ ವೆಜ್ ಎಂದರೆ ಸಾಕು ಬಾಯಿ ಚಪ್ಪರಿಸಿಕೊಂಡು ತಿನ್ನುವ ಖಾದ್ಯಗಳಲ್ಲಿ ಒಂದು.ಕುರಿ, ಮತ್ತು ಹಂದಿಮಾಂಸದಂತಹ ಆಹಾರವನ್ನು ಅತಿಯಾಗಿ ನೆಚ್ಚಿಕೊಂಡು ತಿನ್ನುವ ಅಭ್ಯಾಸ ನಿಮಗಿದ್ದರೆ ಈ ಮಾಹಿತಿ ತಿಳಿದುಕೊಳ್ಳಿ. ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನಲ್ಲಿ ಸಮೃದ್ಧವಾಗಿರುವ ಕೆಂಪು ಮಾಂಸವು ಮುಖದಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ. ಹೀಗಾಗಿ, ಹಿತ ಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.
ಪ್ರೋಟೀನ್‌ನ ಪ್ರಮುಖ ಮೂಲವಾಗಿರುವ ರೆಡ್ ಮೀಟ್ ಆರೋಗ್ಯಕ್ಕೆ ಉತ್ತಮ ಆಹಾರವಾಗಿದ್ದು, ಆದ್ರೆ ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಅತಿಯಾದ ಸೇವನೆಯು ದೇಹದ ಕೊಬ್ಬನ್ನು ಹೆಚ್ಚಿಸಿ ಮುಖದಲ್ಲಿ ಡಬಲ್ ಚಿನ್ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ, ಮೇಲೆ ತಿಳಿಸಿದ ಆಹಾರ ಪದಾರ್ಥಗಳ ಸೇವನೆ ಯಲ್ಲಿ ಜಾಗ್ರತೆ ವಹಿಸಿದರೆ ಡಬಲ್ ಚಿನ್ ಎದುರಾಗದಂತೆ ತಡೆಯಬಹುದು.